ಮಾಸ್ಕೊ (ಎಎಫ್ಪಿ, ಐಎಎನ್ಎಸ್): ಕ್ರಿಮಿಯಾ ಈಗ ನಮ್ಮ ಅವಿಭಾಜ್ಯ ಅಂಗವಾಗಿದೆ ಎಂದು ಘೋಷಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಈ ಸಂಬಂಧದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ತಾನೀಗ ಉಕ್ರೇನ್ ಭಾಗವಾಗಿಲ್ಲ ಎಂದು ಕ್ರಿಮಿಯಾ ಗಣರಾಜ್ಯ ಘೋಷಿಸಿಕೊಂಡಿರುವ ಬೆನ್ನಲ್ಲೇ ರಷ್ಯಾ ಈ ಕ್ರಮ ಕೈಗೊಂಡಿದೆ.
ಕ್ರಿಮಿಯಾದಲ್ಲಿ ಇತ್ತೀಚೆಗೆ ನಡೆದ ಜನಮತಗಣನೆಗೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳ ತೀವ್ರ ವಿರೋಧ ಹಾಗೂ ದಿಗ್ಬಂಧನದ ನಡುವೆಯೂ ರಷ್ಯಾ, ಕ್ರಿಮಿಯಾ ಜನರ ಬೇಡಿಕೆಯನ್ನು ಈಡೇರಿಸಿದೆ.

‘ಮಾ. 16ರಂದು ಭಾನುವಾರ ಕ್ರಿಮಿಯಾದಲ್ಲಿ ನಡೆದ ಜನಮತಗಣನೆಯಲ್ಲಿ, ವಿಶೇಷ ಸ್ಥಾನಮಾನ ಹೊಂದಿರುವ ಸೆವಾಸ್ಟೊಪೊಲ್ ನಗರ ಒಳಗೊಂಡಂತೆ, ಕ್ರಿಮಿಯಾ ಸ್ವಂತಂತ್ರ ರಾಷ್ಟ್ರವಾಗಿ ರೂಪುಗೊಳ್ಳುವುದರ ಕುರಿತು ಅಲ್ಲಿನ ಜನತೆ ಹೊಂದಿರುವ ಇಚ್ಛೆಯನ್ನು ಪರಿಗಣಿಸಲಾಗಿದೆ’ ಎಂಬ ಅಂಶವನ್ನು ಈ ಒಪ್ಪಂದ ಒಳಗೊಂಡಿದೆ ಎಂದು ‘ಕ್ಸಿನ್ಹುವಾ’ ವರದಿ ಮಾಡಿದೆ.

ರಷ್ಯಾ ಸೇರುವ ಕ್ರಿಮಿಯಾ ಕೋರಿಕೆಯನ್ನು ಮಂಗಳವಾರ ಸಂಸತ್ ಗಮನಕ್ಕೆ ತಂದಿರುವ ಪುಟಿನ್, ದೇಶದ ಭಾಗವಾಗಲು ಇಚ್ಛಿಸಿರುವ ಕ್ರಿಮಿಯಾ ಜತೆಗಿನ ಒಪ್ಪಂದವನ್ನು ಅನುಮೋದಿಸುವಂತೆ ಸೂಚಿಸಿದ್ದಾರೆ ಎಂದು ಕ್ರೆಮ್ಲಿನ್ ಮಾಧ್ಯಮ ಮೂಲ ತಿಳಿಸಿದೆ. ಇದಕ್ಕೂ ಮುನ್ನ ಕ್ರಿಮಿಯಾ ಪಾರ್ಲಿಮೆಂಟ್, ಸ್ವತಂತ್ರ ಪ್ರಾಂತ್ಯವಾದ ತನ್ನನ್ನು ರಷ್ಯಾದ ಹೊಸ ಘಟಕದ ಸದಸ್ಯನನ್ನಾಗಿ ಸೇರಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿತ್ತು.

ಕ್ರಿಮಿಯಾದಲ್ಲಿ ನಡೆದ ಜನಮತಗಣನೆಯಲ್ಲಿ ಶೇ 96.6 ಮಂದಿ ಉಕ್ರೇನ್ನಿಂದ ಬೇರ್ಪಟ್ಟು ರಷ್ಯಾ ಸೇರಲು ಮತ ಚಲಾಯಿಸಿದ್ದರು.

ಅಮೆರಿಕ ಎಚ್ಚರಿಕೆ: ಉಕ್ರೇನ್ನ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ರಷ್ಯಾ ಗೌರವಿಸದಿದ್ದರೆ, ಜಮಾಯಿಸಿರುವ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಲು ವಿಫಲವಾದರೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ದಿಗ್ಬಂಧನಕ್ಕೆ ನಿರ್ಧಾರ: ರಷ್ಯಾ ನಡೆಯಿಂದ ಕೆರಳಿರುವ ಯೂರೋಪ್ ಒಕ್ಕೂಟವು ವೀಸಾ ನಿಷೇಧ ಮತ್ತು ಆಸ್ತಿ ಮುಟ್ಟುಗೋಲು ಸೇರಿದಂತೆ ರಷ್ಯಾ ಮತ್ತು ಉಕ್ರೇನ್ನ 21 ಅಧಿಕಾರಿಗಳ ವಿರುದ್ಧ ದಿಗ್ಬಂಧನ ಹೇರಲು ತೀರ್ಮಾನಿಸಿದೆ.

ಕ್ರಿಮಿಯಾ ಈಗಲೂ ಉಕ್ರೇನ್ ಭಾಗ ಬ್ರಿಟನ್:  ಕ್ರಿಮಿಯಾದಲ್ಲಿ ನಡೆದಿರುವ ಜನಮತಗಣನೆಯಲ್ಲಿ ರಷ್ಯಾ ಪರ ಒಲವು ವ್ಯಕ್ತವಾಗಿದ್ದರೂ, ಕ್ರಿಮಿಯಾವನ್ನು ತಾನು ಇಂದಿಗೂ ಉಕ್ರೇನ್ ಭಾಗವಾಗಿಯೇ ಕಾಣುವುದಾಗಿ ಬ್ರಿಟನ್ ಹೇಳಿದೆ.

ಉಕ್ರೇನ್ ಬಿಕ್ಕಟ್ಟು ಕುರಿತು ಸೋಮವಾರ ಯೂರೋಪ್ ಒಕ್ಕೂಟದ ವಿದೇಶಾಂಗ ಸಚಿವರುಗಳ ಸಭೆ ನಡೆದ ಬೆನ್ನಲ್ಲೇ, ‘ಕ್ರಿಮಿಯಾ ಇಂದಿಗೂ ಉಕ್ರೇನ್ ಭಾಗ ಎಂದು ಬ್ರಿಟನ್ ಮತ್ತು ಮಿತ್ರರಾಷ್ಟ್ರಗಳು ಎಂದು ಭಾವಿಸುತ್ತವೆ’ ಎಂದು ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೇಗ್ ಹೇಳಿದ್ದಾರೆ.

ವಿಶ್ವಸಂಸ್ಥೆ ಟೀಕೆ: ರಷ್ಯಾ ಜತೆ ಸೇರ್ಪಡೆಯಾಗುವ ಸಂಬಂಧ ಕ್ರಿಮಿಯಾದಲ್ಲಿ ನಡೆದ ಜನಮತಗಣನೆ ಅಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡುವಂತೆ ಮಾಡಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಸಿಂಗ್ ಜತೆ ಪುಟಿನ್ ಮಾತುಕತೆ: ಕ್ರಿಮಿಯಾದಲ್ಲಿನ ಸ್ಥಿತಿಗತಿ ಕುರಿತು ರಷ್ಯಾ ಅಧ್ಯಕ್ಷ ಪುಟಿನ್ ಅವರು ಮಂಗಳವಾರ ರಾತ್ರಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.