ಎಜ್ಬಾಸ್ಟನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿರುವ ಭಾರತ ತಂಡದ ನಾಯಕ ಶುಭಮನ್ ಗಿಲ್, 'ಚೊಚ್ಚಲ' ದ್ವಿಶತಕದ ಸಾಧನೆ ಮಾಡಿದ್ದಾರೆ. ಅದರೊಂದಿಗೆ, ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಸೇರಿದಂತೆ ಹಲವರ ಹೆಸರಿನಲ್ಲಿದ್ದ ದಾಖಲೆಗಳನ್ನು ಮೀರಿ ನಿಂತಿದ್ದಾರೆ.

ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ಆರಂಭಿಕ ಯಶಸ್ವಿ ಜೈಸ್ವಾಲ್, ನಾಯಕ ಗಿಲ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜ ಅವರ ಬ್ಯಾಟಿಂಗ್ ಬಲದಿಂದ ಮೊದಲ ಮೊದಲ ಇನಿಂಗ್ಸ್ನಲ್ಲಿ 587 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.

ಜೈಸ್ವಾಲ್ (87 ರನ್) ಹಾಗ ರವೀಂದ್ರ ಜಡೇಜ (89 ರನ್) ಶತಕದ ಹೊಸ್ತಿಲಲ್ಲಿ ಎಡವಿದರೆ, ಗಿಲ್ 250ರ ಗಡಿ ದಾಟಿದರು.

ತಂಡದ ಮೊತ್ತ 23.3 ಓವರ್ಗಳಲ್ಲಿ 2 ವಿಕೆಟ್ಗೆ 95 ರನ್ ಆಗಿದ್ದಾಗ ಕ್ರೀಸ್ಗಿಳಿದ ಗಿಲ್, ಬರೋಬ್ಬರಿ 120 ಓವರ್ಗಳ ಬಳಿಕ (143.3 ಓವರ್ನಲ್ಲಿ) ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಿ 387 ಎಸೆತಗಳನ್ನು ಎದುರಿಸಿದ ಅವರು 30 ಬೌಂಡರಿ ಹಾಗೂ 3 ಸಿಕ್ಸ್ ಸಹಿತ 269 ರನ್ ಬಾರಿಸಿದರು. ತಂಡದ ಮೊತ್ತವನ್ನು 8 ವಿಕೆಟ್ಗೆ 574ಕ್ಕೆ ಏರಿಸಿದರು. ನಂತರ 13 ರನ್ ಗಳಿಸುವಷ್ಟರಲ್ಲಿ ಉಳಿದೆರಡು ವಿಕೆಟ್ಗಳೂ ಪತನಗೊಂಡು ಭಾರತದ ಇನಿಂಗ್ಸ್ಗೆ ತೆರೆ ಬಿದ್ದಿತು.
.ಟೆಸ್ಟ್, ಏಕದಿನ ಮಾದರಿಯಲ್ಲಿ ದ್ವಿಶತಕ: ಸಚಿನ್, ಸೆಹ್ವಾಗ್, ರೋಹಿತ್ ಸಾಲಿಗೆ ಗಿಲ್.IND vs ENG 2nd Test | ಶುಭಮನ್ ಗಿಲ್ ‘ಡಬಲ್’ ಶತಕ: ಆತಿಥೇಯರಿಗೆ ಆರಂಭಿಕ ಆಘಾತ.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್, ಆರಂಭಿಕ ಆಘಾತ ಅನುಭವಿಸಿತು. ಪರಿಣತ ವೇಗಿ ಜಸ್ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಅವಕಾಶ ಗಿಟ್ಟಿಸಿರುವ ಆಕಾಶ್ ದೀಪ್ ಇಂಗ್ಲೆಂಡ್ನ ಅಗ್ರ ಕ್ರಮಾಂಕಕ್ಕೆ ಪೆಟ್ಟು ನೀಡಿದರು. ಬೆನ್ ಡಕೆಟ್ ಹಾಗೂ ಒಲಿ ಪೋಪ್ ಅವರನ್ನು ಖಾತೆ ತೆರೆಯುವ ಮುನ್ನವೇ ಔಟ್ ಮಾಡಿದರು. ಜಾಕ್ ಕ್ರಾಲಿ (19 ರನ್) ಅವರಿಗೆ ಮೊಹಮ್ಮದ್ ಸಿರಾಜ್ ಪೆವಿಲಿಯನ್ ದಾರಿ ತೋರಿದರು. ಆಗ ತಂಡದ ಮೊತ್ತ ಕೇವಲ 25 ರನ್.

ಈ ವೇಳೆ ಜೊತೆಯಾದ ಅಗ್ರಮಾನ್ಯ ಬ್ಯಾಟರ್ಗಳಾದ ಜೋ ರೂಟ್ (18 ರನ್) ಮತ್ತು ಹ್ಯಾರಿ ಬ್ರೂಕ್ (30 ರನ್) ಅರ್ಧಶತಕದ ಜೊತೆಯಾಟದ ಮೂಲಕ, ವಿಕೆಟ್ ಬೀಳದಂತೆ ಎಚ್ಚರಿಕೆಯ ಆಟವಾಡಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಮೊತ್ತ 3 ವಿಕೆಟ್ಗೆ 77 ರನ್ ಆಗಿದೆ.

ಗಿಲ್ ಹಲವು ದಾಖಲೆ

ಶುಭಮನ್ ಗಿಲ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಸಿಡಿಸಿದ ಮೊದಲ ದ್ವಿಶತಕವಿದು. ನಾಯಕತ್ವ ವಹಿಸಿಕೊಂಡ ಎರಡನೇ ಪಂದ್ಯದಲ್ಲೇ ಇದು ಸಾಧ್ಯವಾಗಿರುವುದು ವಿಶೇಷ.

ಇನ್ನಷ್ಟು ದಾಖಲೆಗಳ ವಿವರ ಇಲ್ಲಿದೆ.

ಎರಡನೇ ಅತಿಕಿರಿಯ ದ್ವಿಶತಕಧಾರಿ
ಗಿಲ್ ಅವರು, ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ದ್ವಿಶತಕ ಬಾರಿಸಿದ 2ನೇ ಅತಿಕಿರಿಯ ನಾಯಕ ಎನಿಸಿಕೊಂಡರು.

ಮಾಜಿ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರು 1964ರಲ್ಲಿ ಇಂಗ್ಲೆಂಡ್ ಎದುರು 203 ರನ್ ಗಳಿಸಿದ್ದರು. ಆಗ ಅವರ ವಯಸ್ಸು 23 ವರ್ಷ 39 ದಿನಗಳು. ಗಿಲ್ ವಯಸ್ಸು ಸದ್ಯ 25 ವರ್ಷ 298 ದಿನಗಳಾಗಿವೆ.

ಭಾರತದ 6ನೇ ನಾಯಕ
ಭಾರತ ತಂಡದ ನಾಯಕನಾಗಿ ಇನ್ನೂರರ ಗಡಿ ದಾಟಿದ 6ನೇ ನಾಯಕ ಆಟಗಾರ ಗಿಲ್. ಮನ್ಸೂರ್ ಅಲಿ ಖಾನ್ ಪಟೌಡಿ, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಇದಕ್ಕೂ ಮೊದಲು ಈ ಸಾಧನೆ ಮಾಡಿದ್ದಾರೆ.

ಆದರೆ, ಕೊಹ್ಲಿ (7) ಹೊರತುಪಡಿಸಿ ಉಳಿದೆಲ್ಲರೂ ತಲಾ ಒಮ್ಮೊಮ್ಮೆ ದ್ವಿಶತಕ ಬಾರಿಸಿದ್ದಾರೆ.

ನಾಯಕನಾಗಿ ತವರಿನಾಚೆ ದ್ವಿಶತಕ
ವಿದೇಶಿ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಭಾರತದ ಎರಡನೇ ನಾಯಕ ಶುಭಮನ್ ಗಿಲ್. ವಿರಾಟ್ ಕೊಹ್ಲಿ ಅವರು 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 200 ರನ್ ಗಳಿಸಿದ್ದರು. ಕೊಹ್ಲಿ ಜೊತೆಗೆ ಸ್ಥಾನ ಹಂಚಿಕೊಂಡಿದ್ದಷ್ಟೇ ಅಲ್ಲದೆ, ತವರಿನಾಚೆ ಹೆಚ್ಚು ರನ್ ಗಳಿಸಿದ ನಾಯಕ ಎನಿಸಿಕೊಂಡಿದ್ದಾರೆ ಗಿಲ್.

250ರ ಸಾಧನೆ
ಟೀಂ ಇಂಡಿಯಾ ಪರ ಈವರೆಗೆ 6 ಬ್ಯಾಟರ್ಗಳಷ್ಟೇ 250ರ ಗಡಿ ದಾಟಿದ್ದಾರೆ. ಆ ಪೈಕಿ ವೀರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದು ನಾಲ್ಕು ಬಾರಿ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಕರುಣ್ ನಾಯರ್ ಮತ್ತು ವಿರಾಟ್ ಕೊಹ್ಲಿ ತಲಾ ಒಂದು ಸಲ ಇಷ್ಟು ರನ್ ಗಳಿಸಿದ್ದಾರೆ. ಇದೀಗ ಆ ಪಟ್ಟಿಗೆ ಹೊಸ ಸೇರ್ಪಡೆ ಗಿಲ್.

ಹಾಗೆಯೇ, ಉಪಖಂಡದ ಹೊರಗೆ ಇಷ್ಟು ರನ್ ಗಳಿಸಿದ ಮೊದಲ ಭಾರತೀಯ ಗಿಲ್. ಸಚಿನ್ ತೆಂಡೂಲ್ಕರ್ ಅವರು 2004ರಲ್ಲಿ ಆಸ್ಟ್ರೇಲಿಯಾದಲ್ಲಿ ಅಜೇಯ 241 ರನ್ ಗಳಿಸಿದ್ದರು. ಅದೇ ಈವರೆಗೆ ಅತ್ಯುತ್ತಮ ಸಾಧನೆಯಾಗಿತ್ತು.

ಸೆಹ್ವಾಗ್, ದ್ರಾವಿಡ್ ಜೊತೆ ಸ್ಥಾನ
ವಿದೇಶಿ ಪಿಚ್ಗಳಲ್ಲಿ 250ಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರೊಂದಿಗೆ ಸ್ಥಾನ ಹಂಚಿಕೊಂಡರು.

ವಿರೇಂದ್ರ ಸೆಹ್ವಾಗ್ ಅವರು 2004ರಲ್ಲಿ (309 ರನ್) ಹಾಗೂ 2006ರಲ್ಲಿ (254 ರನ್), ರಾಹುಲ್ ದ್ರಾವಿಡ್ ಅವರು 2004ರಲ್ಲಿ (270 ರನ್) ಪಾಕಿಸ್ತಾನದಲ್ಲಿ ಈ ಸಾಧನೆ ಮಾಡಿದ್ದರು.

ಇಂಗ್ಲೆಂಡ್ನಲ್ಲಿ 250+ ರನ್
ಇಂಗ್ಲೆಂಡ್ ಪ್ರವಾಸದಲ್ಲಿ 250ಕ್ಕಿಂತ ಅಧಿಕ ರನ್ ಗಳಿಸಿದ ವಿದೇಶಿ ತಂಡದ 3ನೇ ನಾಯಕ ಎಂಬ ಶ್ರೇಯ ಗಿಲ್ ಅವರದ್ದಾಯಿತು.

ಇದಕ್ಕೂ ಮೊದಲು ಆಸ್ಟ್ರೇಲಿಯಾದ ಬಾಬ್ ಸಿಂಪ್ಸನ್ (1964ರಲ್ಲಿ) 311 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅವರು 2003ರಲ್ಲಿ ಎರಡು ಬಾರಿ (277 ರನ್, 259 ರನ್) ಈ ಸಾಧನೆ ಮಾಡಿದ್ದರು. ಇದೀಗ ಈ ಸಾಲಿಗೆ ಗಿಲ್ ಸೇರಿದ್ದಾರೆ.

ನಾಯಕನಾಗಿ ಗರಿಷ್ಠ ಮೊತ್ತ
ಭಾರತ ಟೆಸ್ಟ್ ತಂಡದ ನಾಯಕನಾಗಿ ಅತ್ಯದಿಕ ಮೊತ್ತ ಕಲೆಹಾಕಿದ ಬ್ಯಾಟರ್ ಎಂಬ ಶ್ರೇಯ ಗಿಲ್ ಅವರದ್ದಾಯಿತು. ಈವರೆಗೆ ವಿರಾಟ್ ಕೊಹ್ಲಿ ಅವರು ಗರಿಷ್ಠ ರನ್ ಗಳಿಸಿದ ಖ್ಯಾತಿ ಹೊಂದಿದ್ದರು. ಅವರು 2019ರಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ 254 ರನ್ ಗಳಿಸಿದ್ದರು.

ಇಂಗ್ಲೆಂಡ್ ನೆಲದಲ್ಲಿ ಹೆಚ್ಚು ರನ್
ಆಂಗ್ಲರ ನಾಡಿನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ಶ್ರೇಯ ಗಿಲ್ ಅವರದ್ದಾಯಿತು. ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಅವರು 1979ರಲ್ಲಿ 221 ರನ್ ಗಳಿಸಿದ್ದರು. ಅದು ಈವರೆಗೆ ದಾಖಲೆಯಾಗಿತ್ತು.

ಟೀಂ ಇಂಡಿಯಾ ಪರ ವೈಯಕ್ತಿಕ ಗರಿಷ್ಠ ರನ್

ವೀರೇಂದ್ರ ಸೆಹ್ವಾಗ್: 319 ರನ್ vs ದಕ್ಷಿಣ ಆಫ್ರಿಕಾ

ವೀರೇಂದ್ರ ಸೆಹ್ವಾಗ್: 309 ರನ್ vs ಪಾಕಿಸ್ತಾನ

ಕರುಣ್ ನಾಯರ್: 303 ರನ್ vs ಇಂಗ್ಲೆಂಡ್

ವೀರೇಂದ್ರ ಸೆಹ್ವಾಗ್: 293 ರನ್ vs ಶ್ರೀಲಂಕಾ

ವಿವಿಎಸ್ ಲಕ್ಷ್ಮಣ್: 281 ರನ್ vs ಆಸ್ಟ್ರೇಲಿಯಾ

ರಾಹುಲ್ ದ್ರಾವಿಡ್: 270 ರನ್ vs ಪಾಕಿಸ್ತಾನ

ಶುಭಮನ್ ಗಿಲ್: 269 ರನ್ vs ಇಂಗ್ಲೆಂಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.