ದಾವಣಗೆರೆ: `ಸುಮಾರು 460 ಕೋಟಿ ವರ್ಷಗಳಿಂದ ರಕ್ಷಿಸಿಕೊಂಡು ಬಂದಿದ್ದ ಅರಣ್ಯ ಪರಿಸರವು ಕೈಗಾರಿಕಾ ಚಟುವಟಿಕೆ ಆರಂಭವಾಗು ತ್ತಿದ್ದಂತೆಯೇ ವಿನಾಶ ಕಾಣ ಲಾರಂಭಿಸಿತು. ಇದರ ದುಷ್ಪರಿಣಾಮ ವನ್ನು ಪ್ರಕೃತಿ ವಿಕೋಪಗಳ ಮೂಲಕ ನಾವು ಕಾಣುತ್ತಿದ್ದೇವೆ. ಇದರ ಭೀಕರತೆ ತೀವ್ರವಾಗುವ ಮೊದಲೇ ಎಚ್ಚರ ಗೊಳ್ಳಬೇಕು' ಎಂದು ವ್ಯಂಗ್ಯಚಿತ್ರಕಾರ ಎಚ್.ಬಿ. ಮಂಜುನಾಥ್ ಹೇಳಿದರು.

ನಗರದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಹಿಮಾಲಯನ್ ಸಾಹಸ ಮತ್ತು ಪ್ರಕೃತಿ ಅಕಾಡೆಮಿ ಈಚೆಗೆ ಏರ್ಪಡಿಸಿದ್ದ `ವನಮಹೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿ ಮೇಲೆ ಮಾನವರಿಗಿಂತ ನೂರಾರು ಕೋಟಿ ವರ್ಷಗಳ ಮೊದಲೇ ಇತರ ಪ್ರಾಣಿ ಸಂಕುಲ ಸೃಷ್ಟಿಯಾಗಿದೆ. ಹೀಗಾಗಿ, ಹೆಚ್ಚಿನ ಹಕ್ಕು ಪ್ರಾಣಿಗಳಿಗಿದೆ. ಪ್ರಾಣಿ, ಪಶುಗಳ ಯೋಗ ಕ್ಷೇಮ ಕಾಪಾಡಬೇಕಾದದ್ದು ಮಾನವರ ಕರ್ತವ್ಯ. ಈ ಮೂಲಕ ಪರಿಸರದಲ್ಲಿ ಅಸಮತೋಲನ ಕಾಯ್ದುಕೊಳ್ಳಬೇಕು ಎಂದರು.

ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಕೊಟ್ರೇಶ್, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಟಿ.ಮಹೇಶ್ವರಗೌಡ ಮಾತನಾಡಿದರು.

ಪಶು ವೈದ್ಯಕೀಯ ಅಧಿಕಾರಿಗಳಾದ ಡಾ.ಕೆ.ಶಿವಪ್ರಸಾದ್, ಡಾ.ನಾಗರಾಜ್, ಡಾ.ಜಿ.ಎಸ್.ಶಿವಕುಮಾರ್, ಡಾ.ಟಿ. ಎಚ್.ಶಂಕರಪ್ಪ, ಡಾ.ಬಸವರಾಜಪ್ಪ, ಡಾ.ನಿತಿನ್, ರಮೇಶ್, ಜೇಸುದಾಸ್ ಉಪಸ್ಥಿತರಿದ್ದರು. ಕೊಂಡಜ್ಜಿ ರಾಜಶೇಖರ್ ಪ್ರಾರ್ಥಿಸಿದರು. ಜಿ.ಟಿ.ಮಲ್ಲೇಶ್ ಸ್ವಾಗತಿಸಿದರು. ನೀಲಕಂಠಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.