ಕ್ರಿಕೆಟ್‌ನಿಂದ ನಿವೃತ್ತಿ ಯೋಚನೆಯಿಲ್ಲ

7

ಕ್ರಿಕೆಟ್‌ನಿಂದ ನಿವೃತ್ತಿ ಯೋಚನೆಯಿಲ್ಲ

Published:
Updated:
ಕ್ರಿಕೆಟ್‌ನಿಂದ ನಿವೃತ್ತಿ ಯೋಚನೆಯಿಲ್ಲ

ನವದೆಹಲಿ (ಪಿಟಿಐ): ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಈಗಲೇ ನಿವೃತ್ತಿ ಹೊಂದುವುದಿಲ್ಲವೆಂದು ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ಸಾರಿ ಹೇಳಿದ್ದಾರೆ.ಕ್ರಿಕೆಟ್ ಆಟವನ್ನು ಇನ್ನಷ್ಟು ಕಾಲ ಅನುಭವಿಸುವ ಉದ್ದೇಶ ಹೊಂದಿರುವ ಅವರು `ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳುವ ಯೋಚನೆ ಮಾಡಿಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.ವಿಶ್ವಕಪ್ ವಿಜಯದ ನಂತರ ಕೇವಲ ಏಕದಿನ ಕ್ರಿಕೆಟ್‌ನ ಎರಡು ಸರಣಿಗಳಲ್ಲಿ ಮಾತ್ರ ಆಡಿರುವ 39 ವರ್ಷ ವಯಸ್ಸಿನ ಬ್ಯಾಟ್ಸ್‌ಮನ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡಲು ಹೋಗುವುದಿಲ್ಲವೆಂದು ಆಯ್ಕೆಗಾರರಿಗೆ ತಿಳಿಸಿದ್ದರು. ಆದ್ದರಿಂದ ಅವರಿಗೆ ವಿಶ್ರಾಂತಿ ನೀಡಿದೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿ.`ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಬೇಕು ಎನ್ನುವ ಕಾರಣಕ್ಕಾಗಿ ಈ ವಿರಾಮ. ಬೇರೆಯವರು ಏನು ಯೋಚನೆ ಮಾಡುತ್ತಾರೆಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲಿಯವರೆಗೆ ಆಟವನ್ನು ಆನಂದಿಸಲು ಸಾಧ್ಯವೋ ಅಲ್ಲಿಯವರೆಗೆ ಆಡುತ್ತ ಸಾಗುತ್ತೇನೆ. ಏಕದಿನ ತಂಡದ ಭಾಗವಾಗಿಯೂ ಇರುತ್ತೇನೆ~ ಎಂದು ಖಾಸಗಿ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry