ಶನಿವಾರ, ಮೇ 21, 2022
25 °C

ಕ್ರಿಕೆಟ್: ಪಾಕಿಸ್ತಾನ ತಂಡಕ್ಕೆ ಆಫ್ರಿದಿ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಐಎಎನ್‌ಎಸ್): ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ 14 ದಿನವಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ನಾಯಕ ಯಾರಾಗಬೇಕು ಎನ್ನುವ ಗೊಂದಲಕ್ಕೆ ತೆರೆ ಬಿದ್ದಿದೆ. ಕೊನೆಗೂ ಶಾಹೀದ್ ಆಫ್ರಿದಿ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.‘ಏಕದಿನ ಪಂದ್ಯಗಳ ನಾಯಕರಾಗಿದ್ದ ಶಾಹೀದ್ ಆಫ್ರಿದಿ ಅವರೇ ವಿಶ್ವಕಪ್ ಕ್ರಿಕೆಟ್ ಟೂರ್ನಿಗೂ ನಾಯಕರಾಗಿ ಮುಂದುವರೆಯಲಿದ್ದಾರೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ  ಇಜಾಜ್  ಬಟ್  ಶುಕ್ರವಾರ  ಸ್ಪಷ್ಟಪಡಿಸಿ  ದ್ದಾರೆ.  ವಿಶ್ವಕಪ್‌ಗೆ  ಪಾಕಿಸ್ತಾನ  ತಂಡದ  ನಾಯಕನ  ಆಯ್ಕೆ  ವಿಚಾರ  ವನ್ನು ಮಂದೂಡುತ್ತಲೇ ಬಂದಿದ್ದ ಪಿಸಿಬಿ ಕೊನೆಗೂ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಿದೆ. ‘ದ ಎಕ್ಸಪ್ರೆಸ್’ ಮಾಧ್ಯಮ ಸಮೂಹವು ಕೆಲ ದಿನಗಳ ಹಿಂದೆ ಆಯೋಜಿಸಿದ್ದ ಸಾರ್ವಜನಿಕ ಮತದಾನದಲ್ಲಿ ಶಾಹೀದ್ ಆಫ್ರಿದಿಯೇ ನಾಯಕರಾಗಬೇಕು ಎಂದು ಪಾಕಿಸ್ತಾನದ ಶೇ. 94ರಷ್ಟು ಜನರು ಮತ ಚಲಾಯಿಸಿದ್ದರು. ಮಿಸ್ಬಾಹ್- ಉಲ್-ಹಕ್ ಹಾಗೂ ಆಫ್ರಿದಿ ನಡುವೆ ನಾಯಕತ್ವ ಸ್ಥಾನಕ್ಕೆ ಪೈಪೋಟಿ ನಡೆದಿತ್ತು. ಆದರೆ ಕೊನೆಯಲ್ಲಿ ಪಿಸಿಬಿ ಟಾಸ್ ಮಾಡುವ ಮೂಲಕ ನಾಯಕನನ್ನು ಅಂತಿಮಗೊಳಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.