ಶನಿವಾರ, ಮೇ 8, 2021
20 °C
ನ್ಯಾಯಾಧೀಶ ಪಿ.ವಿ. ಸಿಂಗ್ರಿ ಕಳವಳ

ಕ್ರಿಮಿನಲ್ ಚಟುವಟಿಕೆಗೆ ಮಕ್ಕಳ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲಘಟ್ಟಪುರ: `ಬಡತನದಿಂದಾಗಿ ಬಾಲಕಾರ್ಮಿಕರ ಸಂಖ್ಯೆ ಜಾಸ್ತಿಯಾಗಿದ್ದು, ಕೆಲವು ದುಷ್ಟಶಕ್ತಿಗಳು ಮಕ್ಕಳನ್ನು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿವೆ' ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಧೀಶ ಪಿ.ವಿ. ಸಿಂಗ್ರಿ ಕಳವಳ ವ್ಯಕ್ತಪಡಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಲಘಟ್ಟಪುರ ಠಾಣೆ, ಕಾರ್ಮಿಕ ಇಲಾಖೆ, ಕಗ್ಗಲೀಪುರ ಗ್ರಾಮ ಪಂಚಾಯ್ತಿಯ ವತಿಯಿಂದ ಕಗ್ಗಲೀಪುರದಲ್ಲಿ ಈಚೆಗೆ ಆಯೋಜಿಸಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಬಡ ಮಕ್ಕಳನ್ನು ಗುರುತಿಸಿ ಆಸೆ, ಅಮಿಷ ತೋರಿಸಿ ಕಾನೂನುಬಾಹಿರ ಕೆಲಸದಲ್ಲಿ ತೊಡಗಿಸುವ ವ್ಯಕ್ತಿಗಳಿಗೆ ಉಗ್ರ ಶಿಕ್ಷೆಯಾಗಬೇಕು. ಆಗ ಮಾತ್ರ ಸಮಾಜದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಬಹುದು' ಎಂದರು.`ಗಣಿಗಾರಿಕೆ, ಇಟ್ಟಿಗೆ, ಸಿಮೆಂಟ್, ಮನೆಕೆಲಸದಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ಕೆಲಸದ ಸಂದರ್ಭದಲ್ಲಿ ಕಾರ್ಮಿಕರು ಅವಘಡದಲ್ಲಿ ಮೃತಪಟ್ಟರೆ ಸರ್ಕಾರ ಯಾವುದೇ ಸವಲತ್ತು ನೀಡುವುದಿಲ್ಲ' ಎಂದು ಅವರು ವಿಷಾದಿಸಿದರು.ಜಿಲ್ಲಾ ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಂ.ಎಚ್.ಅಣ್ಣಯ್ಯ, ಪೊಲೀಸ್ ಅಧಿಕಾರಿ ಕೆ.ವಿಶ್ವನಾಥ್, ಕಾರ್ಮಿಕ ನಿರೀಕ್ಷಕ ಡಿ.ಸಿ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.