ಪಾಠ-12: ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಅನುಕ್ರಮದಲ್ಲಿರುವ ವ್ಯತ್ಯಾಸ. ಕನ್ನಡ ಭಾಷೆಯ ವಾಕ್ಯದಲ್ಲಿ ಕರ್ತೃ, ಕರ್ಮ ಮತ್ತು ಕ್ರಿಯಾಪದಗಳು ಅನುಕ್ರಮವಾಗಿ ಬರುತ್ತವೆ.

ಉದಾಹರಣೆ: ಅವನು ಹಣ್ಣನ್ನು ತಿನ್ನುತ್ತಾನೆ. ಈ ವಾಕ್ಯದಲ್ಲಿ ಅವನು - ಕರ್ತೃಪದ. ಹಣ್ಣನ್ನು - ಕರ್ಮಪದ. ತಿನ್ನುತ್ತಾನೆ - ಕ್ರಿಯಾಪದ. ಮೇಲೆ ಉದಾಹರಿಸಿದ ಕನ್ನಡ ವಾಕ್ಯವನ್ನು ಇಂಗ್ಲಿಷ್ಗೆ ಭಾಷಾಂತರಿಸಬೇಕಾದಾಗ ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಅನುಕ್ರಮವು ಇಂಗ್ಲಿಷ್ನಲ್ಲಿ ಬೇರೆಯಾಗುತ್ತದೆ. ಹೇಗೆಂದರೆ ಈ ಮೂರು ಪದಗಳು ಕರ್ತೃ, ಕ್ರಿಯಾ ಮತ್ತು ಕರ್ಮ ಎಂಬ ಅನುಕ್ರಮದಲ್ಲಿ ಬರುತ್ತವೆ.

ಅವನು (ಕರ್ತೃಪದ ) ಹಣ್ಣನ್ನು (ಕರ್ಮಪದ) ತಿನ್ನುತ್ತಾನೆ (ಕ್ರಿಯಾಪದ )
He / eats / a / fruit
Subject / Verb / Article / Object

ಇದೇ ಸಂದರ್ಭದಲ್ಲಿ ಒಂದಿಷ್ಟು ಕ್ರಿಯಾಪದದ ಬಗ್ಗೆ ಯೋಚಿಸೋಣ.

ಕ್ರಿಯಾಪದವನ್ನೂ ಸಹ ಇಂಗ್ಲಿಷ್ ಭಾಷೆಯಲ್ಲಿ ಹಲವಾರು ರೀತಿಯಲ್ಲಿ ವರ್ಗೀಕರಿಸಲಾಗಿದೆ. ಇಲ್ಲಿ ಒಂದು ವರ್ಗೀಕರಣದ ಪ್ರಕಾರ, ಕ್ರಿಯಾಪದಗಳನ್ನು ಸಕರ್ಮಕ ಕ್ರಿಯಾಪದ ಮತ್ತು ಅಕರ್ಮಕ ಕ್ರಿಯಾಪದಗಳನ್ನು ಗಮನಿಸೋಣ. ವಾಕ್ಯದಲ್ಲಿರುವ ಕ್ರಿಯಾಪದಕ್ಕೆ ಏನನ್ನು ಯಾರನ್ನು ಯಾವುದನ್ನು ಎಂಬ ಪ್ರಶ್ನೆಯನ್ನು ಹಾಕಿದಾಗ ಬರುವ ಉತ್ತರವನ್ನು ಪ್ರತ್ಯಕ್ಷ ಕರ್ಮಪದ /Direct object ಎಂದು ಕರೆಯಲಾಗುತ್ತದೆ. ಒಂದು ವೇಳೆ ಯಾರಿಗೆ ಎಂಬ ಪ್ರಶ್ನೆಗೆ ಬರುವ ಉತ್ತರವನ್ನು ಪರೋಕ್ಷ ಕರ್ಮಪದ/Indirect object ಎಂದು ಕರೆಯಲಾಗುತ್ತದೆ.

ಅವನು ಹಣ್ಣನ್ನು ತಿನ್ನುತ್ತಾನೆ / He eats a fruit.
ಈ ವಾಕ್ಯದಲ್ಲಿ ತಿನ್ನುತ್ತಾನೆ ಎಂಬ ಕ್ರಿಯಾಪದಕ್ಕೆ ಏನನ್ನು ಎಂದು ಪ್ರಶ್ನಿಸಿದಾಗ ಬರುವ ಉತ್ತರ ಹಣ್ಣು / Fruit ಎಂಬ ಪದವು ಪ್ರತ್ಯಕ್ಷ ಕರ್ಮಪದ /Direct object ಆಗಿರುತ್ತದೆ ಮತ್ತು ಈ ಕರ್ಮಪದವು ಎಣಿಸಲು ಬರುವ ನಾಮಪದಗಳ ಗುಂಪಿಗೆ ಸೇರುತ್ತದೆ. ಅದರಲ್ಲೂ ಇದು ರೂಢನಾಮ ಪದವಾಗಿರುತ್ತದೆ. ಈ ಪದದ ಮೊದಲನೇ ಅಕ್ಷರವಾದ F ಎಂಬುದು ವ್ಯಂಜನಾಕ್ಷರವಾಗಿರುವುದರಿಂದ ಪದದ ಮೊದಲಿಗೆ A ಎಂಬ ಉಪಪದವನ್ನು ಹಾಕಲಾಗಿದೆ.

ಕಲಿಯುವ ಪದಗಳು: (ಸಕರ್ಮಕ ಕ್ರಿಯಾಪದಗಳು/Transitive verbes)
ಬಯ್ಯು/Abuse, ಸಾಧಿಸಿ ಪಡೆ/Achieve, ಮೆಚ್ಚು/Admire, ಒಪ್ಪು/ Agree, ಗಡಿಪಾರು ಮಾಡು/Banish, ಹೊಡೆ/Beat, ಕಚ್ಚು/Bite, ನಿಂಧಿಸು/Blame, ಸೆರೆಹಿಡಿ/Capture, ದೃಢಿಕರಿಸು/Certify, ಬೆನ್ನಟ್ಟು/Chase, ಸ್ವಚ್ಛಮಾಡು/ Clean, ಡಿಕ್ಕಿಹೊಡೆ/Dosh, ವರೆಚಿಸು/Deceive, ಮುಳುಗಿಸು/Dip, ದಾನಮಾಡು/Donate, ವಿದ್ಯೆಕಲಿಸು/Educate, ಮೇಲೆತ್ತು/Elevate, ಸುತ್ತುವರಿ/ Enclose, ನಿರ್ಮೂಲಮಾಡು/Eradicate.

ಕಲಿಯುವ ಪದಗಳು
(ರೂಢನಾಮಗಳು/Common Nouns)
ಹುಡುಗ/ Boy, ಕೀರ್ತಿ/ Fame, ವಿದ್ಯಾರ್ಥಿ/ Student, ವಧು/ Bride, ಅಪರಾಧಿ/Criminal, ನಾಯಿ/Dog, ಸೇಬು/Apple, ಸಹಾಯಕ/Helper, ಕಳ್ಳ/Thief, ವಿಳಾಸ/Address, ಕಾರು/Car.
ಅಭ್ಯಾಸ: ಭಾಷಾಂತರ ಪಾಠ - ಕನ್ನಡದಿಂದ ಇಂಗ್ಲಿಷ್ಗೆ ಭಾಷಾಂತರಿಸಿ.

ಸಕಾರಾತ್ಮಕ ವಾಕ್ಯಗಳು(Positive sentences)
1.ನಾನು ಹುಡುಗನನ್ನು ಬಯ್ಯುತ್ತೇನೆ, 2.ನಾವು ಕೀರ್ತಿಯನ್ನು ಸಾಧಿಸಿ ಪಡೆಯುತ್ತೇನೆ, 3. ನೀನು ವಿದ್ಯಾರ್ಥಿಯನ್ನು ಮೆಚ್ಚುತ್ತೀಯ 4. ನೀವು ವಧುವನ್ನು ಒಪ್ಪುತ್ತೀರಿ 5.ಅವರು ಅಪರಾಧಿಯನ್ನು ಗಡಿಪಾರು ಮಾಡುತ್ತಾರೆ.

ನಕಾರಾತ್ಮಕ ವಾಕ್ಯಗಳು (Negative sentences)
1. ನಾನು ಹುಡುಗನನ್ನು ಬಯ್ಯುವುದಿಲ್ಲ 2.ನಾನು ಕೀರ್ತಿಯನ್ನು ಸಾಧಿಸಿ ಪಡೆಯುವುದಿಲ್ಲ. 3. ನೀನು ವಿದ್ಯಾರ್ಥಿಯನ್ನು ಮೆಚ್ಚುವುದಿಲ್ಲ. 4. ನೀವು ವಧುವನ್ನು ಒಪ್ಪುವುದಿಲ್ಲ. 5. ಅವರು ಅಪರಾಧಿಯನ್ನು ಗಡಿಪಾರು ಮಾಡುವುದಿಲ್ಲ.

ಭಾಷಾಂತರ ಪಾಠ - ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರಿಸಿ
ಸಕಾರಾತ್ಮಕ ವಾಕ್ಯಗಳು: I chase a car, We clean a road, You dash a wall, You deceive a customer, They dip a rock.

ನಕಾರಾತ್ಮಕ ವಾಕ್ಯಗಳು: I do not chase a car, We do not clean a road, You do not dash a wallk, You do not deceive a customer, They do not dip a rock.

ಕಲಿಯುವ ಪದಗಳು
ಸಕಾರಾತ್ಮಕ ಕ್ರಿಯಾಪದಗಳು(Transitive verbs)
ಎದುರಿಸು/Face, ಸ್ಪರ್ಶದಿಂದ ತಿಳಿ/Feel, ತುಂಬು/Fill, ಒತ್ತಾಯಿಸು/Force, ದಿಟ್ಟಿಸಿ ನೋಡು/Gaze, ಉತ್ಪಾದಿಸು/Generate, ಕೊಡು/Give, ನಿಯಂತ್ರಿಸು/Govern, ತೂಗುಹಾಕು/Hang, ವಾಸಿಮಾಡು/Heal.

ಕಲಿಯುವ ಪದಗಳು(Common Nouns)
ಆಟಗಾರ/Player, ಆನೆ/Elephant, ಪಾತ್ರೆ/Vessel, ಅಧಿಕಾರಿ/Officer, ವರ/Bride groom, ಹೇಳಿಕೆ/Statment, ಉಡುಪು/Dress, ಎತ್ತು/Ox, ಚೀಲ/Bag, ಗಾಯ/Wound

ಸಕಾರಾತ್ಮಕ-ಪ್ರಶ್ನಾರ್ಥಕ ವಾಕ್ಯಗಳು:
1. ನಾನು ಆಟಗಾರನನ್ನು ಎದುರಿಸುತ್ತೇನೆಯೇ?,
2. ನಾವು ಆನೆಯನ್ನು ಸ್ಪರ್ಶದಿಂದ ತಿಳಿಯುತ್ತೇನೆಯೇ,
3.ನೀವು ಅಧಿಕಾರಿಯನ್ನು ಒತ್ತಾಯಿಸುತ್ತೀರಾ?,
4.ಅವರು ವರನನ್ನು ದಿಟ್ಟಿಸಿ ನೋಡುತ್ತಾರೆಯೇ?
5.ಅವಳು ಉಡುಪನ್ನು ಕೊಡುತ್ತಾಳೆಯೇ?

ನಕಾರಾತ್ಮಕ-ಪ್ರಶ್ನಾರ್ಥಕ ವಾಕ್ಯಗಳು:
1.ನಾನು ಆಟಗಾರನನ್ನು ಎದುರಿಸುವುದಿಲ್ಲವೇ?
2. ನಾವು ಆನೆಯನ್ನು ಸ್ಪರ್ಶದಿಂದ ತಿಳಿಯುವುದಿಲ್ಲವೇ?
3. ನೀನು ಪಾತ್ರೆಯನ್ನು ತುಂಬುವುದಿಲ್ಲವೇ? 3.ನೀವು ಅಧಿಕಾರಿಯನ್ನು ಒತ್ತಾಯಿಸುವುದಿಲ್ಲವೇ?
4. ಅವರು ವರನನ್ನು ದಿಟ್ಟಿಸಿ ನೋಡುವುದಿಲ್ಲವೇ?
5. ಅವಳು ಉಡುಪನ್ನು ಕೊಡುವುದಿಲ್ಲವೇ?

He /Subject
eats /Verb
a /Article
fruit / Object

Transitive verbs
Face
Feel
Fill,
Force

Common Nouns
Player
Elephant
Vessel
Officer

Positive sentences
I chase a car
We clean a road
You dash a wall

Negative sentences
I do not chase a car
We do not clean a road
You do not dash a wallk

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.