ಭಾನುವಾರ, ಮಾರ್ಚ್ 7, 2021
28 °C

ಕ್ರಿಕೆಟ್: ಕುಸಿತದ ಹಾದಿ ಹಿಡಿದ ವಿಂಡೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಕುಸಿತದ ಹಾದಿ ಹಿಡಿದ ವಿಂಡೀಸ್

ಬ್ರಿಜ್‌ಟೌನ್ (ಬಾರ್ಬಡಾಸ್):  ವೇಗಿ ಇಶಾಂತ್ ಶರ್ಮ (31ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಸಿಲುಕಿದ ವೆಸ್ಟ್‌ಇಂಡೀಸ್ ತಂಡದವರು ಇಲ್ಲಿ ನಡೆಯುತ್ತಿರುವ ಭಾರತ ಎದುರಿನ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಕುಸಿತದ ಹಾದಿ ಹಿಡಿದಿದ್ದಾರೆ.ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆತಿಥೇಯ ವಿಂಡೀಸ್ ಎರಡನೇ ದಿನ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 37.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 98 ರನ್ ಪೇರಿಸಿತ್ತು. ಪ್ರವಾಸಿ ಭಾರತ ತಂಡದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 103 ರನ್ ಗಳಿಸಬೇಕಾಗಿದೆ.ಎಸ್.ಚಂದ್ರಪಾಲ್ (ಬ್ಯಾಟಿಂಗ್ 20) ಹಾಗೂ ಮಾರ್ಲೊನ್ ಸ್ಯಾಮುಯೆಲ್ಸ್ (ಬ್ಯಾಟಿಂಗ್ 21) ತಂಡಕ್ಕೆ ಆಸರೆಯಾಗಿದ್ದರು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ ವಿ.ವಿ.ಎಸ್.ಲಕ್ಷ್ಮಣ್ (85) ಹಾಗೂ ಸುರೇಶ್ ರೈನಾ (53) ಅವರ ಅರ್ಧ ಶತಕಗಳ ಮೂಲಕ 68 ಓವರ್‌ಗಳಲ್ಲಿ 201 ರನ್ ಕಲೆಹಾಕಿತ್ತು.ಪಂದ್ಯದ ಎರಡನೇ ದಿನವಾದ ಬುಧವಾರ ವೇಗಿ ಇಶಾಂತ್ ಕೆರಿಬಿಯನ್ ನಾಡಿನ ಪಡೆಗೆ ಆರಂಭದಲ್ಲೇ ಪೆಟ್ಟು ನೀಡಿದರು. ಮೊದಲ ದಿನದ ಆಟದ ಅಂತ್ಯಕ್ಕೆ 30 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಆತಿಥೇಯರು ಮತ್ತೆ ಆಘಾತಕ್ಕೆ ಒಳಗಾದರು.18 ರನ್ ಗಳಿಸಿ ಆಡುತ್ತಿದ್ದ ರಾಮನರೇಶ್ ಸರವಣ ಅವರನ್ನು ಇಶಾಂತ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. `ನೈಟ್ ವಾಚ್‌ಮನ್~ ಆಗಿ ಬಂದಿದ್ದ ದೇವೇಂದ್ರ ಬಿಶೂ ಕೂಡ ಶರ್ಮಗೆ ವಿಕೆಟ್ ಒಪ್ಪಿಸಿದರು.ಲಕ್ಷ್ಮಣ್, ರೈನಾ ಆಸರೆ: ಮೊದಲ ದಿನದ ಆಟದ ವೇಳೆ ಲಕ್ಷ್ಮಣ್ ಹಾಗೂ ರೈನಾ ಅವರು ಭಾರತ ತಂಡಕ್ಕೆ ಆಸರೆಯಾದರು. 38 ರನ್‌ಗಳಿಗೆ 4 ವಿಕೆಟ್ ಪತನಗೊಂಡಿದ್ದಾಗ ಜೊತೆಗೂಡಿದ ಇವರು 117 ರನ್ ಸೇರಿಸಿದರು. ಇದು ಭಾರತ ತಂಡವನ್ನು ಆರಂಭದ ಕುಸಿತದಿಂದ ಪಾರು ಮಾಡಿತು.ಲಕ್ಷ್ಮಣ್ (85; 146 ಎಸೆತ, 12 ಬೌಂಡರಿ) ಟೆಸ್ಟ್‌ನಲ್ಲಿ 50ನೇ ಅರ್ಧ ಶತಕ ಗಳಿಸಿದರು. ಇವರಿಗೆ ಸಾಥ್ ನೀಡಿದ ರೈನಾ (53; 105 ಎಸೆತ, 7 ಬೌಂಡರಿ) ತಂಡಕ್ಕೆ ಈ ಸರಣಿಯಲ್ಲಿ ಎರಡನೇ ಬಾರಿ ಆಪತ್ಬಾಂಧವರಾದರು.ಲಕ್ಷ್ಮಣ್ ಟೆಸ್ಟ್‌ನಲ್ಲಿ ಎಂಟು ಸಾವಿರ ರನ್‌ಗಳ ಗೆರೆ ಮುಟ್ಟಿದರು. ಇದು ಅವರ 122 ಟೆಸ್ಟ್ ಪಂದ್ಯ. ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಆಟಗಾರ ಎನಿಸಿದರು. ಸಚಿನ್ ತೆಂಡೂಲ್ಕರ್ (14692), ರಾಹುಲ್ ದ್ರಾವಿಡ್ (12220) ಹಾಗೂ ಸುನಿಲ್ ಗಾವಸ್ಕರ್ (10122) ಅವರು ವಿವಿಎಸ್‌ಗಿಂತ ಮುಂದಿದ್ದಾರೆ. ಸ್ಕೋರು ವಿವರ

ಭಾರತ ಮೊದಲ ಇನಿಂಗ್ಸ್ 68 ಓವರ್‌ಗಳಲ್ಲಿ 201

ವಿ.ವಿ.ಎಸ್.ಲಕ್ಷ್ಮಣ್ ಸಿ ಭರತ್ ಬಿ ದೇವೇಂದ್ರ ಬಿಶೂ  85

ಸುರೇಶ್ ರೈನಾ ಸಿ ಭರತ್ ಬಿ ದೇವೇಂದ್ರ ಬಿಶೂ  53

ಎಂ.ಎಸ್.ದೋನಿ ಸಿ ಚಂದ್ರಪಾಲ್ ಬಿ ಫಿಡೆಲ್ ಎಡ್ವರ್ಡ್ಸ್  02

ಹರಭಜನ್ ಸಿಂಗ್ ಸಿ ಭರತ್ ಬಿ ಫಿಡೆಲ್ ಎಡ್ವರ್ಡ್ಸ್  05

ಪ್ರವೀಣ್ ಕುಮಾರ್ ಸ್ಟಂಪ್ಡ್ ಕಾರ್ಲ್‌ಟನ್ ಬಾ ಬಿ ದೇವೇಂದ್ರ ಬಿಶೂ  12

ಅಭಿಮನ್ಯು ಮಿಥುನ್ ಬಿ ಫಿಡೆಲ್ ಎಡ್ವರ್ಡ್ಸ್  00

ಇಶಾಂತ್ ಶರ್ಮ ಔಟಾಗದೆ  01

ಇತರೆ (ಬೈ-5, ಲೆಗ್‌ಬೈ-4, ವೈಡ್-11, ನೋಬಾಲ್-6)  26

ವಿಕೆಟ್ ಪತನ: 1-1 (ಮುಕುಂದ್; 1.3); 2-8 (ದ್ರಾವಿಡ್; 10.1); 3-38 (ವಿಜಯ್; 25.1); 4-38 (ಕೊಹ್ಲಿ; 25.3); 5-155 (ರೈನಾ; 55.4); 6-167 (ದೋನಿ; 58.6); 7-183 (ಹರಭಜನ್; 62.2); 8-187 (ಲಕ್ಷ್ಮಣ್; 63.5); 9-189 (ಮಿಥುನ್; 64.5); 10-201 (ಪ್ರವೀಣ್; 67.6).

ಬೌಲಿಂಗ್: ಫಿಡೆಲ್ ಎಡ್ವರ್ಡ್ಸ್ 19-2-56-3 (ನೋಬಾಲ್-4, ವೈಡ್-3), ರವಿ ರಾಂಪಾಲ್ 16-6-38-3, ಡರೆನ್ ಸಮಿ 19-4-52-1, ದೇವೇಂದ್ರ ಬಿಶೂ 14-1-46-3 (ನೋಬಾಲ್-2).

 ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್ 37.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98

ಅಡ್ರಿಯಾನ್ ಭರತ್ ಸಿ ವಿರಾಟ್ ಕೊಹ್ಲಿ ಬಿ ಇಶಾಂತ್ ಶರ್ಮ  03

ಲೆಂಡ್ಲ್ ಸಿಮಾನ್ಸ್ ಸಿ ದೋನಿ ಬಿ ಪ್ರವೀಣ್ ಕುಮಾರ್  02

ರಾಮನರೇಶ್ ಸರವಣ ಎಲ್‌ಬಿಡಬ್ಲ್ಯು ಬಿ ಇಶಾಂತ್ ಶರ್ಮ  18

ಡರೆನ್ ಬ್ರಾವೊ ಸಿ ದೋನಿ ಬಿ ಅಭಿಮನ್ಯು ಮಿಥುನ್  09

ದೇವೇಂದ್ರ ಬಿಶೂ ಸಿ ವಿರಾಟ್ ಕೊಹ್ಲಿ ಬಿ ಇಶಾಂತ್ ಶರ್ಮ  13

ಎಸ್.ಚಂದ್ರಪಾಲ್ ಬ್ಯಾಟಿಂಗ್  20

ಮಾರ್ಲೊನ್ ಸ್ಯಾಮುಯೆಲ್ಸ್ ಬ್ಯಾಟಿಂಗ್ 21

ಇತರೆ (ಲೆಗ್‌ಬೈ-2, ವೈಡ್-5, ನೋಬಾಲ್-5)  12

ವಿಕೆಟ್ ಪತನ: 1-3 (ಭರತ್; 3.5); 2-5 (ಸಿಮಾನ್ಸ್; 4.4); 3-30 (ಬ್ರಾವೊ; 11.5); 4-53 (ಬಿಶೂ; 17.4); 5-57 (ಸರವಣ; 17.6).

ಬೌಲಿಂಗ್: ಪ್ರವೀಣ್ ಕುಮಾರ್ 17-3-39-1, ಇಶಾಂತ್ ಶರ್ಮ 10-4-31-3 (ನೋಬಾಲ್-2, ವೈಡ್-1), ಅಭಿಮನ್ಯು ಮಿಥುನ್ 8.3-3-18-1 (ನೋಬಾಲ್-3), ಹರಭಜನ್ ಸಿಂಗ್ 2-0-8-0.

(ವಿವರ ಅಪೂರ್ಣ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.