ಕೊಲೆ ಯತ್ನ: ಪತ್ನಿಯನ್ನು ನದಿಗೆ ತಳ್ಳಿದ ಪತಿ, ಈಜಿ ದಡ ಸೇರಿದ ಮಹಿಳೆ

ಶುಕ್ರವಾರ, ಮೇ 24, 2019
28 °C

ಕೊಲೆ ಯತ್ನ: ಪತ್ನಿಯನ್ನು ನದಿಗೆ ತಳ್ಳಿದ ಪತಿ, ಈಜಿ ದಡ ಸೇರಿದ ಮಹಿಳೆ

Published:
Updated:

ಪಟ್ನಾ(ಐಎಎನ್‌ಎಸ್): ಮಹಿಳೆಯೊಬ್ಬರು 12ಗಂಟೆಗಳ ಕಾಲ ಸತತವಾಗಿ ಗಂಗೆಯೊಂದಿಗೆ ಹೋರಾಟ ನಡೆಸಿ ಸಾವಿನ ದವಡೆಯಿಂದ ಪಾರಾದ  ಪ್ರಸಂಗ ಇದು.ಅಮೃತ ಕುಮಾರಿ ಎಂಬಾಕೆಯನ್ನು ಪತಿ ಆದರ್ಶ ಕುಮಾರ್ ಕಳೆದ ಬುಧವಾರ ಗಂಗಾನದಿಯ ಮಹಾತ್ಮ ಗಾಂಧಿ ಸೇತುವೆಯಿಂದ ಕೆಳಗಿ ತಳ್ಳಿ ಕೊಲೆಗೆ ಯತ್ನಿಸ್ದ್ದಿದ. ಆದರೆ ಅದೃಷ್ಟ ಚೆನ್ನಾಗಿತ್ತು. ಈಜು ಬುರುತ್ತಿದ್ದ ಈಕೆ ಸತತ 12 ಗಂಟೆಗಳ ಕಾಲ ಹೋರಾಟ ನಡೆಸಿ ದಡ ಸೇರಿದ್ದಾಳೆ.  `ನನ್ನನ್ನು ಕೊಲೆ ಮಾಡಲು ನನ್ನ ಪತಿ ನದಿಗೆ ನೂಕಿದ್ದಾನೆ~ ಎಂದು ಅವರು ಹೇಳಿದ್ದಾರೆ. ಸಮಸ್ಟಿಪುರ ಜಿಲ್ಲೆಯ ರಾಸಲ್‌ಪುರದ ಬಳಿಯ ಗಂಗಾ ನದಿ ದಡದಲ್ಲಿ ಪ್ರಜ್ಞೆ ತಪ್ಪಿದ್ದ ಸ್ಥಿತಿಯಲ್ಲಿದ್ದ ಈಕೆಯನ್ನು ಸ್ಥಳೀಯರು ಮತ್ತು ಮೀನುಗಾರರು ರಕ್ಷಿಸಿ ಪೊಲೀಸರಿಗೆ ಸುದ್ದಿ ಮಟ್ಟಿಸಿದ್ದಾರೆ.ಅಂತರ್ಜಾತಿ ವಿವಾಹವೇ ಕೊಲೆ ಯತ್ನಕ್ಕೆ ಕಾರಣ ಎನ್ನಲಾಗಿದೆ. ಪೊಲೀಸರು ಆದರ್ಶಕುಮಾರ್ ಮತ್ತು ಆತನ ಮನೆಯವರ ಹುಡುಕಾಟ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry