ಶುಕ್ರವಾರ, ಮೇ 7, 2021
26 °C

ಕ್ರಿಕೆಟ್: ಜೂನ್ 17ಕ್ಕೆ ಭಾರತ ಜೂನಿಯರ್ ತಂಡ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಜೂನ್ 30 ರಿಂದ ನಡೆಯಲಿರುವ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಆಯ್ಕೆ ಇದೇ 17 ರಂದು ಇಲ್ಲಿ ನಡೆಯಲಿದೆ.`19 ವರ್ಷದೊಳಗಿನ ಆಟಗಾರರ ಶಿಬಿರ ಇಲ್ಲಿ ಸೋಮವಾರ ಆರಂಭವಾಗಿದೆ. ತ್ರಿಕೋನ ಏಕದಿನ ಸರಣಿಗೆ ಭಾರತ ತಂಡದ ಆಯ್ಕೆ ಜೂ. 17 ರಂದು ನಡೆಯಲಿದೆ' ಎಂದು ಬಿಸಿಸಿಐ ಮೂಲಗಳು ಹೇಳಿವೆ.ಚಂದ್ರಕಾಂತ್ ಪಂಡಿತ್ (ಅಧ್ಯಕ್ಷ), ಅಮನ್ ಕುಮಾರ್, ಕೆ.ಜಯ ರಾಮನ್, ಅರೂಪ್ ಭಟ್ಟಾಚಾರ್ಯ, ಪ್ರೀತಂ ಗಂಧೆ ಹಾಗೂ ಅನುರಾಗ್ ಠಾಕೂರ್ (ಸಂಚಾಲಕ) ಅವರು ತಂಡದ ಆಯ್ಕೆ ಸಮಿತಿಯಲ್ಲಿದ್ದಾರೆ.ಡಾರ್ವಿನ್‌ನಲ್ಲಿ ಜುಲೈ 12ರ ವರೆಗೆ ನಡೆಯಲಿರುವ ಮೂರು ರಾಷ್ಟ್ರಗಳ ಸರಣಿಯಲ್ಲಿ ಭಾರತ ಅಲ್ಲದೆ ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಪಾಲ್ಗೊಳ್ಳಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.