ಎಜ್ಬಾಸ್ಟನ್: ಟೆಸ್ಟ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಎರಡನೇ ಪಂದ್ಯದಲ್ಲೇ 'ಚೊಚ್ಚಲ' ದ್ವಿಶತಕದ ಸಾಧನೆ ಮಾಡಿರುವ ಭಾರತದ ನಾಯಕ ಶುಭಮನ್ ಗಿಲ್, ವಿಶೇಷ ದಾಖಲೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 387 ಎಸೆತಗಳನ್ನು ಎದುರಿಸಿದ ಗಿಲ್, 30 ಬೌಂಡರಿ ಹಾಗೂ 3 ಸಿಕ್ಸ್ ಸಹಿತ 269 ರನ್ ಬಾರಿಸಿದರು. ಅದರೊಂದಿಗೆ, ಏಕದಿನ ಹಾಗೂ ಟೆಸ್ಟ್ ಮಾದರಿಗಳಲ್ಲಿ ಇನಿಂಗ್ಸ್ವೊಂದರಲ್ಲಿ ಇನ್ನೂರರ ಗಡಿ ದಾಟಿದ ವಿಶ್ವದ ಐದನೇ ಬ್ಯಾಟರ್ ಎನಿಸಿದ್ದಾರೆ..

'ಮಾಸ್ಟರ್ ಬ್ಲಾಸ್ಟರ್' ಸಚಿನ್ ತೆಂಡೂಲ್ಕರ್, 'ನಜಾಫ್ಗಢದ ನವಾಬ' ವೀರೇಂದ್ರ ಸೆಹ್ವಾಗ್, 'ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ ಹಾಗೂ 'ಹಿಟ್ಮ್ಯಾನ್' ರೋಹಿತ್ ಶರ್ಮಾ ಮೊದಲ ನಾಲ್ವರು.

ಟೆಸ್ಟ್ ಮಾದರಿಯಲ್ಲಿ ಆರು ದ್ವಿಶತಕ ಬಾರಿಸಿರುವ ತೆಂಡೂಲ್ಕರ್, ದಕ್ಷಿಣ ಆಫ್ರಿಕಾ ವಿರುದ್ಧ 2010ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅಜೇಯ 200 ರನ್ ಗಳಿಸಿದ್ದರು. ಅದು, ಏಕದಿನ ಕ್ರಿಕೆಟ್ನಲ್ಲಿ ದಾಖಲಾದ ಮೊದಲ ದ್ವಿಶತಕವಾಗಿದೆ.
.ದ್ವಿಶತಕ: ಸಚಿನ್, ಕೊಹ್ಲಿ ಸೇರಿದಂತೆ ದಿಗ್ಗಜರ ದಾಖಲೆಗಳನ್ನು ಮುರಿದ ಗಿಲ್.IND vs ENG 2nd Test | ಶುಭಮನ್ ಗಿಲ್ ‘ಡಬಲ್’ ಶತಕ: ಆತಿಥೇಯರಿಗೆ ಆರಂಭಿಕ ಆಘಾತ.
ದೀರ್ಘ ಮಾದರಿಯಲ್ಲಿ ಭಾರತದ ಪರ ಮೊದಲ ತ್ರಿಶತಕ ಸಿಡಿಸಿದ ಹೆಗ್ಗಳಿಗೆ ಹೊಂದಿರುವ ಸೆಹ್ವಾಗ್, ಟೆಸ್ಟ್ನಲ್ಲಿ ಆರು ಸಲ ಇನ್ನೂರರ ಗಡಿ ದಾಟಿದ್ದಾರೆ. ಅವರು ಏಕದಿನ ಕ್ರಿಕೆಟ್ನ ದ್ವಿಶತಕವನ್ನು (219 ರನ್) ವೆಸ್ಟ್ ಇಂಡೀಸ್ ವಿರುದ್ಧ 2011ರಲ್ಲಿ ಬಾರಿಸಿದ್ದರು.

ಈ ಸಾಧನೆ ಮಾಡಿದ ಮೂರನೇ ಬ್ಯಾಟರ್ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್. ಅವರು 2015ರ ಏಕದಿನ ವಿಶ್ವಕಪ್ ವೇಳೆ ಜಿಂಬಾಬ್ವೆ ವಿರುದ್ಧ 215 ರನ್ ಬಾರಿಸಿದ್ದರು. ಅದಕ್ಕೂ ಮೊದಲು, ಟೆಸ್ಟ್ನಲ್ಲಿ ಮೂರು ಸಲ ದ್ವಿಶತಕ ಗಳಿಸಿದ್ದರು.

ಏಕದಿನ ಕ್ರಿಕೆಟ್ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ (3) ದ್ವಿಶತಕ ಗಳಿಸಿದ ಏಕೈಕ ಬ್ಯಾಟರ್ ಎಂಬ ಖ್ಯಾತಿ ಹೊಂದಿರುವ ರೋಹಿತ್ ಶರ್ಮಾ, 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ನಲ್ಲಿ 219 ರನ್ ಗಳಿಸಿದ್ದರು. ಅದರೊಂದಿಗೆ, ಎರಡೂ ಮಾದರಿಗಳಲ್ಲಿ ದ್ವಿಶತಕ ಗಳಿಸಿದ ನಾಲ್ಕನೇ ಬ್ಯಾಟರ್ ಎನಿಸಿದ್ದರು.

2023ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 208 ರನ್ ಬಾರಿಸಿದ್ದ ಗಿಲ್, ಇದೀಗ ಈ ಪಟ್ಟಿ ಸೇರಿಕೊಂಡಿದ್ದಾರೆ.

ಭಾರತ ಬೃಹತ್ ಮೊತ್ತ: ಇಂಗ್ಲೆಂಡ್ಗೆ ಆರಂಭಿಕ ಆಘಾತ
ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ಪ್ರಥಮ ಇನಿಂಗ್ಸ್ನಲ್ಲಿ 587 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ಗಿಲ್ ದ್ವಿಶತಕ ಗಳಿಸಿದರೆ, ಯಶಸ್ವಿ ಜೈಸ್ವಾಲ್ (87 ರನ್) ಹಾಗೂ ರವೀಂದ್ರ ಜಡೇಜ (87 ರನ್) ಅರ್ಧಶತಕ ಗಳಿಸಿ ನೆರವಾದರು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್, ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಮೊತ್ತ 3 ವಿಕೆಟ್ಗೆ 77 ರನ್ ಆಗಿದೆ. ಅಗ್ರಮಾನ್ಯ ಬ್ಯಾಟರ್ಗಳಾದ ಜೋ ರೂಟ್ (18 ರನ್) ಮತ್ತು ಹ್ಯಾರಿ ಬ್ರೂಕ್ (30 ರನ್) ಕ್ರೀಸ್ನಲ್ಲಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.