ಶನಿವಾರ, ಮೇ 8, 2021
18 °C
ಧಾರವಾಡದಲ್ಲಿ ಪ್ರಾಯೋಗಿಕವಾಗಿ ಜಾರಿ

ಕ್ಯಾಮೆರಾ ಕಣ್ಣಿಗೆ ಸಿಕ್ಕ ಮೇಲೆ ದಂಡ ತುಂಬಲೇಬೇಕು!

ಪ್ರಜಾವಾಣಿ ವಾರ್ತೆ / ಮನೋಜ್‌ಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಧಾರವಾಡ: ನಗರದ ಜುಬಿಲಿ ವೃತ್ತ, ಕೋರ್ಟ್ ವೃತ್ತ, ವಿವೇಕಾನಂದ ವೃತ್ತ, ಟೋಲ್‌ನಾಕಾ, ಗಾಂಧಿನಗರದಲ್ಲಿ ಸಂಚಾರ ವಿಭಾಗದ ಪೊಲೀಸರು ಅಳವಡಿಸಿದ ಕ್ಯಾಮೆರಾ ಕಳೆದ ಒಂದು ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ ಪರಿಣಾಮ ಸಾರಿಗೆ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ಮನೆಗೆ ನೋಟಿಸ್‌ಗಳು ಹೋಗುತ್ತಿವೆ!ರಸ್ತೆ ನಿಯಮ ಉಲ್ಲಂಘಿಸಿದ 459 (ಮೇ 15ರಿಂದ ಜೂನ್ 21ರವರೆಗೆ) ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ವಾಹನ ಸವಾರರ ಮನೆಗೆ ಅಂಚೆ ಮೂಲಕ ನೋಟಿಸ್ ಕಳುಹಿಸಿ ಇದುವರೆಗೆ 29,000 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ರಸ್ತೆ ನಿಯಮ ಉಲ್ಲಂಘಿಸುವ ವಾಹನಗಳನ್ನು ಶೋಧಿಸಿ ದಂಡ ಹಾಕಲೆಂದೇ ಸಂಚಾರ ನಿರ್ವಹಣೆ ಕೇಂದ್ರವನ್ನು (ಟಿಎಂಸಿ) ಶಹರ ಪೊಲೀಸ್ ಠಾಣೆ ಆವರಣದಲ್ಲಿ ಸ್ಥಾಪಿಸ ಲಾಗಿದ್ದು, ಮೂವರು ಮಹಿಳಾ ಸಿಬ್ಬಂದಿಯನ್ನು ಇದಕ್ಕೆಂದೇ ನಿಯೋಜಿಸಲಾಗಿದೆ.ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9ರವ ರೆಗೆ ಟಿಎಂಸಿ ಕೇಂದ್ರ ದಲ್ಲಿ ಕ್ಯಾಮೆರಾ ಕಣ್ಗಾ ವಲನ್ನು ದಾಖಲಿಸಿ ಕೊಂಡು ನಿಯಮ ಉಲ್ಲಂಘಿಸಿದ ವಾಹನ ಗಳ ನೋಂದಣಿ ಸಂಖ್ಯೆ ಯನ್ನು ದಾಖಲಿಸಿ ಕೊಳ್ಳಲಾಗುತ್ತದೆ.  ಆರ್‌ಟಿಒ ಕಚೇರಿ ಯೊಂದಿಗೆ ಇರುವ ನೆಟ್‌ವರ್ಕ್ ಮೂಲಕ ತಕ್ಷಣವೇ ಆ ನೋಂದಣೆ ಸಂಖ್ಯೆ ಹೊಂದಿದ ವಾಹನದ ಮಾಲೀಕರ ವಿಳಾಸವನ್ನು ಪತ್ತೆ ಹಚ್ಚಿ ಸಂಜೆಯೇ ನೋಟಿಸ್ ಪ್ರತಿ ಪ್ರಿಂಟ್ ತೆಗೆಯಲಾಗುತ್ತದೆ. ನಂತರ ನೋಟಿಸ್‌ಗಳನ್ನು ಅಂಚೆ ಮೂಲಕ ಕಳಿಸಲಾಗುತ್ತದೆ. ಈ ಉದ್ದೇಶಕ್ಕೆಂದೇ ಶೀಘ್ರದಲ್ಲಿಯೇ 50,000 `ಇನ್‌ಲ್ಯಾಂಡ್ ಲೆಟರ್ ಕಾರ್ಡ್ 'ಗಳನ್ನು ಅಂಚೆ ಇಲಾಖೆಯಿಂದ ಪೊಲೀಸ್ ಇಲಾಖೆ ಖರೀದಿಸಲು ಮುಂದಾಗಿದೆ.`ನೋಟಿಸ್ ತಲುಪಿದ ಏಳು ದಿನಗಳ ಒಳಗಾಗಿ ಧಾರವಾಡದ ಟಿಎಂಸಿ ಕೇಂದ್ರ ಅಥವಾ ಹುಬ್ಬಳ್ಳಿಯ ಉಪ ನಗರ ಠಾಣೆಯ ಮೇಲ್ಭಾಗದಲ್ಲಿರುವ ಟಿಎಂಸಿ ಕೇಂದ್ರದಲ್ಲಿ ದಂಡದ ಹಣ ಪಾವತಿಸಲು ಅವಕಾಶ ನೀಡಲಾಗಿದೆ. ಏಳು ದಿನ ಮೀರಿದ ಬಳಿಕ ವಾಹನ ಮಾಲೀಕರು ನ್ಯಾಯಾಲಯಕ್ಕೆ ಹೋಗಿ ದಂಡ ತುಂಬಬೇಕಾಗುತ್ತದೆ. ನ್ಯಾಯಾಲಯಕ್ಕೆ ಹೋಗುವ ತಾಪತ್ರಯವೇ ಬೇಡವೆಂದು ಬಹಳಷ್ಟು ಜನರು ನಮ್ಮ ಕೇಂದ್ರಕ್ಕೇ ಬಂದು ಹಣ ಪಾವತಿ ಮಾಡುತ್ತಿದ್ದಾರೆ' ಎಂದು ಧಾರವಾಡ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿಜಯಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.`ಆಪರೇಷನ್ ಕ್ಯಾಮೆರಾ ಟ್ರಾಪ್'ನ್ನು ವಿಶೇಷ ಆಸಕ್ತಿಯಿಂದ ನಡೆಸುತ್ತಿರುವ ವಿಜಯಕುಮಾರ್ ಅದರ ಫಲವಾಗಿ ಉತ್ತಮ ಫಲಿತಾಂಶವನ್ನೇ ಪಡೆದಿದ್ದಾರೆ. 459 ಪ್ರಕರಣಗಳಲ್ಲಿ 279 ಜನರು ಇಲ್ಲಿಗೆ ಬಂದು ದಂಡದ ಹಣ ಪಾವತಿ ಮಾಡಿದ್ದಾರೆ.  ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗ ಳನ್ನು ಒಂದು ವಾರದವರೆಗೆ ರಕ್ಷಿಸಿಡಬಹುದಾಗಿದೆ. ಅಗತ್ಯ ಬಿದ್ದರೆ ಅವುಗಳನ್ನು ಕಂಪ್ಯೂಟರ್ ಹಾರ್ಡ್‌ಡಿಸ್ಕ್‌ನಲ್ಲಿಯೂ ಶೇಖರಿಸಿ ಇಡುತ್ತೇವೆ ಎಂದು ಟಿಎಂಸಿ ಕೇಂದ್ರದಲ್ಲಿರುವ ಮಹಿಳಾ ಕಾನ್‌ಸ್ಟೆಬಲ್ ಗಾಯತ್ರಿ ಹೇಳಿದರು.ಸೋಲಾರ್ ಚಾಲಿತ ಕ್ಯಾಮೆರಾ

ಒಟ್ಟು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಸೌರಚಾಲಿತ ಎಲ್‌ಇಡಿ ಸಿಗ್ನಲ್ ದೀಪ ಹಾಗೂ ನೂತನ ಕ್ಯಾಮೆರಾ ಗಳನ್ನು ಜುಬಿಲಿ ವೃತ್ತ, ಕೋರ್ಟ್ ವೃತ್ತದಲ್ಲಿ ಅಳವಡಿಸಲಾ ಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಟೆಂಡರ್ ತೆರೆಯಲಾಗುವುದು. ಇದೀಗ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಕ್ಯಾಮೆರಾ ಕೂಡ ಕೆಲಸ ಮಾಡುವುದಿಲ್ಲ. ಆದರೆ ಸೋಲಾರ್ ಇನ್ವರ್ಟರ್ ಅಳವಡಿಸಿದ ಬಳಿಕ ಕ್ಯಾಮೆರಾ ನಿರಂತರವಾಗಿ ಚಾಲನೆಗೊಳ್ಳಲಿದೆ. ಕರೆಂಟ್ ಹೋದಾಗ ತಪ್ಪಿಸಿಕೊಳ್ಳುವ ವಾಹನ ಸವಾರರು ಸೋಲಾರ್ ಕ್ಯಾಮೆರಾ ಬಂದ ಮೇಲೆ ತಪ್ಪಿಸಿ ಕೊಳ್ಳುವಂತಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.