ಕೆವಿನ್ ಕೇರ್ ದ್ರವ ಕ್ಯಾಂಡಿ

7

ಕೆವಿನ್ ಕೇರ್ ದ್ರವ ಕ್ಯಾಂಡಿ

Published:
Updated:

ಶಾಂಪು ಮತ್ತಿತರ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಹೆಸರುವಾಸಿಯಾದ ಕೆವಿನ್ ಕೇರ್ ದೇಶದಲ್ಲೆೀ ಮೊಟ್ಟ ಮೊದಲ ಬಾರಿಗೆ ದ್ರವ ರೂಪದ ಕ್ಯಾಂಡಿ ಕ್ಷೇತ್ರಕ್ಕೆ ಕಾಲಿಟ್ಟಿದೆ. ಫನ್‌ಫಿಲ್ಸ್ ಹೆಸರಿನಲ್ಲಿ ದ್ರವ ಕ್ಯಾಂಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ನೈಜ ಹಣ್ಣಿನಿಂದ ಸಿದ್ಧಪಡಿಸಿದ ಸ್ಟ್ರಾಬೆರಿ, ನಿಂಬೆ, ಹಸಿರು ಮಾವು, ಸಿಹಿ ಮಾವು, ಕಿತ್ತಳೆ ಹಾಗೂ ದ್ರಾಕ್ಷಿ ಎಂಬ ಆರು ವಿಧದ ಜನಪ್ರಿಯ ಫನ್‌ಫಿಲ್ಸ್‌ಗಳಿವೆ. ಸ್ವಾದಿಷ್ಟವಾಗಿದ್ದು, ಮೂಲ ರುಚಿ, ಪರಿಮಳ ಹೊಂದಿವೆ. ಉದ್ದನೆ ಸ್ಯಾಚೆಟ್ ರೂಪದಲ್ಲಿದ್ದು ಮಕ್ಕಳಿಗೆ ಪ್ರಿಯವಾಗಲಿದೆ.ಇದರಲ್ಲಿರುವ ಪ್ರತಿಯೊಂದು ಅಂಶವೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ಯಾಂಡಿಗಳಿಗಿಂತ ಭಿನ್ನವಾಗಿದೆ. ಫನ್‌ಫಿಲ್ಸ್‌ಗಳು ಎಲ್ಲಾ ಪುಟ್ಟ ಅಂಗಡಿಗಳಲ್ಲಿ ಕೇವಲ 1 ರೂಪಾಯಿ ದರದಲ್ಲಿ ಲಭ್ಯ ಎನ್ನುತ್ತದೆ ಕಂಪೆನಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry