ಸೋಮವಾರ, ಜನವರಿ 20, 2020
20 °C

ಕ್ರಿಕೆಟ್‌: ಬಾಂಗ್ಲಾದಲ್ಲಿ ಟಿ-20 ವಿಶ್ವಕಪ್‌ ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಪಿಟಿಐ): ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಗಲಭೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.ಮುಂದಿನ ಮಾರ್ಚ್ 16 ರಿಂದ ಏಪ್ರಿಲ್ 6ರವರೆಗೆ ಬಾಂಗ್ಲಾದಲ್ಲಿ ಟಿ-20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಪ್ರಮುಖ ಟೂರ್ನಿಗೆ ಎಲ್ಲ ಸಿದ್ಧತೆಗಳು ನಡೆದಿವೆ.

‘ಪರಿಸ್ಥಿತಿ ಹೀಗೆ ಮುಂದುವರಿದರೆ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 16 ತಂಡಗಳ ಆಟಗಾರರು ಹಾಗೂ ಸಿಬ್ಬಂದಿಗೆ ಭದ್ರತೆ ಒದಗಿಸುವುದು ಕಷ್ಟವಾಗಲಿದೆ.ಇಂತಹ ಪರಿಸ್ಥಿತಿಯಲ್ಲಿ ತಂಡಗಳೂ ಟೂರ್ನಿಯಲ್ಲಿ ಆಡಲು ಒಪ್ಪುವ ಸಾಧ್ಯತೆ ಕಡಿಮೆ. ಆದ್ದರಿಂದ ಟೂರ್ನಿ ಬಾಂಗ್ಲಾದ  ಕೈತಪ್ಪಲಿದೆಯೇ ಎಂಬ ಭಯ ಕಾಡುತ್ತಿದೆ’ ಎಂದು ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ನಜ್ಮುಲ್‌ ಹಸನ್ ತಿಳಿಸಿದ್ದಾರೆ.ಗಲಭೆಯು ವಿಶ್ವಕಪ್‌ ಟೂರ್ನಿ ನಡೆಸಲು ಉದ್ದೇಶಿಸಿರುವ ಢಾಕಾ, ಚಿತ್ತಗಾಂಗ್ ಮತ್ತು ಸಿಲೆಟ್ ನಲ್ಲಿಯೂ ತೀವ್ರ ಸ್ವರೂಪ ಪಡೆದುಕೊಂಡಿದೆ.

ಪ್ರತಿಕ್ರಿಯಿಸಿ (+)