ಕ್ರಿಕೆಟ್: ಮುಂಬೈ ಕ್ರಿಕೆಟ್ ಸಂಸ್ಥೆಗೆ ಗೆಲುವು

ಬೆಂಗಳೂರು: ಸೂರ್ಯಕುಮಾರ್ ಯಾದವ್ (66) ಅವರ ಆಕರ್ಷಕ ಬ್ಯಾಟಿಂಗ್ ಮತ್ತು ವಿಶಾಲ್ ದಾಬೋ ಲ್ಕರ್ (40ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಮುಂಬೈ ಕ್ರಿಕೆಟ್ ಸಂಸ್ಥೆ ತಂಡ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರ ಯದ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 219ರನ್ ಗಳಿಂದ ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆ ವಿರುದ್ಧ ಜಯಭೇರಿ ಮೊಳಗಿಸಿದೆ.
ಮೈಸೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಕ್ರಿಕೆಟ್ ಸಂಸ್ಥೆ ತಂಡ ಪ್ರಥಮ ಇನಿಂಗ್ಸ್ ನಲ್ಲಿ 92 ಓವರ್ಗಳಲ್ಲಿ 285ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಆಂಧ್ರ ಮೊದಲ ಇನಿಂಗ್ಸ್ನಲ್ಲಿ 75.4 ಓವರ್ ಗಳಲ್ಲಿ 156ರನ್ಗಳಿಗೆ ಆಲೌಟ್ ಆಗಿತ್ತು.
129ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಮುಂಬೈ 55 ಓವರ್ಗಳಲ್ಲಿ 7 ವಿಕೆಟ್ಗೆ 202ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಗೆಲುವಿಗೆ 331ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಆಂಧ್ರ ತಂಡ ದ್ವಿತೀಯ ಇನಿಂಗ್ಸ್ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 41.5 ಓವರ್ಗಳಲ್ಲಿ 112ರನ್ ಗಳಿಸಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್: ಮುಂಬೈ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 92 ಓವರ್ ಗಳಲ್ಲಿ 285 ಮತ್ತು 55 ಓವರ್ಗಳಲ್ಲಿ 7 ವಿಕೆಟ್ಗೆ 202 (ಅಖಿಲ್ ಹೆರ್ವಾಡ್ಕರ್ 45, ಸೂರ್ಯಕುಮಾರ್ ಯಾದವ್ 66; ಭಾರ್ಗವ್ ಭಟ್ 38ಕ್ಕೆ4).
ಆಂಧ್ರ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 75.4 ಓವರ್ಗಳಲ್ಲಿ 156 ಮತ್ತು 41.5 ಓವರ್ಗಳಲ್ಲಿ 112 (ಡಿ. ಶಿವಕುಮಾರ ಔಟಾಗದೆ 36; ವಿಶಾಲ್ ದಾಬೋಲ್ಕರ್ 40ಕ್ಕೆ4). ಫಲಿತಾಂಶ: ಮುಂಬೈಗೆ 219 ರನ್ ಗೆಲುವು ಹಾಗೂ 6 ಪಾಯಿಂಟ್್್.
ಗುಜರಾತ್ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 121.3 ಓವರ್ಗಳಲ್ಲಿ 9 ವಿಕೆಟ್ಗೆ 389 (ರುಜುಲ್ ಭಟ್ ಔಟಾಗದೆ 187; ಸಿದ್ದಾರ್ಥ್ ಕೌಲ್ 73ಕ್ಕೆ3, ಸುಬೇಕ್ ಗಿಲ್ 58ಕ್ಕೆ4).
ಪಂಜಾಬ್ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 84 ಓವರ್ಗಳಲ್ಲಿ 9 ವಿಕೆಟ್ಗೆ 293 (ಜಸಕರಣ್ ಸಿಂಗ್ ಔಟಾಗದೆ 70; ಹಾರ್ದಿಕ್ ಪಟೇಲ್ 70ಕ್ಕೆ3). ಫಲಿ ತಾಂಶ: ಪಂದ್ಯ ಡ್ರಾ. ಉಭಯ ತಂಡ ಗಳಿಗೂ ತಲಾ ಒಂದು ಪಾಯಿಂಟ್.
ಬೆಂಗಳೂರಿನಲ್ಲಿ ನಡೆದ ಪಂದ್ಯಗಳು: ಕೆಎಸ್ಸಿಎ ಕೋಲ್ಟ್ಸ್: ಮೊದಲ ಇನಿಂಗ್ಸ್: 83 ಓವರ್ಗಳಲ್ಲಿ 8 ವಿಕೆಟ್ಗೆ 232 (ಪವನ್ ದೇಶಪಾಂಡೆ 42, ಜಿ.ಎಸ್. ಚಿರಂಜೀವಿ 46, ಜೀಶನ್ ಅಲಿ ಸಯ್ಯದ್ 70; ವಿನೋದ್ ಕುಮಾರ್ 39ಕ್ಕೆ2). (ಕೇರಳ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯ).
ಫಲಿತಾಂಶ: ಪಂದ್ಯ ಡ್ರಾ. ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್.
ಒಡಿಶಾ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 64 ಓವರ್ಗಳಲ್ಲಿ 8 ವಿಕೆಟ್ಗೆ 241 (ಬಿಪಲಬ್ ಸಮಂತ್ರೆ 75; ಡೇವಿಡ್ ಮಥಿಯಾಸ್ 52ಕ್ಕೆ4). (ಕೆಎಸ್ಸಿಎ ಇಲೆವೆನ್ ಎದುರಿನ ಪಂದ್ಯ). ಫಲಿತಾಂಶ: ಪಂದ್ಯ ಡ್ರಾ.
ಕೆಎಸ್ಸಿಎ ಅಧ್ಯಕ್ಷರ ಇಲೆವೆನ್: ಮೊದಲ ಇನಿಂಗ್ಸ್: 82.5 ಓವರ್ಗಳಲ್ಲಿ 195 (ಮೀರ್ ಕೌನೈನ್ ಅಬ್ಬಾಸ್ 43; ಯಜುವೇಂದ್ರ ಚಾಹಲ್ 78ಕ್ಕೆ5).
ಹರಿಯಾಣ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 57.3 ಓವರ್ಗಳಲ್ಲಿ 211 (ಕೆ.ಸಿ.ಕಾರ್ಯಪ್ಪ 58ಕ್ಕೆ3, ಜೆ. ಸುಚಿತ್ 64ಕ್ಕೆ4). ಫಲಿತಾಂಶ: ಪಂದ್ಯ ಡ್ರಾ. ಹರಿಯಾಣಕ್ಕೆ 3, ಅಧ್ಯಕ್ಷರ ಇಲೆವೆನ್ಗೆ 1 ಪಾಯಿಂಟ್. ವಿದರ್ಭ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 83 ಓವರ್ಗಳಲ್ಲಿ 2 ವಿಕೆಟ್ಗೆ 190 (ಆರ್. ಸಂಜಯ್ 65) (ಬರೋಡ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯ). ಫಲಿತಾಂಶ: ಪಂದ್ಯ ಡ್ರಾ.
ತ್ರಿಪುರ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 83.1 ಓವರ್ಗಳಲ್ಲಿ 254 ಮತ್ತು 45.5 ಓವರ್ಗಳಲ್ಲಿ 116 (ಮಯಂಕ್ ದಾಗರ್ 45ಕ್ಕೆ7).
ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 78.5 ಓವರ್ಗಳಲ್ಲಿ 241 (ಕರುಣ್ ಕುಮಾರ್ 94) ಮತ್ತು 18 ಓವರ್ಗಳಲ್ಲಿ 6 ವಿಕೆಟ್ಗೆ 55. ಫಲಿತಾಂಶ: ಪಂದ್ಯ ಡ್ರಾ. ತ್ರಿಪುರಕ್ಕೆ 3, ಹಿಮಾಚಲ ಪ್ರದೇಶಕ್ಕೆ 1 ಪಾಯಿಂಟ್.
ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: ಮೊದಲ ಇನಿಂಗ್ಸ್: 116 ಓವರ್ಗಳಲ್ಲಿ 9 ವಿಕೆಟ್ಗೆ 387 ಡಿಕ್ಲೇರ್ಡ್ (ವಿಕ್ರಾಂತ್ ಆಟಿ 136). ಬಂಗಾಳ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 79 ಓವರ್ಗಳಲ್ಲಿ 7 ವಿಕೆಟ್ಗೆ 195. ಫಲಿತಾಂಶ: ಪಂದ್ಯ ಡ್ರಾ. ಉಭಯ ತಂಡಗಳಿಗೂ ತಲಾ ಒಂದು ಪಾಯಿಂಟ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.