ಸೋಮವಾರ, ಜೂನ್ 14, 2021
21 °C
ಮಲೇಷ್ಯಾ ವಿಮಾನ ದುರಂತ

ಕೊನೆ ಗಳಿಗೆಯಲ್ಲಿ ಪಾರಾದ ಚುಕ್ಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕೊನೆ ಗಳಿಗೆಯಲ್ಲಿ ಪ್ರವಾಸ ರದ್ದುಪ­ಡಿಸಿದ ಪರಿಣಾಮ ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಮಲೇಷ್ಯಾ ವಿಮಾನ ದುರಂತದಿಂದ ಪಾರಾದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.ಮಂಗೋಲಿಯಾದ ಉಬಾನ್‌­ಬತ್ತಾರ್‌ನಲ್ಲಿ ಮಾರ್ಚ್ 10ರಿಂದ 14ರವರೆಗೆ ಏಷ್ಯಾ–ಫೆಸಿಫಿಕ್ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಸಂಘಟಿಸಿದೆ. ಕೃಷಿ ಸಮಸ್ಯೆ ಕುರಿತು ವಿಚಾರ ಮಂಡಿಸಲು ರೈತ ಸಂಘದ ಪರವಾಗಿ ಚುಕ್ಕಿ ಅವರು ಈ ಸಮ್ಮೇಳನದಲ್ಲಿ ಭಾಗವಹಿಸಬೇಕಿತ್ತು.ನಾಪತ್ತೆಯಾಗಿರುವ ಮಲೇಷ್ಯಾ ವಿಮಾನದಲ್ಲಿಯೇ ತೆರಳಲು ಅವರು ಸಿದ್ಧತೆ ನಡೆಸಿದ್ದರು. ಆದರೆ, ಅಮೃತಭೂಮಿಯಲ್ಲಿ ಹಮ್ಮಿಕೊಂಡಿದ್ದ ರೈತ ಸಂಘದ ಕಾರ್ಯ ಚಟುವಟಿಕೆಗಳ ಸಭೆಯ ಹಿನ್ನೆಲೆಯಲ್ಲಿ ಮಾರ್ಚ್‌ 6ರಂದೇ ಅವರು ಪ್ರವಾಸ ರದ್ದುಪಡಿ­ಸಿದ್ದರು. ಹೀಗಾಗಿ, ಅವರು ದುರಂತದಿಂದ ಪಾರಾಗಿದ್ದಾರೆ.‘ಅಮೃತಭೂಮಿಯಲ್ಲಿ ರೈತ ಸಂಘದ ಕಾರ್ಯ ಚಟುವಟಿಕೆ ಬಗ್ಗೆ ಚರ್ಚಿಸಲು ವರಿಷ್ಠರೊಂದಿಗೆ ಸಭೆ ನಿಗದಿಯಾ­ಗಿದ್ದರಿಂದ ಅಂತಿಮ ಕ್ಷಣದಲ್ಲಿ ಪ್ರವಾಸ ರದ್ದುಪಡಿಸಿದೆ. ಹೀಗಾಗಿ, ನಾನು ಬದುಕುಳಿದೆ’ ಎಂದು ಚುಕ್ಕಿ ನಂಜುಂಡ­ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.