ಸೋಮವಾರ, ಮೇ 25, 2020
27 °C

ಕ್ರಿಕೆಟ್: ಎಸ್‌ಡಿಎಂ ಕಾಲೇಜಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಎಸ್‌ಡಿಎಂ ಕಾಲೇಜಿಗೆ ಪ್ರಶಸ್ತಿ

ಧಾರವಾಡ: ಆತಿಥೇಯ ಎಸ್‌ಡಿಎಂ ದಂತವಿಜ್ಞಾನ ಕಾಲೇಜು ತಂಡಕ್ಕೆ ಭಾನುವಾರ ಅಖಿಲ ಭಾರತ ಅಂತರ ದಂತವಿಜ್ಞಾನ ಕಾಲೇಜು ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಪ್ರಶಸ್ತಿ ಗೆದ್ದಿದ್ದೇ ತಡ, ಮೈದಾನದ ತುಂಬ ಸಂಭ್ರಮದ ರಂಗು ಚೆಲ್ಲಿತು.ಜಿತೇಶ್ ಶರ್ಮಾ (21ಕ್ಕೆ4) ಉತ್ತಮ ಬೌಲಿಂಗ್ ಮತ್ತು  ಎಸ್. ಋಷಿಕ್  (33 ರನ್) ಬ್ಯಾಟಿಂಗ್  ನೆರವಿನಿಂದ ಬೆಂಗಳೂರಿನ ಮಾರುತಿ ಕಾಲೇಜು ತಂಡದ ವಿರುದ್ಧ 5 ವಿಕೆಟ್‌ಗಳಿಂದ ಜಯಿಸಿದ ಎಸ್‌ಡಿಎಂ ತಂಡವು ಮೈದಾನದಲ್ಲಿ ಮೆರವಣಿಗೆ ನಡೆಸಿತು.ಟೂರ್ನಿಯಲ್ಲಿ ಆತಿಥೇಯ ಕಾಲೇಜಿನ ಪುನೀತಕುಮಾರ ಭಾವಾ, ಜಿತೇಶ್ ಶರ್ಮಾ, ಎಸ್. ಋಷಿಕ್, ವರುಣ್ ಶೆಟ್ಟಿ ಕ್ರಮವಾಗಿ ಸರಣಿಶ್ರೇಷ್ಠ, ಪಂದ್ಯಶ್ರೇಷ್ಠ, ಉತ್ತಮ ಬೌಲರ್, ಫೀಲ್ಡರ್ ಮತ್ತು ವಿಕೆಟ್‌ಕೀಪರ್ ಗೌರವ ಗಳಿಸಿದರು. ಮಾರುತಿ ಕಾಲೇಜಿನ ಕರಣ್ ಮತ್ತು ಅಜೇಂದ್ರ  ಕ್ರಮವಗಿ ಉತ್ತಮ ಬ್ಯಾಟ್ಸ್‌ಮನ್ ಮತ್ತು ಆಲ್‌ರೌಂಡರ್ ಪ್ರಶಸ್ತಿ ಗಳಿಸಿದರು.  ಸ್ಕೋರ್: ಮಾರುತಿ ದಂತವಿಜ್ಞಾನ ಕಾಲೇಜು: 20 ಓವರುಗಳಲ್ಲಿ 8 ವಿಕೆಟ್‌ಗಳಿಗೆ 119 (ಕರಣ್ 23, ಮೊಹಸಿನ್ 36, ಪ್ರಸನ್ನ 20, ಜಿತೇಶ್ ಶರ್ಮಾ 21ಕ್ಕೆ4); ಎಸ್‌ಡಿಎಂ ದಂತವಿಜ್ಞಾನ ಕಾಲೇಜು ಧಾರವಾಡ: 17.3 ಓವರುಗಳಲ್ಲಿ 5 ವಿಕೆಟ್‌ಗೆ 121 (ಋಷಿಕ್ 33, ವರುಣ್ 23, ಸಾಗರ್ ಔಟಾಗದೇ 17, ಪುನೀತ್ 15, ಅಜೇಂದ್ರ 29ಕ್ಕೆ3).ಫಲಿತಾಂಶ: ಎಸ್‌ಡಿಎಂ ಕಾಲೇಜಿಗೆ 5 ವಿಕೆಟ್ ಜಯ ಮತ್ತು ಪ್ರಶಸ್ತಿ.ಹಾಕಿ: ರೈಲ್ವೇಸ್ ತಂಡಕ್ಕೆ ಪ್ರಶಸ್ತಿ

ಸೋನೆಪತ್ (ಐಎಎನ್‌ಎಸ್):  ಹರಿ ಯಾಣ ತಂಡವನ್ನು 7-1 ಗೋಲು ಗಳಿಂದ ಮಣಿಸಿದ ರೈಲ್ವೇಸ್ ತಂಡದವರು ರಾಷ್ಟ್ರೀಯ ಸೀನಿಯರ್ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನ್ನು ಗೆದ್ದುಕೊಂಡರು.ವಿರಾಮದ ವೇಳೆಗೆ ವಿಜಯಿ ತಂಡ 5-1 ರಲ್ಲಿ ಮುನ್ನಡೆ ಸಾಧಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.