ಶುಕ್ರವಾರ, ಮೇ 14, 2021
27 °C

ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ: ಸಚಿವ ವೀರಭದ್ರ ಸಿಂಗ್ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆ ಪ್ರಚಾರದ ವೇಳೆ ಸಂಸದರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಅವರು ಬೆಷರತ್ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ವೀರಭದ್ರ ಸಿಂಗ್ ಭಾನುವಾರ ಬೆದರಿಕೆ ಹಾಕಿದ್ದಾರೆ.ತಮ್ಮ `ಅವಹೇಳನಕಾರಿ~ ಹೇಳಿಕೆಗೆ ಕುರಿತು ಬೇಷರತ್ ಕ್ಷಮೆಯಾಚಿಸಬೇಕು, ಇಲ್ಲದೇ ಹೋದರೆ ಕಾನೂನು ಸಮರಕ್ಕೆ ಸಿದ್ಧರಾಗಬೇಕೆಂದು ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದು ಅವರ ಪ್ರತಿಕ್ರಿಯೆಗೆ ಕಾಯುತ್ತಿರುವೆ ಎಂದು ಸಿಂಗ್ ತಿಳಿಸಿದರು.ಇದಕ್ಕೂ ಮೊದಲು ಕೇಜ್ರಿವಾಲ್ ಅವರಿಗೆ ಪತ್ರವೊಂದನ್ನು ಬರೆದಿದ್ದ ಸಿಂಗ್ ಅವರು `ಆಧಾರ ರಹಿತ~ ಆರೋಪ ಮಾಡಿದ್ದಕ್ಕಾಗಿ ಬೆಷರತ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದರು.ಹಿಮಾಚಲ ಪ್ರದೇಶ ಕ್ಷೇತ್ರದ ಸಂಸದರಾಗಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ವೀರಭದ್ರ ಸಿಂಗ್ ಅವರು ಅಣ್ಣಾ ತಂಡ 14 ಭ್ರಷ್ಟ ಸಂಸದರ ವಿರುದ್ಧ ದೂರು ದಾಖಲಿಸಬೇಕೆಂದು ತಯಾರಿಸಿದ ಸಂಸದರ ಪಟ್ಟಿಯಲ್ಲಿರುವವರಲ್ಲಿ ಒಬ್ಬರಾಗಿದ್ದಾರೆ.ವೀರಭದ್ರ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ಅವರು `ವಾರದೊಳಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಆದ್ದರಿಂದ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ~ ಎಂದು ಹೇಳಿದ್ದಾರೆ.ಕೇಜ್ರಿವಾಲ್ ಹೇಳಿಕೆ ವಿರುದ್ದ ಕಾಂಗ್ರೆಸ್ ಸಂಸದರಾದ ಸಜ್ಜನ್ ಕುಮಾರ್, ಜಗದಂಬಿಕಾ ಪಾಲ್ ಮತ್ತು ಆರ್‌ಜೆಡಿಯ ಸಂಸದರಾದ ರಾಮಕೃಪಾಲ್ ಯಾದವ್ ಹಾಗೂ ರಾಜನೀತಿ ಪ್ರಸಾದ್ ಅವರು ಹಕ್ಕುಚ್ಯುತಿ ನೋಟಿಸ್ ಜಾರಿ ಮಾಡಿದ್ದಾರೆ.ಫೆಬ್ರುವರಿ 25 ರಂದು ಚುನಾವಣೆಯ ಪ್ರಚಾರದ ವೇಳೆ ಕೇಜ್ರಿವಾಲ್ ಅವರು `ಸಂಸತ್ತಿನಲ್ಲಿರುವ 163 ಸಂಸದರ ವಿರುದ್ಧ ಘೋರ ಅಪರಾಧಗಳ ಆರೋಪವಿದೆ. ಸಂಸತ್ತಿನಲ್ಲಿ ಅತ್ಯಾಚಾರಿಗಳು, ಹಂತಕರು ಹಾಗೂ ಲೂಟಿಕೋರರು ತುಂಬಿಕೊಂಡಿದ್ದಾರೆ. ಅವರಿಂದ ಸಂಸತ್ತಿನಲ್ಲಿ ಲೋಕಪಾಲ್ ಮಸೂದೆ ಮಂಡನೆಯಾಗುವುದನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ? ಬಡತನ ಹಾಗೂ ಭ್ರಷ್ಟಾಚಾರದಿಂದ ನೀವು ಮುಕ್ತಿ ಹೊಂದುವುದನ್ನು ಹೇಗೆ ಎದುರು ನೋಡುತ್ತಿರಿ` ಎಂದು ಹೇಳಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.