ಕೊಟ್ಟೂರು: ನಮ್ಮ ರಾಜ್ಯದವರೇ ಆದ ಹೈ.ಕ.ಭಾಗದ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಖಾತೆ ಸಚಿವರಾಗುತ್ತಿದ್ದಂತೆ ಹೊಸಪೇಟೆ- ಕೊಟ್ಟೂರು- ಹರಿಹರ ಭಾಗದ ಜನರ ಮನಸ್ಸಿನಲ್ಲಿ ಆಶಾಭಾವನೆ ಚಿಗುರುತ್ತಿದೆ.

ಹೊಸಪೇಟೆ-ಕೊಟ್ಟೂರು ರೈಲು ಮಾರ್ಗ 1904ರಲ್ಲಿ ಆರಂಭವಾಗಿತ್ತು.1990ರ ಅವಧಿಯಲ್ಲಿ ಈ ಮಾರ್ಗ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಇಲಾಖೆ ರೈಲು ಸಂಚಾರ ಸ್ಧಗಿತಗೊಳಿಸಿತ್ತು. ಅಂದಿನ ಶಾಸಕರು ಹಾಗೂ ಸಂಘ ಸಂಸ್ಧೆಗಳು ತೀವ್ರ ಪ್ರತಿಭಟನೆಗಿಳಿದಾಗ ಅಂದು ನಮ್ಮ ರಾಜ್ಯದವರೇ ಆದ ರೈಲ್ವೆ ಸಚಿವ ಜಾಫರ ಶರೀಫ್ ನಿರ್ಧಾರ ಬದಲಿಸಿ ಹೊಸಪೇಟೆ-ಕೊಟ್ಟೂರು ಮಾರ್ಗ ಗೇಜ್ ಪರಿವರ್ತನೆ ಹಾಗೂ ಕೊಟ್ಟೂರು-ಹರಿಹರ ನೂತನ ಮಾರ್ಗಕ್ಕೆ ಅಡಿಗಲ್ಲು ಹಾಕಿ ಈ ಭಾಗದ ಜನರ ಕನಸಿಗೆ ನೀರೆರೆದರು.

ನೂತನ ಮಾರ್ಗದ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಕೊಟ್ಟೂರು-ಹಗರಿಬೊಮ್ಮನಹಳ್ಳಿ-ಹೊಸಪೇಟೆ ಭಾಗದ ಹೋರಾಟ ಸಮಿತಿಗಳು ಪುನಃ ಹೋರಾಟಕ್ಕೆ ಚಾಲನೆ ನೀಡಿದವು. ಇದರ ಪರಿಣಾಮ ಹೊಸಪೇಟೆಯಿಂದ ಹರಿಹರಕ್ಕೆ 135 ಕಿ.ಮೀ. ಉದ್ದದ ಕಾಮಗಾರಿ ಅನುಷ್ಠಾನಕ್ಕೆ ್ಙ100 ಕೋಟಿ ವೆಚ್ಚದ ಕ್ರಿಯಾ-ಯೋಜನೆ ರೂಪಿಸಿ ಭೂಸ್ವಾಧೀನಕ್ಕೆ ಇಲಾಖೆ ಮುಂದಾಯಿತು. ಅಂದಿನಿಂದ ಆಮೆ ವೇಗದಲ್ಲಿ ಸಾಗಿದ ಪರಿಣಾಮ ಇಂದು ್ಙ 800 ಕೋಟಿಗೂ ಅಧಿಕ ವೆಚ್ಚ ಮೀರಿದೆ.

ಕೊಟ್ಟೂರು ಪಟ್ಟಣವು ವಾಣಿಜ್ಯ ಬೆಳೆಗಳಿಗೆ ಪ್ರಸಿದ್ಧಿಯಾಗಿದೆ. ಸಾಕಷ್ಟು ಹತ್ತಿ ಗಿರಣಿಗಳಿವೆ. ಹೊಸಪೇಟೆ-ಕೊಟ್ಟೂರು-ಹರಿಹರ ಮಾರ್ಗ ಸುಮಾರು ಆರೆಂಟು ಜಿಲ್ಲೆಗಳ ಸಂಪರ್ಕ ಕಲ್ಪಿಸುವುದಲ್ಲದೇ ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರ ಮಂಗಳೂರಿಗೆ ಸಂಪರ್ಕ ದೊರೆಯುತ್ತದೆ.
ಜಿಲ್ಲೆಯಲ್ಲಿರುವ ಗಣಿ ಮತ್ತು ಕೈಗಾರಿಕೆಗಳಲ್ಲಿ ವಿವಿಧ ರಾಜ್ಯಗಳಿಂದ ಉದ್ಯೋಗವನ್ನರಿಸಿ ಬಂದಿರುವ ಜನರಿಗೆ ಹಾಗೂ ಸರಕು ಸಾಮಗ್ರಿಗಳ ಸಾಗಾಣಿಕೆಗೂ ಅನುಕೂಲವಾಗುತ್ತದೆ. ಸಾಗಾಣಿಕೆ ವೆಚ್ಚವೂ ಕಡಿಮೆಯಾಗಲಿದ್ದು ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ದೊರೆಯುತ್ತದೆ ಮತ್ತು ರಸ್ತೆಗಳು ಕೂಡ ಅದಿರು, ಉಕ್ಕು, ಸರಕು- ಸಾಮಗ್ರಿಗಳ ಲಾರಿಗಳ ಹಾವಳಿಯಿಂದ ಮುಕ್ತಿ ಪಡೆದು ರಸ್ತೆಗಳು ಸುಸ್ಥಿತಿಯಲ್ಲಿರುತ್ತವೆ.

ಇಲಾಖೆಯ ವಿಳಂಬ ನೀತಿಯಿಂದ ಹೊಸಪೇಟೆಯಿಂದ ಹರಿಹರದವರೆಗಿನ ಮಾರ್ಗದ ಉದ್ದಕ್ಕೂ ಇರುವ ರೈಲ್ವೆ ನಿಲ್ದಾಣಗಳು, ವಸತಿಗೃಹಗಳು, ಅಳವಡಿಸಿರುವ ಮೈಕ್ರೋವೇವ್ ಸಿಸ್ಟಮ್ಗಳು, ಜನರೇಟರ್ಗಳು ಉಪಯೋಗಕ್ಕೆ ಬಾರದ ಸ್ಧಿತಿ ತಲುಪಿವೆ. ಕೋಟ್ಯಂತರ ರೂಪಾಯಿ ವ್ಯಯ ಮಾಡಿ ನಿರ್ಮಿಸಿದ ರೈಲ್ವೆ ಪ್ಲಾಟ್ಫಾರ್ಮ್ಗಳು ಬಿಡಾಡಿ ದನ-ಕರುಗಳ, ಹಂದಿ-ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿವೆ.

ಸಾರ್ವಜನಿಕರು, ಸಂಘ-ಸಂಸ್ಧೆಗಳು, ಮಠಾಧೀಶರು, ಜನಪ್ರತಿನಿಧಿಗಳು ಹೋರಾಟಕ್ಕೆ ಮುಂದಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರೈಲ್ವೆ ಸಚಿವರ ಗಮನ ಸೆಳೆಯುವುದರ ಮುಖಾಂತರ ಈ ಭಾಗದ ಜನರ ಬಹುದಿನದ ಬಯಕೆ ಈಡೇರಿಕೆಗೆ ಶ್ರಮಿಸಬೇಕಾಗಿದೆ.
ಬ್ರಿಟಿಷರ ಕಾಲದಿಂದಲೂ ಸಂಚರಿಸುತ್ತಿದ್ದ ರೈಲಿಗೆ ಹೊಸ ರೈಲ್ವೆ ಸಚಿವರು ಚಾಲನೆ ನೀಡಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.