ಆನೇಕಲ್: ಸೃಜನಶೀಲತೆಯಿಂದ ಹೊಸದನ್ನು ಸೃಷ್ಟಿಸುವ ಹಾಗೂ ಹೊಸ ಚಿಂತನೆ ಮಾಡುವ ಕೌಶಲವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಉಷಾ ಸುರೇಶ್ ನುಡಿದರು.

ಅವರು ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಜೆಎಸ್ಎಸ್ ಜನಶಿಕ್ಷಣ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಹೊಲಿಗೆ ತರಬೇತಿ ಪಡೆದಿರುವ ಶಿಬಿರಾರ್ಥಿಗಳು ಹೊಲಿಗೆಯಲ್ಲಿ ಹೊಸಹೊಸ ಡಿಸೈನ್ಗಳನ್ನು ರೂಪಿಸುವತ್ತ ಚಿಂತನೆ ಮಾಡಿದರೆ ಹೆಚ್ಚಿನ ಆದಾಯ ಹಾಗೂ ಬೇಡಿಕೆ ಬರುತ್ತದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೇಜಶ್ರೆ ನಟರಾಜ್ ಮಾತನಾಡಿ, ಬಿಡುವಿನ ವೇಳೆಯಲ್ಲಿ ವಿವಿಧ ಕೌಶಲಗಳಲ್ಲಿ ತರಬೇತಿ ಪಡೆದು ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಹಾಗೂ ಸ್ವಾವಲಂಬಿಗಳಾಗುವತ್ತ ಗಮನ ನೀಡಬೇಕು ಎಂದರು.

ಜೆಎಸ್ಎಸ್ ಜನಶಿಕ್ಷಣ ಸಂಸ್ಥೆಯ ನಿರ್ದೇಶಕ ರಾಜಪ್ಪ ಅವರು ಮಾತನಾಡಿ, ಸಂಸ್ಥೆಯು ಜನರ ಆಸಕ್ತಿಗನುಗುಣವಾಗಿ ಹಲವಾರು ತರಬೇತಿಗಳನ್ನು ರೂಪಿಸಿದೆ ಸಾಮನ್ಯ ಶಿಕ್ಷಣ ಪಡೆದವರು ಈ ಮೂಲಕ ಸ್ವಂತ ಉದ್ಯೋಗ ಪಡೆಯಲು ತರಬೇತಿ ಭೂಮಿಕೆಯನ್ನು ರೂಪಿಸುತ್ತದೆ ಎಂದರು.

ಶಾಹಿ ಗಾರ್ಮೆಂಟ್ಸ್ನ ವಿನಯ್, ಪ್ರವೀಣ್, ಜೆಎಸ್ಎಸ್ ಕಾರ್ಯಕ್ರಮಾಧಿಕಾರಿ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯೆ ಚೌಡಮ್ಮ, ವಾಣಿ ಪ್ರಸಾದ್, ಹೊಲಿಗೆ ತರಬೇತಿ ಶಿಕ್ಷಕಿ ಸಿ.ಪಾರ್ವತಿ ಮತ್ತಿತರರು ಹಾಜರಿದ್ದರು. ಧನಲಕ್ಷ್ಮೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.