ಬೆಂಗಳೂರು: ಟೆಲಿಗ್ರಾಂ ಸೇವೆಯ ಕೊನೆಯ ದಿನವಾದ ಭಾನುವಾರ ನಗರದ ಕಬ್ಬನ್ ರಸ್ತೆಯ ಬಿಎಸ್ಎನ್ಎಲ್ ಕಚೇರಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಈ ಐತಿಹಾಸಿಕ ಸೇವೆಯ ಮೂಲಕ ತಮ್ಮ ಆಪ್ತರಿಗೆ ಸಂದೇಶ ಕಳಿಸಿದರು. ಈ ಮೂಲಕ ಇತಿಹಾಸದ ಪುಟಕ್ಕೆ ಸೇರುವ ಸಂದೇಶ ಸೇವೆಯ ಜತೆಗೆ ತಮ್ಮ ನಂಟನ್ನು ದಾಖಲಿಸಿ ಕೊಂಡರು.

ಬೆಳಿಗ್ಗೆ ಎಂಟು ಗಂಟೆಯಿಂದಲೇ ಕಚೇರಿಯಲ್ಲಿ ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಎಂದೂ ಟೆಲಿಗ್ರಾಂ ಕಳಿಸದ ಅನೇಕರು ಕೊನೆಯ ಗಳಿಗೆಯಲ್ಲಿ ಸಂದೇಶ ಕಳಿಸುವ ಮೂಲಕ ವಿಶಿಷ್ಟ ಸಂತೋಷ ಅನುಭವಿಸಿ ಪುಳಕ ಗೊಂಡರು.

`ನಾನು ಜೀವನದಲ್ಲಿ ಎಂದೂ ಟೆಲಿಗ್ರಾಂ ಕಳಿಸಿರಲಿಲ್ಲ. ಟೆಲಿಗ್ರಾಂ ಎಂದರೆ ಕೇವಲ ಸಾವಿನ ಸುದ್ದಿ ಹೊತ್ತು ತರುವ ಮಾಧ್ಯಮ ಎಂಬ ಭಾವನೆ ಇತ್ತು. ಆದರೆ, ಇಂದು ಮುಂಬೈನ ಗೆಳತಿಗೆ ಶುಭಾಶಯ ಸಂದೇಶ ಕಳಿಸಿದೆ. `ಹ್ಯಾಪಿ ಡೇಸ್, ಮೈ ಸ್ವೀಟ್ ಹಾರ್ಟ್' ಎಂಬ ಸಂದೇಶವನ್ನು ಗೆಳತಿಗೆ ಕಳಿಸಿದ್ದೇನೆ. ಈ ಮೂಲಕ ಟೆಲಿಗ್ರಾಂ ಸೇವೆಯ ಅಂತಿಮ ದಿನ ನಾನೂ ಟೆಲಿಗ್ರಾಂ ಕಳಿಸಿದೆ ಎಂಬ ವಿಚಿತ್ರ ಸಂಭ್ರಮ ನನ್ನೊಳಗೆ ಮನೆ ಮಾಡಿದೆ' ಎಂದು ಆರ್.ಸಿ.ಕಾಲೇಜಿನ ವಿದ್ಯಾರ್ಥಿ ಶೋಭಾ ಸಂತಸ ವ್ಯಕ್ತಪಡಿಸಿದರು.

`ಟೆಲಿಗ್ರಾಂ ಸೇವೆ ಕೊನೆಗೊಳ್ಳಲಿದೆ ಎಂಬ ವಿಷಯ ತಿಳಿದು ಏನೋ ಕಳೆದುಕೊಳ್ಳುತ್ತಿದ್ದೇನೆ ಎನಿಸಿತು. ಹೀಗಾಗಿ ಬಿಎಸ್ಎನ್ಎಲ್ ಕಚೇರಿಗೆ ಬಂದು ಮೈಸೂರಿನ ನನ್ನ ಗೆಳೆಯನಿಗೆ `ಆಲ್ ದಿ ಬೆಸ್ಟ್' ಎಂಬ ಮೂರೇ ಪದಗಳ ಸಂದೇಶ ಕಳಿಸಿದೆ. ಹಿಂದೆ ಟೆಲಿಗ್ರಾಂ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಆ ಸೇವೆಯ ಕೊನೆಯ ದಿನವೂ ನಾನು ಅದರೊಂದಿಗಿದ್ದೆ ಎಂಬ ಸಂತೋಷವಿದೆ' ಎಂದು ನಿವೃತ್ತ ಶಿಕ್ಷಕ ನಾಗಣ್ಣ ಭಾವುಕರಾದರು.

`ಬೇರೆ ದಿನಗಳಿಗಿಂತ ಭಾನುವಾರ ವಿಶಿಷ್ಟವಾಗಿತ್ತು. ಕಚೇರಿಯಲ್ಲಿ ಜನರು ಹೆಚ್ಚಾಗಿದ್ದರು. ಜನ ಇಷ್ಟು ಉದ್ದದ ಸರತಿ ಸಾಲಿನಲ್ಲಿ ನಿಂತು ಟೆಲಿಗ್ರಾಂ ಕಳಿಸಿದ್ದನ್ನು ನಾನು ಇದೇ ಮೊದಲು ಕಂಡಿದ್ದು. ಹಿಂದೆ ಟೆಲಿಗ್ರಾಂ ವಿಭಾಗ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿತ್ತು.

ಕೆಲ ವರ್ಷಗಳ ಹಿಂದೆ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಟೆಲಿಗ್ರಾಂ ವಿಭಾಗ ಕಾರ್ಯ ನಿರ್ವಹಿಸುತ್ತಿತ್ತು. ಸೇವೆಯ ಕೊನೆಯ ದಿನವಾದ ಭಾನುವಾರ ರಾತ್ರಿ 9 ಗಂಟೆಯವರೆಗೂ ಸಂದೇಶಗಳನ್ನು ಸ್ವೀಕರಿಸಲಾಯಿತು' ಎಂದು ಬಿಎಸ್ಎನ್ಎಲ್ ನಗರ ಟೆಲಿಗ್ರಾಂ ವಿಭಾಗದ ಹಿರಿಯ ವಿಭಾಗೀಯ ಮೇಲ್ವಿಚಾರಕ ಶ್ರಿರಾಮ್ ತಿಳಿಸಿದರು.

`ಕೊನೆಯ ದಿನ ಒಟ್ಟು 1,227 ಟೆಲಿಗ್ರಾಂ ಹಾಗೂ 160 ಫೋನೋಗ್ರಾಂ ಸಂದೇಶಗಳನ್ನು ಸ್ವೀಕರಿಸಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಸಂದೇಶಗಳು ವಿಳಾಸದಾರರಿಗೆ ತಲುಪಲಿವೆ. ಬೆಳಗಿನಿಂದ ರಾತ್ರಿವರೆಗೂ ಕೆಲಸ ಮಾಡಿದರೂ ಆಯಾಸವೆನಿಸಲಿಲ್ಲ.

ಟೆಲಿಗ್ರಾಂ ಸೇವೆಯ ಕೊನೆಯ ದಿನ ಅಪಾರ ಸಂಖ್ಯೆಯ ಜನ ಸಂದೇಶ ಕಳಿಸಲು ಕಚೇರಿಗೆ ಬಂದಿದ್ದು ನಮ್ಮಲ್ಲಿ ಹುರುಪು ತಂದಿತ್ತು. ಬೆಂಗಳೂರಿನ ವಿವಿಧ ಭಾಗಗಳಿಂದ ಬಂದಿದ್ದ ಜನ ಟೆಲಿಗ್ರಾಂ ಕಳಿಸಿದರು. ದಿನವೂ ಹೀಗೆ ಟೆಲಿಗ್ರಾಂಗೆ ಬೇಡಿಕೆ ಇದ್ದಿದ್ದರೆ ಈ ಸೇವೆಯನ್ನು ಸ್ಥಗಿತಗೊಳಿಸುವ ಪ್ರಮೇಯವೇ ಇರುತ್ತಿರಲಿಲ್ಲ' ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.