ಬುಧವಾರ, ಜೂನ್ 3, 2020
27 °C

ಕ್ರಿಕೆಟ್: ವೆಸ್ಟ್‌ಇಂಡೀಸ್‌ಗೆ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ವೆಸ್ಟ್‌ಇಂಡೀಸ್‌ಗೆ ಆಘಾತ

ಮೀರ್‌ಪುರ (ಪಿಟಿಐ): ಮರ್ಲಾನ್ ಸ್ಯಾಮುಯಲ್ಸ್ (58; 42 ಎ., 2 ಬೌಂಡರಿ, 4 ಸಿಕ್ಸರ್) ಅವರ ಅರ್ಧ ಶತಕದ ಬಲವಿದ್ದರೂ ಪ್ರವಾಸಿ ವೆಸ್ಟ್ ಇಂಡೀಸ್ ತಂಡದವರು ಬಾಂಗ್ಲಾದೇಶ ವಿರುದ್ಧ ಮಂಗಳವಾರ ಇಲ್ಲಿ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಮೂರು ವಿಕೆಟ್‌ಗಳ ಅಂತರದಿಂದ ಸೋಲನುಭವಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರುಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 132 ರನ್ ಮಾತ್ರ ಗಳಿಸಿತು. ಇದಕ್ಕೆ ಉತ್ತರವಾಗಿ ಆತಿಥೇಯ ಬಾಂಗ್ಲಾ 19.5 ಓವರುಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 135 ರನ್ ಕಲೆಹಾಕಿತು.

ಸಂಕ್ಷಿಪ್ತ ಸ್ಕೋರ್:

ವೆಸ್ಟ್ ಇಂಡೀಸ್: 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 (ಲೆಂಡ್ಲ್ ಸಿಮಾನ್ಸ್ 23, ಮರ್ಲಾನ್ ಸ್ಯಾಮುಯಲ್ಸ್ 58, ದೆನೇಶ್ ರಾಮ್ದಿನ್ ಔಟಾಗದೆ 10; ಅಬ್ದುರ್ ರಜಾಕ್ 27ಕ್ಕೆ2, ಶಫಿವುಲ್ ಇಸ್ಲಾಮ್ 19ಕ್ಕೆ2, ರುಬೆಲ್ ಹುಸೇನ್ 32ಕ್ಕೆ1, ಶಕೀಬ್ ಅಲ್ ಹಸನ್ 25ಕ್ಕೆ2, ನಯೀಮ್ ಇಸ್ಲಾಮ್ 23ಕ್ಕೆ1); ಬಾಂಗ್ಲಾದೇಶ: 19.5 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 135 (ತಮೀಮ್ ಇಕ್ಬಾಲ್ 11, ಇಮ್ರುಲ್ ಕೇಯ್ಸ 22, ಮೊಹಮ್ಮದ್ ಅಶ್ರಫುಲ್ 24, ಮುಷ್ಫಿಕರ್ ರಹೀಮ್ ಔಟಾಗದೆ 41, ನಯೀಮ್ ಇಸ್ಲಾಮ್ 10, ನಾಸೀರ್ ಹುಸೇನ್ 18; ರವಿ ರಾಂಪಾಲ್ 28ಕ್ಕೆ2, ಡೇರನ್ ಸಮಿ 30ಕ್ಕೆ1, ಅಂಥೋನಿ ಮಾರ್ಟಿನ್ 20ಕ್ಕೆ1, ಮರ್ಲಾನ್ ಸ್ಯಾಮುಯಲ್ಸ್ 14ಕ್ಕೆ2, ಕಾರ್ಲೊಸ್ ಬರ್ತ್‌ವೈಟ್ 25ಕ್ಕೆ1); ಫಲಿತಾಂಶ: ಬಾಂಗ್ಲಾಕ್ಕೆ 3 ವಿಕೆಟ್‌ಗಳ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.