ಸಿದ್ದಾಪುರ:  `ಕೊಕೊ ಮಿಶನ್ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಪ್ರಾರಂಭ ಮಾಡಲಾಗು ತ್ತಿದ್ದು, ರೈತರು ಬೆಂಬಲ ನೀಡಿದಲ್ಲಿ ಬರುವ ವರ್ಷದಿಂದ ಕಾಳುಮೆಣಸು ಯೋಜನೆಯನ್ನು ಜಾರಿ ಮಾಡು ತ್ತೇವೆ~ ಎಂದು ಸಂಸದ ಅನಂತಕು ಮಾರ್ ಹೆಗಡೆ ನುಡಿದರು.

ಕೊಚ್ಚಿಯ ಕೊಕೊ ಮತ್ತು ಗೇರು ಅಭಿವೃದ್ಧಿ ನಿರ್ದೇಶನಾಲಯದ ಸಹ ಯೋಗದಲ್ಲಿ, ಶಿರಸಿಯ ಕದಂಬ ಫೌಂಡೇಶನ್ನ ಆಶ್ರಯದಲ್ಲಿ ಅನುಷ್ಠಾ ನಗೊಳಿಸಲಾಗುತ್ತಿರುವ ಕೊಕೊ ಬೆಳೆ ವಿಸ್ತರಣೆ ಕಾರ್ಯ ಕ್ರಮದ ಉದ್ಘಾ ಟನೆ ಮತ್ತು ತರಬೇತಿ ಶಿಬಿರವನ್ನು ತಾಲ್ಲೂಕಿನ ಕವಲ ಕೊಪ್ಪದ ಸಿದ್ಧಿ ವಿನಾಯಕ ದೇವಾಲಯದಲ್ಲಿ ಗುರು ವಾರ ಉದ್ಘಾಟಿಸಿ ಅವರು ಮಾತ ನಾಡಿದರು.

`ಕೊಕೊ ಮಿಶನ್ ಯೋಜನೆಯ ಮೂಲಕ ಕೊಕೊ ಮತ್ತು ಗೇರು ಅಭಿವೃದ್ಧಿ ನಿರ್ದೇಶನಾಲಯ ಮೊದಲ ಬಾರಿಗೆ ರೈತರ ಮನೆಬಾಗಿಲಿಗೆ ಬರುತ್ತಿದೆ. ಕೊಕೊ ಬೆಳೆಯುವು ದರಿಂದ ಕೇವಲ ಆರ್ಥಿಕ ಲಾಭ ಮಾತ್ರವಲ್ಲ, ಹಲವು ರೀತಿಯ ಉಪ ಯೋಗವಿದೆ.

ಇಡೀ ದೇಶದಲ್ಲಿ ಲಭ್ಯ ವಿರುವ ಜಮೀನಿನಲ್ಲಿ ಕೊಕೊ ಬೆಳೆ ದರೂ ಅದರ ಬೇಡಿಕೆಯನ್ನು ಸರಿ ದೂಗಿಸಲು ಸಾಧ್ಯವಿಲ್ಲ. ಜಗತ್ತಿನ ಕೊಕೊ ಬೇಡಿಕೆ ಶೇ.30ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಉತ್ಪಾದನೆ ಕೇವಲ ಶೇ.10ರಷ್ಟು ಏರಿಕೆಯಾಗುತ್ತಿದೆ~ ಎಂದರು.

`ಕೊಕೊ ಬೆಳೆಯನ್ನು ಇಂಡೊ ನೇಷ್ಯಾದಲ್ಲಿಯೂ ಬೆಳೆಯಲಾಗು ತ್ತಿದೆ. ಅಲ್ಲಿ ಬೆಳೆದ ಕೊಕೊದ ಚರಟ ಯಾವುದೇ ಉಪಯೋಗಕ್ಕೆ ಬರುವು ದಿಲ್ಲ. ಆದರೆ ನಮ್ಮ ಜಿಲ್ಲೆಯಲ್ಲಿ ಬೆಳೆದ ಕೊಕೊದ ಚರಟ ಕೂಡ ಉಪ ಯೋಗಕ್ಕೆ ಬರುತ್ತದೆ~ ಎಂದರು.

`ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಹೈನುಗಾರಿಕೆಯಲ್ಲಿ ವಿನೂತನ ಪ್ರಯೋಗ ಮಾಡಲಿದ್ದೇವೆ. ಈ ಎಲ್ಲ ಕಾರ್ಯಕ್ರಮಗಳ ಮೂಲಕ ಹಳ್ಳಿಗಳಿಗೆ ಜೀವ ನೀಡಬೇಕು ಎಂಬುದು ನನ್ನ ಬಯಕೆ. ಉತ್ತರ ಕನ್ನಡ ಜಿಲ್ಲೆ ಯಲ್ಲಿಯೂ ಮುತ್ತು ಬೆಳೆಯಬೇಕು. ಮುಂದೊಂದು ದಿನ ನಮ್ಮ ಜಿಲ್ಲೆ ಯಲ್ಲಿಯೇ ಮುತ್ತಿನ ಮಾರಾಟ ನಡೆ ಯಬೇಕು ಎಂಬ ಕನಸು ನನಗಿದೆ~ ಎಂದು ಸಂಸದರು ನುಡಿದರು.

ಮುಖ್ಯ ಅತಿಥಿಗಳಾಗಿ ಶಿರಸಿ ವಿಭಾಗದ ಸಹಾಯಕ ಆಯುಕ್ತ ಗೌತಮ್ ಬಗಾದಿ, ತಾ.ಪಂ.ಉಪಾಧ್ಯಕ್ಷ ಪ್ರಸನ್ನ ಹೆಗಡೆ, ಸದಸ್ಯ ಬಷೀರ್ ಸಾಬ್, ತಹಸೀಲ್ದಾರ ಗಣಪತಿ ಕಟ್ಟಿನಕೆರೆ, ಬಿದ್ರಕಾನ ಗ್ರಾ.ಪಂ.ಅಧ್ಯಕ್ಷ ಬಾಬು ನಾಯ್ಕ, ಕ್ಯಾಡ್ಬರಿ ಸಂಸ್ಥೆಯ ವ್ಯವಸ್ಥಾಪಕ ಎನ್.ಪಿ.ಪ್ರಸಾದ್, ಕದಂಬ ಸಂಸ್ಥೆಯ ನಿರ್ದೇಶಕ ಸತೀಶ್ ಹೆಗಡೆ, ಕೃಷಿ ತಜ್ಞರಾದ ಎನ್.ಬಿ.ನಾಗರಾಜ ಮತ್ತು ಮೋಹನ್ದಾಸ ರೈ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಚ್.ಕೃಷ್ಣಪ್ಪ ಉಪಸ್ಥಿತರಿದ್ದರು. ಕೃಷಿಕ ಮಂಜುನಾಥ ಭಟ್ಟ ಅಧ್ಯಕ್ಷತೆ ವಹಿಸಿದ್ದರು.

ವಾಣಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಹೇಮಂತ ಹೆಗಡೆ ಸ್ವಾಗತಿಸಿದರು. ಕೃಷ್ಣಮೂರ್ತಿ ಮಡಿ ವಾಳ ವಂದಿಸಿದರು. ಮಹಾಬಲೇಶ್ವರ ನಾಯ್ಕ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.