ಶಿವಮೊಗ್ಗ: `ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು' ಎಂಬ ಗಾದೆ ಮಾತಿನಂತಾಗಿದೆ ಜಿಲ್ಲೆಯ ಮರಳು ಗಣಿಗಾರಿಕೆಯ ಸ್ಥಿತಿ. ಸಾಲು-ಸಾಲು ನದಿ-ಹಳ್ಳಗಳ ಒಡಲು ಬರಿದಾದ ಮೇಲೆ ಹೊಸ ಮರಳು ನೀತಿಯ ಹೆಸರಿನಲ್ಲಿ ಮೂಗುದಾರ ಹಾಕುವ ಪ್ರಯತ್ನ ಈಗ ಸಾಂಕೇತಿಕವಾಗಿ ಸಾಗಿದೆ.

ಶಿವಮೊಗ್ಗ ಜಿಲ್ಲೆ ನದಿ, ಹಳ್ಳ-ಕೊಳ್ಳಗಳ ಬೀಡು. ತುಂಗೆ, ಭದ್ರೆ, ಶರಾವತಿ, ಕುಮದ್ವತಿ, ವರದಾ, ಮಾಲತಿ ಹಳ್ಳ ಸೇರಿದಂತೆ ಸಾಕಷ್ಟು ನದಿ-ಹಳ್ಳಗಳು ಜಿಲ್ಲೆಯಲ್ಲಿ ಹರಿಯುತ್ತವೆ. ಇವುಗಳಲ್ಲಿ ಸಿಗುವ ಮರಳು ಉತ್ಕೃಷ್ಟವಾದದ್ದು; ಸಂಸ್ಕರಣೆಯೇ ಬೇಕಾಗಿಲ್ಲ. ಮಲೆನಾಡಿನ ಈ `ಸಕ್ಕರೆ ಮರಳಿ'ಗೆ ಎಲ್ಲಿಲ್ಲದ ಬೇಡಿಕೆ.

ಸ್ಥಳೀಯ ಬಳಕೆಗೆ ಸೀಮಿತವಾಗಿದ್ದ ಮರಳು, ಜಿಲ್ಲೆಯ ಗಡಿ ದಾಟುತ್ತಿದ್ದಂತೆ ನದಿ ಒಡಲು ಚಿನ್ನದ ಮೊಟ್ಟೆ ಇಡುವ ಕೋಳಿಯಾಯಿತು. ಮೊಟ್ಟೆ ಆಸೆಗೆ ಕೋಳಿಯ ಹೊಟ್ಟೆ ಕತ್ತರಿಸುವ ಕೆಲಸ ನಾಲ್ಕೈದು ವರ್ಷದಲ್ಲಿ ನಿರಾಂತಕವಾಗಿ ನಡೆದಿದೆ.

ಲಾರಿ, ಟ್ರ್ಯಾಕ್ಟರ್ ಇದ್ದವರೆಲ್ಲ ಹಗಲು-ರಾತ್ರಿ ಎನ್ನದೇ ಮರಳು ಬಗೆದು ದಿಢೀರ್ ಶ್ರೀಮಂತರಾದರು. ನದಿ ಅಕ್ಕ-ಪಕ್ಕದ ಊರಿನ ಗ್ರಾಮಸ್ಥರು, ದೇವಸ್ಥಾನಗಳ ಅಭಿವೃದ್ಧಿ ಹೆಸರಿನಲ್ಲಿ ಲಾರಿ, ಟ್ರ್ಯಾಕ್ಟರ್ ಮಾಲೀಕರ ಹತ್ತಿರ ಹಣ ವಸೂಲಿಗೆ ನಿಂತರು. ಸಾರಿಗೆ, ಗಣಿ ಇಲಾಖೆ, ಪೊಲೀಸ್ ಅಧಿಕಾರಿಗಳು ಇವರ ಬಳಿ `ಕೈ' ಒಡ್ಡುವುದು ಮಾಮೂಲಾಯಿತು.

ಗಗನಚುಂಬಿ ಕಟ್ಟಡ ಕಟ್ಟುವ ಪರ್ವ ಪರಸ್ಪರ ಪೈಪೋಟಿಯಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಶಿವಮೊಗ್ಗದಲ್ಲಿ ನಡೆಯಿತು. `ಅಭಿವೃದ್ಧಿ' ಹರಿಕಾರರ ವಿಶಾಲವಾದ ನಿವೇಶನಗಳಲ್ಲಿ ಮುಗಿಲೆತ್ತರಕ್ಕೆ ಮರಳು ರಾಶಿ ಎದ್ದು ನಿಂತಿದ್ದರೆ, ಮಧ್ಯಮ ವರ್ಗದ ಜನ ಹಿಡಿ ಮರಳು ಪಡೆಯುವಷ್ಟರಲ್ಲೇ ಆಕಾಶ-ಪಾತಾಳ ಒಂದಾಗುತ್ತಿತ್ತು.

ಗಣಿ ಇಲಾಖೆ ಅಧಿಕಾರಿಗಳು ಮರಳು ತೆಗೆಯಲು ಐದು ಎಕರೆ ನಿಗದಿಪಡಿಸಿದರೆ ಗುತ್ತಿಗೆದಾರರು ಅದನ್ನು 10 ಎಕರೆಗೆ ವಿಸ್ತರಿಸುವ ಪರಿಪಾಠ ಬೆಳೆಸಿಕೊಂಡರು. ಈ ಅಕ್ರಮದಲ್ಲಿ ಅಧಿಕಾರಿಗಳೂ ಕೈಜೋಡಿಸಿದರು. ಈ ದಂಧೆಯೇ `ಮರಳು ನೀತಿ'ಯಾಗಿತ್ತು.
ಕೊನೆಗೂ ಎಚ್ಚೆತ್ತ ಸರ್ಕಾರ ಹೊಸ ಮರಳು ನೀತಿ ರೂಪಿಸಿತು.

ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ಮರಳು ತುಂಬಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿತು. ಜಿಪಿಎಸ್ ಅಳವಡಿಸಿಕೊಂಡ ಲಾರಿಗಳಿಗೆ ಪರ್ಮಿಟ್ ನೀಡುವ ಅಧಿಕಾರ ಲೋಕೋಪಯೋಗಿ ಇಲಾಖೆಗೆ ಬಂತು. ಅಕ್ರಮ ಕಡಿವಾಣ ಹಾಕುವ ಜವಾಬ್ದಾರಿಯನ್ನು ಗಣಿ ಇಲಾಖೆಗೆ ನೀಡಲಾಯಿತು.

ಆದರೆ, ಜಿಲ್ಲೆಯಲ್ಲಿ ನಿಷೇಧಿತ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆ ನಿಲ್ಲಿಸಲು ಇದುವರೆಗೂ ಸಾಧ್ಯವಾಗಿಲ್ಲ. ತುಂಗಾ ನದಿಯಲ್ಲಿ ಬೇಡರಹೊಸಹಳ್ಳಿ, ಹೊಳೆಬೆನವಳ್ಳಿ ಗ್ರಾಮಗಳಲ್ಲಿ ಇಂದಿಗೂ ಮೋಟರ್ ಬೋಟ್ನಲ್ಲಿ ಮರಳು ಬಗೆಯಲಾಗುತ್ತಿದೆ. ಹೊಸನಗರ ನದಿ ಅಂಚಿನ ಊರುಗಳಲ್ಲಿ ಈಗಲೂ ಮರಳು ಲಾರಿಗಳ ಆರ್ಭಟ ನಿಂತಿಲ್ಲ.

ಮರಳು ತೆಗೆಯುವುದಕ್ಕೂ ಮೊದಲು ಇಲ್ಲಿನ ನದಿಗಳು ಸ್ವಚ್ಛ, ತಿಳಿ ನೀರಾಗಿ ಹರಿಯುತ್ತಿದ್ದವು. ಈಗ ಬೇಸಿಗೆಯಲ್ಲಿ ಕೊಳಚೆ ಗುಂಡಿಗಳಾಗಿ, ಮಳೆಗಾಲದಲ್ಲಿ ಕೆಂಪು ರಾಡಿ ಬಣ್ಣದಲ್ಲಿ ಹರಿಯುತ್ತಿವೆ. ಮಳೆಗಾಲ ಆರಂಭದಲ್ಲಿ ಈ ನದಿಗಳಲ್ಲಿ ಹಿಂದೆ ಮೀನು, ಏಡಿಗಳು ಭರ್ಜರಿಯಾಗಿ ಸಿಗುತ್ತಿದ್ದವು. ಈಗ ಈ ಎಲ್ಲವೂ ನಾಪತ್ತೆಯಾಗಿವೆ. ಇದೆಲ್ಲವೂ ಮರಳು ಗಣಿಗಾರಿಕೆ ಪ್ರಭಾವ ಎನ್ನುತ್ತಾರೆ ತೀರ್ಥಹಳ್ಳಿಯ ನಾಗರಿಕ ರಾಘವೇಂದ್ರ.

ರೂ 31.7 ಕೋಟಿ ರಾಜಧನ ಸಂಗ್ರಹ
ಹೊಸ ಮರಳು ನೀತಿ ಜಾರಿಗೆ ಬಂದ ಮೇಲೆ ಇದುವರೆಗೂ ರೂ31.7 ಕೋಟಿ ರಾಜಧನ ಸಂಗ್ರಹಿಸಲಾಗಿದೆ. ಅನಧಿಕೃತ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 34 ಪ್ರಕರಣಗಳನ್ನು ದಾಖಲಿಸಿ, 6 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಅನಧಿಕೃತ ಮರಳು ಸಾಗಾಟಕ್ಕೆ ಸಂಬಂಧಿಸಿದಂತೆ 9 ಪ್ರಕರಣಗಳನ್ನು ದಾಖಲಿಸಲಾಗಿದೆ.

2012-13ರಲ್ಲಿ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ 105 ವಾಹನಗಳನ್ನು ಜಪ್ತಿ ಮಾಡಿ, ರೂ 5.88 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಇದೇ ಸಾಲಿನಲ್ಲಿ ಅನಧಿಕೃತ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ 39 ಜನರ ಮೇಲೆ ಪ್ರಕರಣ ದಾಖಲಿಸಿ ರೂ 8.18 ಲಕ್ಷ ದಂಡ ಸಂಗ್ರಹಿಸಲಾಗಿದೆ.

ಮೂರು ತಿಂಗಳಿನಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದಂತೆ 67 ಪ್ರಕರಣಗಳನ್ನು ದಾಖಲಿಸಿ ರೂ7.8 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ 5 ಪ್ರಕರಣಗಳನ್ನು ದಾಖಲಿಸಿ, ರೂ 1.70 ಲಕ್ಷ ದಂಡ ಸಂಗ್ರಹಿಸಲಾಗಿದೆ.

ಹೊಸ ಮರಳು ನೀತಿ ಪ್ರಕಾರ ತಾಲ್ಲೂಕಿಗೆ ಒಬ್ಬರು ಗಣಿ ಇಲಾಖೆ ಅಧಿಕಾರಿಗಳಿರಬೇಕು. ಆದರೆ, ಜಿಲ್ಲೆಯಲ್ಲಿ ಇರುವುದು ಕೇವಲ ಇಬ್ಬರು. ಹಾಗಾಗಿ ನಿಯಂತ್ರಣ ಕಷ್ಟಸಾಧ್ಯ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಲೋಕೇಶ್ಕುಮಾರ್.

ಜಿಲ್ಲಾಡಳಿತ ನಿಯಂತ್ರಿಸಲಿ
ಜೂನ್ 1ರಿಂದ ಮರಳು ಗಣಿಗಾರಿಕೆ ನಿಷೇಧಿಸಲಾಗಿದೆ. ಈ ಮೊದಲು ದಿನಕ್ಕೆ 600ರಿಂದ 800 ಪರ್ಮಿಟ್ ನೀಡಲಾಗುತ್ತಿತ್ತು. ಒಂದು ಲಾರಿ ಲೋಡ್ಗೆ ರೂ2,400 ರಾಜಧನ ನಿಗದಿಪಡಿಸಲಾಗಿದೆ. ಮರಳನ್ನು ಲಾರಿಯವರೇ ನಮ್ಮ ಉಸ್ತುವಾರಿಯಲ್ಲಿ ತುಂಬಿಕೊಳ್ಳಬೇಕು. ಮಾರುಕಟ್ಟೆಯಲ್ಲಿನ ಮರಳ ಬೆಲೆ ನಿಯಂತ್ರಣವನ್ನು ಜಿಲ್ಲಾಡಳಿತ ಕೈಗೊಳ್ಳಬೇಕು.
-ಎಚ್.ವಿ.ನಂಜೇಶಯ್ಯ.

ವೈಜ್ಞಾನಿಕ ವರದಿ ಬೇಕು
ಸಮಗ್ರ ಮರಳು ನೀತಿ ಜಾರಿಗೆ ಬರಬೇಕು. ಈಗಿರುವ ಮರಳು ನೀತಿ ಅಪೂರ್ಣವಾಗಿದೆ. ಲಾರಿಗೆ ಜಿಪಿಎಸ್ ಅಳವಡಿಸಿ ಮರಳು ತುಂಬಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಹೊಸ ನೀತಿಯಲ್ಲಿ ಟ್ಯಾಕ್ಟರ್ ಕೈ ಬಿಟ್ಟಿದ್ದು ಏಕೆ? ಹಾಗೆಯೇ, ಮರಳು ಎಲ್ಲಿ ತೆಗೆಯಬೇಕು? ಮರಳು ತೆಗೆಯುವುದರಿಂದ ಯಾವ ರೀತಿಯ ತೊಂದರೆಗಳಿವೆ? ಎಂಬುದರ ಬಗ್ಗೆ ಸರ್ಕಾರದಿಂದ ಇದುವರೆಗೂ ವೈಜ್ಞಾನಿಕ ವರದಿ ಬಂದಿಲ್ಲ. ಈ ಬಗ್ಗೆ ಸರ್ಕಾರ ಮೊದಲು ಚಿಂತನೆ ನಡೆಸಬೇಕು.
- ವೈ.ಜಿ.ಮಲ್ಲಿಕಾರ್ಜುನ್ .
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ(ಕಾರ್ಯಪಾಲಕ ಎಂಜಿನಿಯರ್ ಲೋಕೋ ಪಯೋಗಿ ಇಲಾಖೆ (ವಿಶೇಷ ವಿಭಾಗ)

ಒಡೆತನ ನಿರ್ಧಾರವಾಗಲಿ
ಮರಳು ತೆಗೆಯುವ ನದಿಯ ಒಡೆತನ ಯಾರದ್ದು ಎಂಬುದು ಮೊದಲು ನಿಗದಿಯಾಗಬೇಕು. ಅರಣ್ಯ ಅಥವಾ ಕಂದಾಯ ಇಲಾಖೆ ವ್ಯಾಪ್ತಿಗೆ ತಂದು ಆ ಮೂಲಕ ಮರಳು ತೆಗೆಯುವ ಸಂಬಂಧ ಸ್ಪಷ್ಟ ಕಾನೂನು-ಕಾಯ್ದೆಗಳನ್ನು ರೂಪಿಸಬೇಕು. ನದಿ ಒಳಗಡೆ ಮರಳು ತೆಗೆಯುವುದಕ್ಕೂ ನಿರ್ಬಂಧ ಹೇರಬೇಕು. ಇಲ್ಲದಿದ್ದರೆ ನದಿ, ಪರಿಸರ ವ್ಯವಸ್ಥೆ ಹಾಳಾಗುತ್ತದೆ.
- ಅನಂತ ಹೆಗಡೆ ಆಶೀಸರ . ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.