ಛಾಯಾಗ್ರಾಹಕರು ಸಿನಿಮಾ ನೋಡುವಾಗ ಅದನ್ನು ಎಂಜಾಯ್ ಮಾಡಲಾರರು. ಸಿನಿಮಾದಲ್ಲಿನ ಛಾಯಾಗ್ರಹಣ ತಾಂತ್ರಿಕತೆಯನ್ನು ವಿಮರ್ಶೆಗೆ ಹಚ್ಚುತ್ತಾರೆ. ಸಿನಿಮಾ ನೋಡುವಾಗ ಸಿಗದ ಖುಷಿಯನ್ನು ಸಂಗೀತ ಕೇಳುವ ಮೂಲಕವಾದರೂ ಅವರು ತಣಿಸಿಕೊಳ್ಳಬಲ್ಲರು.

ಆದರೆ ನನಗೆ ಆ ಅವಕಾಶವೂ ಇಲ್ಲ. ಸಿನಿಮಾ ನೋಡುವಾಗಲಿ, ಸಂಗೀತ ಕೇಳುವಾಗಲಿ ಅದನ್ನು ಅನುಭವಿಸುವ ಬದಲು ಅದರೊಳಗಿನ ಸಂಗತಿಗಳ ಕುರಿತು ಮನದೊಳಗೆ ವಿಮರ್ಶೆ ಶುರುಮಾಡುತ್ತೇನೆ. ಎರಡು ಕ್ಷೇತ್ರಗಳನ್ನು ಅರಗಿಸಿಕೊಳ್ಳುವ ಪ್ರಯತ್ನದಲ್ಲಿ ಎದುರಾಗುವ ಸಮಸ್ಯೆಯಿದು. ಛಾಯಾಗ್ರಹಣ ಮತ್ತು ಸಂಗೀತ ಎರಡೂ ನಾನು ಆರಿಸಿಕೊಂಡಿರುವ, ನನ್ನನ್ನು ಆವರಿಸಿಕೊಂಡಿರುವ ಕ್ಷೇತ್ರಗಳು.

ಮಾತು ಕಲಿಯುವ ಮುನ್ನವೇ ಸಂಗೀತ ನನ್ನೊಳಗೆ ಪ್ರವೇಶಿಸಿತ್ತು. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಅಪ್ಪ ಬ್ಯಾಂಕ್ ಉದ್ಯೋಗಿ. ಅಮ್ಮ ಹಾಡುತ್ತಿದ್ದ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದವನಿಗೆ ಹಾಡುಗಾರಿಕೆಯೂ ಒಲಿಯಿತು. ಮೊದಲು ಹಾಡಲು ವೇದಿಕೆ ಹತ್ತಿದ್ದು ಒಂದೂವರೆ ವರ್ಷದವನಿದ್ದಾಗ. ಆಗ ಅದೆಷ್ಟು ಕಾರ್ಯಕ್ರಮಗಳಲ್ಲಿ ಹಾಡಿದ್ದೆನೋ ಗೊತ್ತಿಲ್ಲ. ಒಮ್ಮೆ ಕಂಠೀರವ ಸ್ಟುಡಿಯೊದಲ್ಲಿ ಹಾಡುತ್ತಿದ್ದ ನನ್ನನ್ನು ನೋಡಿದ ನಿರ್ದೇಶಕ ಎಸ್. ಮಹೇಂದರ್ ನಟಿಸುತ್ತೀಯಾ ಎಂದು ಕೇಳಿದರು. ಆಗ ಎರಡನೇ ತರಗತಿಯಲ್ಲಿದ್ದೆ.

ಅವರ `ವೈದೇಹಿ' ಧಾರಾವಾಹಿಗೆ ಮೊದಲು ಬಣ್ಣಹಚ್ಚಿದ್ದು. ಮುಂದೆ ಅವರದೇ ಚಿತ್ರ `ಗಟ್ಟಿಮೇಳ'ದಲ್ಲಿಯೂ ನಟಿಸಿದೆ. ಬಾಲನಟನಾಗಿ ಸುಮಾರು 35 ಧಾರಾವಾಹಿ, 32 ಸಿನಿಮಾಗಳಲ್ಲಿ ನಟಿಸಿದೆ. ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಸಂಗೀತ ಲಹರಿ' ಕಾರ್ಯಕ್ರಮದಲ್ಲಿಯೂ ಹಾಡಿದ್ದೆ. ನಟನೆ ಮತ್ತು ಗಾಯನ ಎರಡೂ ಒಲಿದಿತ್ತು.

`ತುತ್ತೂರಿ' ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರ ಜೊತೆಗೆ ನಾಲ್ಕೈದು ಸಲ ರಾಜ್ಯ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದ್ದೆ. ಪ್ರಶಸ್ತಿ ಬಂದೇ ಬರುತ್ತದೆ ಎಂದು ನಿರೀಕ್ಷಿಸಿದ ಚಿತ್ರಗಳವು. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಕೆಲವು ಸದಸ್ಯರೂ ಹೇಳಿದ್ದರು, ನಿನಗೇ ಪ್ರಶಸ್ತಿ ಎಂದು. ಬಹುಶಃ ಲಾಬಿ ಮಾಡಲು ನಮಗೆ ಗೊತ್ತಿಲ್ಲದ ಕಾರಣವಿರಬೇಕು, ಒಮ್ಮೆಯೂ ಅದು ದೊರಕಲಿಲ್ಲ. ಅದರ ಆಸೆಯೂ ನನಗಿಲ್ಲ. ವಿಶೇಷವೆಂದರೆ, ಕನ್ನಡದ `ಮುತ್ತು' ಚಿತ್ರದಲ್ಲಿ ನಾಯಕನ ಬಾಲ್ಯದ ಪಾತ್ರದಲ್ಲಿ ನಟಿಸಿದ್ದ ನನಗೆ ಚೆನ್ನೈ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿತ್ತು. ಕನ್ನಡದಲ್ಲಿ ಸಿಗಲಿಲ್ಲ. 10ನೇ ತರಗತಿಯವರೆಗೂ ನಟಿಸಿದೆ. `ಬಾಲನಟ' ಪಟ್ಟ ತ್ಯಜಿಸಲು ಸೂಕ್ತ ಸಮಯ ಅದು. ಮತ್ತೆ ನಟಿಸಬಾರದು ಎಂದು ತೀರ್ಮಾನಿಸಿದೆ.

ಚಿಕ್ಕಂದಿನಲ್ಲಿ ಮೂಡಿದ ಆಸೆ ಚಲನಚಿತ್ರ ಛಾಯಾಗ್ರಾಹಕನಾಗಬೇಕೆಂದು. ಒಂದು ಬಯಕೆಯೊಳಗೆ ಹಲವು ಕುಡಿಗಳು. ಪಿಯುಸಿ ಬಳಿಕ ಚೆನ್ನೈಗೆ ಕಾಲಿಟ್ಟವನು ಮೊದಲು ಕಲಿತದ್ದು ಸೌಂಡ್ ಎಂಜಿನಿಯರಿಂಗ್. ಒಂದೂವರೆ ವರ್ಷದ ಡಿಪ್ಲೊಮಾ ಮುಗಿಸಿದವನನ್ನು ಎ.ಆರ್. ರೆಹಮಾನ್ ಸಂಗೀತ ಶಾಲೆ ಸೆಳೆಯಿತು. ಸಂಗೀತ ಹುಟ್ಟಿನಿಂದಲೇ ಅಂಟಿಕೊಂಡದ್ದು. ಎರಡು ವರ್ಷ ಅಲ್ಲಿ ಪಾಶ್ಚಾತ್ಯ, ಸೂಫಿ, ಹಿಂದೂಸ್ತಾನಿ ಕಲಿಕೆ. ಇತ್ತ ಸಂಗೀತ, ಅತ್ತ ಛಾಯಾಗ್ರಹಣ, ಎರಡು ಮನಸ್ಸಿನೊಂದಿಗೆ ಅಲ್ಲಿ ಸೇರಿದ್ದವನು ನಾನೊಬ್ಬನೇ.

ಉಳಿದವರೆಲ್ಲರದೂ 24 ಗಂಟೆ ಸಂಗೀತ ಕಲಿಕೆಯಾದರೆ ನನ್ನದು 12 ಗಂಟೆ ಮಾತ್ರ. ಅಲ್ಲಿದ್ದವರೆಲ್ಲರಿಗಿಂತಲೂ ನಾನು ಕಿರಿಯ. ನನ್ನ ವಯಸ್ಸಿನವರಾರೂ ಅಲ್ಲಿರಲಿಲ್ಲ. ಇದೆಲ್ಲಾ ಮುಗಿದ ನಂತರವೇ ಛಾಯಾಗ್ರಹಣ ಕಲಿಕೆಗೆಂದು ಮುಂಬೈಗೆ ತೆರಳಿದ್ದು. ಸಂಗೀತ ಮತ್ತು ಛಾಯಾಗ್ರಹಣ ಎರಡನ್ನೂ ಜೊತೆಗೆ ಕೊಂಡೊಯ್ಯುವುದು ಸುಲಭದ ಮಾತಲ್ಲ. ಅಲ್ಲಿಯೂ `ಸಹಪಾಠಿಗಳು' ನನಗಿಂತ ಹಿರಿಯರೇ ಇದ್ದದ್ದು. ಛಾಯಾಗ್ರಾಹಕ ಸೇತು ಶ್ರೀರಾಮ್ ಸಹಾಯಕನಾಗಿ ಮೊದಲು ಕ್ಯಾಮೆರಾ ಕೆಲಸದಲ್ಲಿ ತೊಡಗಿಕೊಂಡ ಚಿತ್ರ `ಓ ಮೈ ಗಾಡ್'. ಸಿನಿಮಾ, ಜಾಹೀರಾತು, ಕಿರುಚಿತ್ರಗಳಿಗೆ ಸಹಾಯಕ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಜೊತೆಗೆ ಮುಂಬೈನಲ್ಲಿಯೇ ಹಿಂದೂಸ್ತಾನಿ ಸಂಗೀತ ಕಲಿಕೆಯೂ ಸಾಗಿದೆ.

ಮತ್ತೆ ನಟಿಸಬಾರದು ಎಂದು ತೀರ್ಮಾನ ಮಾಡಿಕೊಂಡಿದ್ದೆ. ಬಾಲನಟನಾಗಿ ಸುಮಾರು ಹತ್ತು ಹನ್ನೆರಡು ವರ್ಷದ ಅನುಭವ ಆ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿತ್ತು. ಮಾ.ಮಂಜುನಾಥ್, ಮಾ. ಆನಂದ್ರ ಬಳಿಕ ಚಿತ್ರರಂಗ ಬಾಲಕಲಾವಿದರ ಪರಂಪರೆಯನ್ನು ಬೆಳೆಸಲಿಲ್ಲ. ಅಲ್ಲಿ ನಮ್ಮನ್ನು ನಡೆಸಿಕೊಳ್ಳುತ್ತಿದ್ದ ರೀತಿಯೂ ಹಿತಕರವಾಗಿರಲಿಲ್ಲ. ಅಭಿನಯದಿಂದ ದೂರ ಇರಬೇಕೆಂದೆನಿಸಲು ಇದೇ ಕಾರಣ.

ಆದರೆ `ಕೇಸ್ ನಂ 18/9' ಚಿತ್ರ ಮತ್ತೆ ನಟನೆಗೆ ಕರೆತಂದಿತು. ನಾಯಕ ನಟ ನಿರಂಜನ್ ನಟಿಸು ಎಂದು ಹೇಳಿದಾಗ ಇಲ್ಲ ಎಂದಿದ್ದೆ. ಮೂಲ ತಮಿಳಿನ ಚಿತ್ರವನ್ನು ನೋಡಿದಾಗ ನನಗಾಗಿ ಇರುವ ಪಾತ್ರ ಎನಿಸಿತು. ಒಪ್ಪದಿದ್ದರೆ ಅದ್ಭುತ ಪಾತ್ರವೊಂದನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಖುಷಿಯಿಂದಲೇ ಅಭಿನಯಿಸಿದೆ. ಆದರೆ ಈಗಲೂ ನಟನೆಯ ಬಗ್ಗೆ ನನಗೆ ಒಲವಿಲ್ಲ. ನಮ್ಮ ಗುರಿಗಳನ್ನು ಮುಟ್ಟಲು ಕೆಲವೊಂದನ್ನು ತ್ಯಜಿಸಲೇಬೇಕು. ಛಾಯಾಗ್ರಹಣ ಮತ್ತು ಸಂಗೀತಕ್ಕಾಗಿ ನಟನೆಯನ್ನು ಬಿಡುವುದು ನಷ್ಟವಿಲ್ಲ. ಮನದ ಖುಷಿಗೆ ಪರದೆ ಮುಂದೆ ಕಾಣಿಸಿಕೊಳ್ಳಲೇ ಬೇಕೆಂದಿಲ್ಲ.

ಡಿಪ್ಲೊಮಾ ಮುಗಿಸಿರುವುದರಿಂದ ಈಗಲೇ ಸ್ವತಂತ್ರ ಛಾಯಾಗ್ರಹಣಕ್ಕೆ ಇಳಿಯಬಹುದು. ಸಾಮರ್ಥ್ಯವೂ ಇದೆ. ಆದರೆ ಇಷ್ಟು ಬೇಗ ಸ್ವತಂತ್ರನಾಗಲು ಇಷ್ಟವಿಲ್ಲ. ಕೆಲವು ವರ್ಷ ಅವರಿವರ ಬಳಿ ಸಹಾಯಕನಾಗಿ ಛಾಯಾಗ್ರಹಣದ ಅನುಭವ ಗಿಟ್ಟಿಸಬೇಕು. `ತುತ್ತೂರಿ' ಚಿತ್ರದ ವೇಳೆ ಛಾಯಾಗ್ರಾಹಕ ರಾಮಚಂದ್ರ ಅವರ ಬಳಿ ನಾನೂ ನಿಮ್ಮಂತೆ ಕ್ಯಾಮೆರಾ ಹಿಡಿಯಬೇಕು ಎಂದಿದ್ದೆ. ನನ್ನ ಮಾನಸ ಗುರುಗಳು ಅವರು. ಮಾಡು ಎಂದು ಬೆನ್ನುತಟ್ಟಿದ್ದರು. ಈಗ ಅವರ ಬಳಿ ಸಹಾಯಕನಾಗಿ ಸೇರಿಸಿಕೊಳ್ಳುವಿರಾ ಎಂದು ಕೇಳಿಕೊಳ್ಳಬೇಕು.

ಸ್ವಲ್ಪ ಭಯ. ಅವರ ಮೇಲಿನ ಗೌರವವೇ ಅದಕ್ಕೆ ಕಾರಣ. ಅವರ ಜೊತೆ ಕೆಲಸ ಮಾಡಿ, `ಹೂಂ' ಎಂಬ ನಂತರವೇ ಸ್ವತಂತ್ರ ಛಾಯಾಗ್ರಹಣಕ್ಕೆ ಇಳಿಯುವುದು. ಕೆಲವರು ಕೇಳುತ್ತಾರೆ, ಸಂಗೀತ ಮತ್ತು ಛಾಯಾಗ್ರಹಣ ಎರಡನ್ನೂ ಹೇಗೆ ಒಟ್ಟಿಗೆ ಸಾಗಿಸಲು ಸಾಧ್ಯ? ಎಂದು. ನನ್ನ ಉತ್ತರ, ಎಲ್ಲವೂ ಸಾಧ್ಯ. ಸ್ವಲ್ಪ ಸಮಯ ಕಾದು ನೋಡಿ. ಈ ಎರಡೂ ಕ್ಷೇತ್ರಗಳನ್ನು ಸಂಯೋಜನೆ ಮಾಡಿ ಏನಾದರೂ ವಿಶಿಷ್ಟವಾದುದನ್ನು ನೀಡಬಹುದಲ್ಲವೇ ಎಂಬುದು ನನ್ನ ಯೋಚನೆ. ದೊಡ್ಡ ದೊಡ್ಡ ಸಿದ್ಧಾಂತಗಳನ್ನು ಓದಿಕೊಂಡ ಪರಿಣಾಮವಿದು!

ಗಾಯಕಿ ರಿತಿಶಾ ಪದ್ಮನಾಭ್ ಮತ್ತು ನನ್ನ ನಡುವೆ ಗಾಯನದಲ್ಲಿ ಸ್ಪರ್ಧೆ ಇರುತ್ತಿತ್ತು. ಯಾವಾಗಲೂ ಆಕೆಗೆ ಮೊದಲ ಸ್ಥಾನ, ನನಗೆ ಎರಡನೆಯದು. ಸಂಗೀತದಲ್ಲಿ ನನಗೆ ಆಕೆಯೇ ಮಾದರಿ. ಸಂಗೀತ ಸಂಯೋಜನೆಯಲ್ಲಿಯೂ ಹೆಜ್ಜೆಗಳನ್ನಿರಿಸಿದ್ದೇನೆ. `ಚರಣದಾಸಿ', `ಆಕಾಶದೀಪ', `ಪುಟ್ಟಗೌರಿ ಮದುವೆ' ಧಾರಾವಾಹಿಗಳಿಗೆ ಮಟ್ಟು ಹಾಕಿದ್ದೇನೆ. ಕೆಲವು ಚಿತ್ರಗಳಲ್ಲಿಯೂ ಅವಕಾಶ ಬಂದಿತ್ತು. ಏನೋ ಒಂದು ಮಾಡಿಕೊಡಿ ಎಂಬ ಮನೋಭಾವದವರ ಚಿತ್ರಗಳವು. ಗಟ್ಟಿ ಮನಸ್ಸು ಮಾಡಿ ತಿರಸ್ಕರಿಸಿದೆ. ಈಗ ನನ್ನ ವಾಸ ಮುಂಬೈನಲ್ಲಿಯೇ. ಅಲ್ಲಿ ಕಲಿಕೆಗೆ ಅವಕಾಶದ ಜೊತೆ, ಆರೋಗ್ಯಕರ ಸ್ಪರ್ಧೆ ಇದೆ. ಮಲಗುವುದು ಮೂರರಿಂದ ನಾಲ್ಕು ಗಂಟೆ ಮಾತ್ರ.

ಚಿತ್ರೀಕರಣ ಮುಗಿಸಿಕೊಂಡು ಬಂದರೆ, ರಾತ್ರಿ ಸಂಗೀತ ಅಭ್ಯಾಸ, ಸಂಯೋಜನೆ. ಬೆಂಗಳೂರಿಗೆ ಬಂದಾಗ ಗೆಳೆಯರೊಟ್ಟಿಗೆ ತಿರುಗಾಟ. ಬಾಲ್ಯವನ್ನು ಮಿಸ್ ಮಾಡಿಕೊಂಡೆ ಎಂದು ಎಂದಿಗೂ ಅನಿಸಿಲ್ಲ. ಅಪ್ಪ ಅಮ್ಮ ಮಗನನ್ನು ಟೀವಿಯಲ್ಲಿ ನೋಡಬಹುದು ಎಂದು ನಟನೆಗೆ ಕಳುಹಿಸಿದರೆ, ನನಗೆ ಶಾಲೆಗೆ ಬಂಕ್ ಮಾಡಬಹುದಲ್ಲ ಎಂಬ ಖುಷಿ. ಒಂದು ಕಾಲ ಚಿತ್ರರಂಗದಲ್ಲಿ ದುಡಿದು ತೆರೆಮರೆಗೆ ಸರಿದ ಕಲಾವಿದರು, ತಂತ್ರಜ್ಞರ ಬದುಕನ್ನು ಶೋಧಿಸುವ ಬಯಕೆ ನನ್ನದು. ಅವರ ಪರಿಸ್ಥಿತಿಯನ್ನು ಅರಿತುಕೊಂಡು ಅವರಿಗಾಗಿ ಏನಾದರೂ ಮಾಡಬೇಕು. ಅದರಲ್ಲಿ ನೋವು ನಲಿವು ಎರಡೂ ಇರುತ್ತದೆ. ನನ್ನ ಬದುಕಿನ ಪಾಠವೂ ಆಗುತ್ತದೆ.

ಚಿಕ್ಕಂದಿನಲ್ಲಿ ಸುಮಾರು 80 ಚಿತ್ರಗಳು, 40 ಧಾರಾವಾಹಿಗಳ ಬಾಲ ಕಲಾವಿದರಿಗೆ ಕಂಠದಾನ ಮಾಡಿದ್ದೇನೆ. ಒಮ್ಮೆ ಎರಡೂ ಕೈಗಳನ್ನು ತಲೆ ಮೇಲೆ ಹೊತ್ತು ವಿಚಿತ್ರವಾಗಿ ನಿಂತು ಡಬ್ಬಿಂಗ್ ಮಾಡುತ್ತಿದ್ದೆ. ನನ್ನ ಹಿಂದೆ ನಟ ವಿಷ್ಣುವರ್ಧನ್ ಬಂದು ನಿಂತದ್ದು ತಿಳಿದೇ ಇರಲಿಲ್ಲ. ನಾನು ತಲ್ಲೆನನಾಗಿ ಡಬ್ಬಿಂಗ್ ಮಾಡುತ್ತಿದ್ದುದನ್ನು ಅವರೂ 15 ನಿಮಿಷ ನೋಡುತ್ತಾ ನಿಂತಿದ್ದರಂತೆ! ನಿನ್ನ ಸ್ಟೈಲ್ ಡಬ್ಬಿಂಗ್ ನನಗೆ ಬರುವುದಿಲ್ಲ ಎಂದು ಆಗ ಅವರು ಹೇಳಿದ್ದರು.

ಸಂಗೀತ, ಸೌಂಡ್ ಎಂಜಿನಿಯರಿಂಗ್, ಛಾಯಾಗ್ರಹಣ ಎಲ್ಲದರ ಕಲಿಕೆಯ ಹಿಂದಿನ ಅಂತಿಮ ಗುರಿ ಸಿನಿಮಾ ನಿರ್ದೇಶನದ್ದು. ನಟಿಸುತ್ತಿದ್ದಾಗಲೇ ಅಕೌಂಟೆಂಟ್ ಕೆಲಸ ಬಿಟ್ಟು ಮತ್ತೆಲ್ಲವನ್ನೂ ಮಾಡಿರುವ ನನಗೆ ಆ ಅನುಭವ, ಆತ್ಮವಿಶ್ವಾಸ ಎರಡೂ ಜೊತೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.