ಬ್ಯಾಸ್ಕೆಟ್ಬಾಲ್: ಎಂಬಿಸಿಗೆ ಪ್ರಶಸ್ತಿ
ಬೆಂಗಳೂರು: ಮಂಗಳೂರು ಬ್ಯಾಸ್ಕೆಟ್ಬಾಲ್ ಕ್ಲಬ್ (ಎಂಬಿಸಿ) ರಾಜ್ಯ ಸಬ್ಜೂನಿಯರ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಬಾಲಕರ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿತು.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫೈನಲ್ ಲೀಗ್ ಹಣಾಹಣಿಯಲ್ಲಿ ಎಂಬಿಸಿ ಆಟಗಾರರು 45-22ರಿಂದ ಜಯನಗರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿದರು. ಮಂಗಳೂರು ತಂಡದ ಆಕಾಶ್ (16) ಮತ್ತು ಎಸ್ಟನ್ (10) ಉತ್ತಮ ಸಾಮರ್ಥ್ಯ ತೋರಿದರು.

ವಿರಾಮದ ವೇಳೆಗೆ ವಿಜಯಿ ತಂಡ 21-12ರಿಂದ ಮುಂದಿತ್ತು. ಇನ್ನೊಂದು ಪಂದ್ಯದಲ್ಲಿ ಯಂಗ್ ಓರಿಯನ್ಸ್ 26-10ರಿಂದ ಚಂದರಗಿಯ ಕ್ರೀಡಾಶಾಲೆ ತಂಡವನ್ನು ಸೋಲಿಸಿತು.

ಬಾಲಕಿಯರ ವಿಭಾಗದ ಫೈನಲ್ ಲೀಗ್ನಲ್ಲಿ ಮಂಡ್ಯದ ಕ್ರೀಡಾ ಶಾಲಾ ತಂಡವು 57-23ರಿಂದ ಮೌಂಟ್ಸ್ ಕ್ಲಬ್ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿಕೊಂಡಿತು.

ಕ್ರಿಕೆಟ್: ವಿಂಡೀಸ್ಗೆ ಆತಂಕ
ಬ್ರಿಜ್ಟೌನ್ (ಪಿಟಿಐ): ವೆಸ್ಟ್ ಇಂಡೀಸ್ ತಂಡದವರು ಪ್ರಥಮ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದರೂ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ನ ನಾಲ್ಕನೇ ದಿನದಾಟದಲ್ಲಿ ಆತಂಕದ ಸುಳಿಯಲ್ಲಿ ಸಿಲುಕಿದ್ದಾರೆ.

ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್ 9 ವಿಕೆಟ್ಗಳ ನಷ್ಟಕ್ಕೆ 449 ಡಿಕ್ಲೇರ್ಡ್ ಹಾಗೂ 38 ಓವರುಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 71 (ಡರೆನ್ ಬ್ರಾವೊ 32, ಶಿವನಾರಾಯಣ ಚಂದ್ರಪಾಲ್ 12, ನರಸಿಂಗ ಡಿಯೊನಾರಾಯಣ ಬ್ಯಾಟಿಂಗ್ 20; ಬೆನ್ ಹಿಲ್ಫೆನ್ಹಾಸ್ 17ಕ್ಕೆ3, ರ್ಯಾನ್ ಹ್ಯಾರಿಸ್ 14ಕ್ಕೆ1, ಪೀಟರ್ ಸಿಡ್ಲ್ 11ಕ್ಕೆ1); ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 145 ಓವರುಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 406 ಡಿಕ್ಲೇರ್ಡ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.