ಗುರುವಾರ , ಜೂನ್ 24, 2021
24 °C

ಕ್ರೀಡೆಯಲ್ಲಿ ತಾರತಮ್ಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಿಶ್ವಕಪ್ ಗೆದ್ದ ಕ್ರಿಕೆಟ್ ಆಟಗಾರರಿಗೆ ಬಹುಮಾನ ರೂಪದಲ್ಲಿ ಹಲವು ಕೋಟಿ ರೂಪಾಯಿ ಲಭಿಸುವುದಾದರೆ, ಅಂತಹದೇ ಸಾಧನೆ ಮಾಡಿರುವ ಕಬಡ್ಡಿ ಆಟಗಾರ್ತಿಯರನ್ನು ಕಡೆಗಣಿಸುವುದು ಏಕೆ?~

-ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ಮನದಲ್ಲಿ ಸುಳಿದಾಡಿದ ಪ್ರಶ್ನೆಯಿದು.ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಮತಾ ಈ ಪ್ರಶ್ನೆಯನ್ನು ಮಾಧ್ಯಮದವರ ಮುಂದಿಟ್ಟರು.`ಕ್ರೀಡೆ ಯಾವುದೇ ಇರಲಿ, ವಿಶ್ವಕಪ್ ಗೆಲ್ಲುವುದೆಂದರೆ ಮಹಾನ್ ಸಾಧನೆ. ಆದ್ದರಿಂದ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಸೂಕ್ತ ಗೌರವ ಲಭಿಸಲಿ. ಕ್ರೀಡಾಪಟುಗಳ ನಡುವೆ ತಾರತಮ್ಯ ಸಲ್ಲದು~ ಎಂದು ಮಮತಾ ನುಡಿದರು. ಪಟ್ನಾದಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು.ಸಮಾರಂಭದಲ್ಲಿ ನ್ಯಾಯಮೂರ್ತಿ ರವಿ ಮಳೀಮಠ ಅವರು ಭಾರತ ತಂಡದ ನಾಯಕಿಯನ್ನು ಸನ್ಮಾನಿಸಿದರು. ಕೆಒಎ ರೂ. 25 ಸಾವಿರ ನಗದು ಬಹುಮಾನ ನೀಡಿತು. ಮಮತಾ ಅವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ ಬಹುಮಾನ ಪ್ರಕಟಿಸಿತ್ತು.`ಭಾರತ ತಂಡದಲ್ಲಿದ್ದ ಮಹಾರಾಷ್ಟ್ರದ ಮೂವರು ಆಟಗಾರ್ತಿಯರಿಗೆ ಅಲ್ಲಿನ ಸರ್ಕಾರ ತಲಾ ಒಂದು        ಕೋಟಿ ರೂ. ನೀಡಿದೆ. ಇಂತಹ ಬೆಂಬಲ ನಮಗೆ ಅಗತ್ಯ. ಒಲಿಂಪಿಕ್ ಕ್ರೀಡೆಗಳಲ್ಲಿ ಕಬಡ್ಡಿಗೆ ಸ್ಥಾನ ದೊರೆತರೆ ಭಾರತಕ್ಕೆ ಪದಕ ಖಚಿತ~ ಎಂದು ಮಮತಾ ನುಡಿದರು.ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್, `ಪ್ರಜಾವಾಣಿ~ ಸಂಪಾದಕ ಕೆ.ಎನ್. ಶಾಂತಕುಮಾರ್, ರಾಜ್ಯ ಕಬಡ್ಡಿ ಸಂಸ್ಥೆ ಅಧ್ಯಕ್ಷ ಹನುಮಂತೇ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.