ಭಾನುವಾರ, ಏಪ್ರಿಲ್ 2, 2023
31 °C

ಕೇಕ್‌ನಲ್ಲಿ ಅರಳಿರುವ ತಾಜ್ ಪ್ಯಾಲೇಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಕ್‌ನಲ್ಲಿ ಅರಳಿರುವ ತಾಜ್ ಪ್ಯಾಲೇಸ್

ಬೆಂಗಳೂರು:  ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಬ್ಲೂಹಿಲ್ ಗ್ರೂಪ್ ಏರ್ಪಡಿಸಿರುವ ಬೃಹತ್ ಕೇಕ್ ಪ್ರದರ್ಶನ ಶುಕ್ರವಾರದಿಂದ ಕಂಠೀರವ ಕ್ರೀಡಾಂಗಣದ ಎದುರಿಗಿರುವ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಆರಂಭಗೊಳ್ಳಲಿದೆ.

ಎರಡು ವರ್ಷಗಳ ಹಿಂದೆ ಭಯೋತ್ಪಾದಕರ ದಾಳಿಗೆ ತುತ್ತಾಗಿ ವಿಶ್ವದ ಗಮನ ಸೆಳೆದಿದ್ದ ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಪ್ರತಿಕೃತಿ ಪ್ರದರ್ಶನದ ಮುಖ್ಯ ಆಕರ್ಷಣೆ. 22 ಅಡಿ ಉದ್ದ, 14 ಅಡಿ ಎತ್ತರ ಮತ್ತು 18 ಅಡಿ ಅಗಲದ ಈ ಪ್ರತಿಕೃತಿ ನಿರ್ಮಾಣಕ್ಕೆ 8 ಟನ್ ಸಕ್ಕರೆ ಬಳಸಲಾಗಿದೆ ಎಂದು ಬ್ಲೂಹಿಲ್ ಗ್ರೂಪ್ ಅಧ್ಯಕ್ಷ ಹಾಗೂ ನೀಲಗಿರಿ ರೂವಾರಿ ಸಿ. ರಾಮಚಂದ್ರನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರದರ್ಶನದ ಮತ್ತೊಂದು ಮುಖ್ಯ ಆಕರ್ಷಣೆ ಸಂತಾ ವಿಲ್ಲಾ. ಮಕ್ಕಳ ಮೆಚ್ಚಿನ ಸಂತಾಕ್ಲಾಸ್ ಅಜ್ಜನ ಮನೆಯಿದು. 30 ಅಡಿ ಉದ್ದ, 12 ಅಡಿ ಎತ್ತರ ಹಾಗೂ 20 ಅಡಿ ಅಗಲದ ಈ ಮನೆ ನಿರ್ಮಾಣಕ್ಕೆ 3 ಟನ್ ಸಕ್ಕರೆ ಬಳಸಲಾಗಿದೆ. ಈ ಸಂತಾ ವಿಲ್ಲಾದಲ್ಲಿ ಸಂತಾಕ್ಲಾಸ್ ಗೊಂಬೆ ಅಡ್ಡಾಡುತ್ತಾ ಇರುತ್ತದೆ. ಹಂಪ್ಟಿಡಂಪ್ಟಿ, ಬನ್ನಿ ಹೌಸ್, ಬೋಟ್‌ಹೌಸ್ ಇತ್ಯಾದಿ ಮಾದರಿಗಳಲ್ಲಿಯೂ ಪ್ರತಿಕೃತಿ ನಿರ್ಮಿಸಲಾಗಿದೆ.

ಕೇಕ್ ಪ್ರದರ್ಶನ ಡಿಸೆಂಬರ್ 27ರವರೆಗೆ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.