ಕ್ಯಾಲ್ಸಿಯಂ ಕೊರತೆಯೇ ಸೋಯಾಬೀನ್ ಚಟ್ನಿ ತಿನ್ನಿ

ಶುಕ್ರವಾರ, ಮೇ 24, 2019
28 °C

ಕ್ಯಾಲ್ಸಿಯಂ ಕೊರತೆಯೇ ಸೋಯಾಬೀನ್ ಚಟ್ನಿ ತಿನ್ನಿ

Published:
Updated:

ನವದೆಹಲಿ, (ಪಿಟಿಐ): ನೀವು ಸಸ್ಯಾಹಾರಿಗಳೇ? ಹಾಲು ಇಷ್ಟಪಡದವರೇ? ಹಾಗಿದ್ದಲ್ಲಿ ದೋಸೆ, ಸೋಯಾಬೀನ್ ಚಟ್ನಿ, ಎಳ್ಳುಂಡೆ ಮತ್ತು ರಸಗುಲ್ಲ ಸೇವಿಸಿ. ನಿಮ್ಮ ಶರೀರಕ್ಕೆ ಅತ್ಯಗತ್ಯವಾದ ಕ್ಯಾಲ್ಸಿಯಂ ದೊರೆಯುತ್ತದೆ ಎನ್ನುತ್ತಾರೆ ಭಾರತೀಯ ವಿಜ್ಞಾನಿಗಳು.ಪುಣೆ ವಿಶ್ವವಿದ್ಯಾಲಯ ಮತ್ತು ಹೀರಾಬಾಯಿ ಕೊವಾಸ್‌ಜಿ ಜಹಾಂಗೀರ್ ವೈದ್ಯಕೀಯ ಸಂಶೋಧನಾ ಸಂಸ್ಥೆ (ಎಚ್‌ಸಿಜೆಎಆರ್‌ಐ) ಜಂಟಿಯಾಗಿ ನಡೆಸಿದ ಅಧ್ಯಯನ ಇದನ್ನು ಸ್ಪಷ್ಟಪಡಿಸಿದೆ. 7ರಿಂದ 9ರ ನಡುವಿನ ಮಕ್ಕಳಿಗೆ ಪ್ರತೀದಿನ 600 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂ ಅಗತ್ಯವಾಗಿದ್ದರೆ 10-19ರ ನಡುವಿನವರು 800 ಮಿ.ಗ್ರಾಂನಷ್ಟು ಕ್ಯಾಲ್ಸಿಯಂ ಸೇವಿಸಬೇಕಾಗಿದೆ ಎಂದು ಭಾರತೀಯ ದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಿತ ಆಹಾರ ಭತ್ಯೆ ಉಲ್ಲೇಖಿಸಿದೆ.ಮೂಳೆಗಳು, ಹಲ್ಲುಗಳು ಬಲಗೊಳ್ಳಲು, ಸ್ನಾಯುಗಳ ಚಲನೆಗೆ ಮತ್ತು ಹಾರ್ಮೋನುಗಳ ಕಾರ್ಯನಿರ್ವಹಣೆಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿದ್ದು, ಶರೀರದಲ್ಲಿ ಇವುಗಳ ಕೊರತೆ ಕಂಡುಬಂದಲ್ಲಿ ವಯಸ್ಸಾದಂತೆ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಪುಣೆ ವಿಶ್ವವಿದ್ಯಾಲಯದ ವಿ ಆರೋಗ್ಯ ವಿಜ್ಞಾನ ಸಂಸ್ಥೆಯ ನೇಹಾ ಸನ್‌ವಾಲ್ಕಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry