ಶನಿವಾರ, ಮೇ 8, 2021
18 °C

ಕೊಳಚೆ ನೀರು: ಸರೂರ ಗ್ರಾಮಸ್ಥರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ಪೊಲೀಸ್ ಅಧಿಕಾರಿ ಗಳ ಮಧ್ಯಸ್ಥಿಕೆ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಮಯೋಚಿತ ಭರವಸೆಯಿಂದಾಗಿ ದಲಿತ ಸಂಘಟನೆಯ ಸದಸ್ಯರು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುವದನ್ನು ಕೈಬಿಟ್ಟ ಘಟನೆ ಶುಕ್ರವಾರ ಮುದ್ದೇಬಿಹಾಳ ತಾಲ್ಲೂಕು ಕವಡಿಮಟ್ಟಿ ಗ್ರಾಮದಲ್ಲಿ ನಡೆಯಿತು.ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರೂರ ಗ್ರಾಮದ ಹರಿಜನ ಕೇರಿಯಲ್ಲಿ ಮುಖ್ಯ ರಸ್ತೆ ಸಂಪೂರ್ಣ ಕೊಳಚೆ ನೀರಿನಿಂದ ತುಂಬಿದ್ದು ಸಂಚಾರಕ್ಕೆ ಸಮಸ್ಯೆ ತಂದಿಟ್ಟಿರುವುದರ ಜೊತೆಗೆ ಕೇರಿಯ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಲು ಕಾರಣವಾದ ಪರಿಸರ ಮಾಲಿನ್ಯ ತಂದೊಡ್ಡಿತ್ತು. ಇದನ್ನು ಸರಿಪಡಿಸುವಂತೆ ಅಲ್ಲಿನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ದಲಿತ ಸಂಘಟನೆಯ ಮುಖಂಡರು ಮತ್ತು ಹರಿಜನ ಕೇರಿಯ ಜನರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪಂಚಾಯಿತಿ ಆಡಳಿತ ಪರಿಹಾರಕ್ಕೆ ಯಾವುದೇ ಕ್ರಮ ಕೈಕೊಂಡಿರಲಿಲ್ಲ.ಹರಿಜನ ಕೇರಿಗೆ ಭೇಟಿ: ಇದೇ ವೇಳೆ ಸ್ಥಳಕ್ಕಾಗಮಿಸಿದ ತಾ.ಪಂ. ಇ.ಓ ಅಕ್ಕಮಹಾದೇವಿ ಹೊಕ್ರಾಣಿ  ಹಾಗೂ ಪಿ.ಡಿ.ಓ.  ಡಿ.ಎಚ್.ಬಟಕುರ್ಕಿ ಅವರನ್ನು ಈ ಬಗ್ಗೆ ಕೇಳಿದಾಗ ಹರಿಜನ ಕೇರಿಗೆ ಹೊಂದಿಕೊಂಡಿರುವ ರಸ್ತೆ ಪಕ್ಕದಲ್ಲಿ ಓರ್ವ ಖಾಸಗಿ ವ್ಯಕ್ತಿಯ ಹೊಲ ಇದ್ದು, ಅವರಿಂದ ರಸ್ತೆ ಅತಿಕ್ರಮಣವಾಗಿದೆ. ಅಲ್ಲದೆ ಅವರು ತಮ್ಮ ಹೊಲದಲ್ಲಿ ಕೊಳಚೆ ನೀರು ಬಿಟ್ಟುಕೊಳ್ಳಲು ತಕರಾರು ಮಾಡಿ ನೀರಿನ ಹರಿಯುವಿಕೆ ಬಂದ್ ಮಾಡಿದ್ದರಿಂದ ಈ ಸಮಸ್ಯೆ ಉದ್ಭವವಾಗಿದೆ ಎಂದು ವಿವರಿಸಿದರು.ಎಲ್ಲವನ್ನೂ ಆಲಿಸಿದ ಇಓ ಅಕ್ಕ ಮಹಾದೇವಿ ಅವರು ಕಂದಾಯ ಇಲಾಖೆಗೆ ಪತ್ರ ಬರೆದು ರಸ್ತೆ ಅತಿಕ್ರಮಿಸಿ ಕೊಂಡಿರುವ ಖಾಸಗಿ ಜಮೀನನ್ನು ಕೂಡಲೇ ಸರ್ವೇ ಮಾಡಿಸಬೇಕು. ರಸ್ತೆ ಅತಿಕ್ರಮಣ ತೆರವುಗೊಳಿಸ ಬೇಕು. ರಸ್ತೆ ಒಂದು ಬದಿ ದಲಿತ ಮುಖಂಡ ಪ್ರಚಂಡಪ್ಪ ಸರೂರ ಎನ್ನುವವರು ಅತಿಕ್ರಮಣ ಮಾಡಿ ಮನೆ ಕಟ್ಟಿದ್ದು ಕೂಡಲೇ ಅದನ್ನು ತೆರವು ಗೊಳಿಸಿ ಕಾಮಗಾರಿಗೆ ಅನುಕೂಲ ಕಲ್ಪಿಸಿ ಕೊಡಬೇಕು. ರಸ್ತೆ ನಿರ್ಮಾಣಕ್ಕೆ ಅನುದಾನದ ಕೊರತೆ ಕಂಡುಬಂದರೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕ್ರಿಯಾ ಯೋಜನೆ ಹಾಕಿಕೊಂಡು ಕಾಮಗಾರಿ ಪೂರ್ಣಗೊಳಿಸಿ ದಲಿತರ ಕೇರಿಗೆ ಸೌಲಭ್ಯ ಒದಗಿಸಿಕೊಡಬೇಕು ಎಂದು ಪಿಡಿಓ ಡಿ.ಎಚ್.ಬಟಕುರ್ಕಿ ಅವರಿಗೆ ಮೌಖಿಕ ಆದೇಶ ನೀಡಿದರು.ಅಂಬೇಡ್ಕರ್ ಸಂಘದ ಅಧ್ಯಕ್ಷ ಜಗದೀಶ ಮಾದರ, ದಲಿತ ಮುಖಂಡ ಪ್ರಚಂಡಪ್ಪ ಚಲವಾದಿ, ಪ್ರಮುಖರಾದ ರೇವಪ್ಪ ಮಾದರ, ಶೇಖಪ್ಪ ಚಲವಾದಿ, ಸಿದ್ದಪ್ಪ ಮಾದರ, ಸಂಗಪ್ಪ ಮಾದರ, ಸಂಗಪ್ಪ ಚಲವಾದಿ, ಪ್ರಕಾಶ ಚಲವಾದಿ, ಲೋಕಪ್ಪ ಮಾದರ, ಮುತ್ತು ಚಲವಾದಿ, ಹೊಳೆಪ್ಪ ಮಾದರ, ಮಂಜುನಾಥ ಚಲವಾದಿ, ಮುತ್ತಪ್ಪ ಮಾದರ, ಬಸಪ್ಪ ಚಲವಾದಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.