ಶನಿವಾರ, ಜೂನ್ 19, 2021
27 °C

ಗಡಿಭಾಗದಲ್ಲಿ ಸಾಹಿತ್ಯದ ರುಚಿ

ನಾಗೇಂದ್ರ ಖಾರ್ವಿ Updated:

ಅಕ್ಷರ ಗಾತ್ರ : | |

ಕಾರವಾರ: ಮಕ್ಕಳ ಕಥೆಗಳು, ನಾಟಕ, ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಅನುಕೂಲ ಮಾಡಿಕೊಡುವ ವಿಜ್ಞಾನ ಮಾದರಿಯ ವಿವರಗಳುಳ್ಳ ಪುಸ್ತಕಗಳು, ಹೆಸರಾಂತ ಸಾಹಿತಿಗಳ ಕಾದಂಬರಿ, ಸಾಮಾನ್ಯ ಜ್ಞಾನ, ವೈಜ್ಞಾನಿಕ ಆವಿಷ್ಕಾರಗಳು, ಧರ್ಮ, ಸಂಗೀತಕ್ಕೆ ಸೇರಿದ ಸಾಹಿತ್ಯ ಪುಸ್ತಕಗಳು ಯೂನಿವರ್ಸಲ್ ಪುಸ್ತಕ ಮಳಿಗೆಯಲ್ಲಿವೆ.ಸಾಹಿತ್ಯಾಸಕ್ತರು ತಮಗಿಷ್ಟದ ಸಾಹಿತ್ಯ ಕೃತಿಗಳನ್ನು ಧಾರವಾಡದಿಂದಲೋ, ಬೆಂಗಳೂರಿನಿಂದಲೋ ತರಿಸಬೇಕಾಗಿಲ್ಲ. ನಗರದ ಮಿತ್ರ ಸಮಾಜ ಮೈದಾನದಲ್ಲಿರುವ ಯೂನಿವರ್ಸಲ್ ಪುಸ್ತಕ ಮಳಿಗೆಯಲ್ಲಿ ಮಕ್ಕಳ ಸಾಹಿತ್ಯದಿಂದ ಹಿಡಿದು ಎಲ್ಲ ವರ್ಗದವರು ಇಷ್ಟಪಡುವ ಕನ್ನಡ, ಇಂಗ್ಲಿಷ್ ಸಾಹಿತ್ಯ ಕೃತಿಗಳು ಲಭ್ಯವಿದೆ. ಮಕ್ಕಳ ಸಾಹಿತ್ಯದ ಕುರಿತ ಸಿಡಿಗಳೂ ಲಭ್ಯ. ಮಕ್ಕಳಲ್ಲಿ ಓದು ಹವ್ಯಾಸ ಬೆಳೆಸುವ ದೃಷ್ಟಿಯಿಂದ ಮಕ್ಕಳಿಗೇ ಸಂಬಂಧಿಸಿದ ಇಂಗ್ಲಿಷ್, ಕನ್ನಡ ಸಾಹಿತ್ಯ, ವ್ಯಾಕರಣ, ಪುಸ್ತಕಗಳು ಮಳಿಗೆಯಲ್ಲಿ ಸಿಂಹಪಾಲು ಪಡೆದುಕೊಂಡಿವೆ.  `ಗ್ರೆಟ್ ಜೋಕ್ಸ್~, ಮಕ್ಕಳ ಬುದ್ಧಿಶಕ್ತಿ ಚುರುಕುಗೊಳಿಸುವ `ಕಟ್ ಅಂಡ್ ಪೆಸ್ಟ್~ ಪುಸ್ತಕ, ನೀತಿ ಕಥೆಗಳು, ಪಂಚತಂತ್ರ ಕಥೆಗಳು, ಅಕ್ಬರ್ ಬೀರಬಲ್‌ರ ಕಥೆಗಳು ಹೀಗೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹುಟ್ಟಿಸುವ ಪುಸ್ತಗಳು ಮಳಿಗೆಯಲ್ಲಿ ಮಾರಾಟಕ್ಕಿವೆ.

 

ಮಕ್ಕಳು ಟಿ.ವಿ. ಮುಂದೆ ಕುಳಿತು ಸಮಯ ಹಾಳು ಮಾಡದೆ ಓದಿನಲ್ಲಿ ಆಸಕ್ತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಅವರಿಗೆ ಸಂಬಂಧಿಸಿದ ಹೆಚ್ಚು ಪುಸ್ತಕಗಳನ್ನು ಮಾರಾಟಕ್ಕಿಡಲಾಗಿದೆ.ಮನೆಯ ಮುಂದಿರುವ ತೋಟದಲ್ಲಿ, ಹಿತ್ತಲಲ್ಲಿ ಎಷ್ಟೋ ಔಷಧೀಯ ಸಸ್ಯಗಳು ಇರುತ್ತವೆ. ಅವುಗಳ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಅಂತಹ ಸಸ್ಯಗಳ ಕುರಿತು ಮಾಹಿತಿಯುಳ್ಳ `ಕರ್ನಾಟಕದ ಔಷಧೀಯ ಸಸ್ಯಗಳು~ ಮತ್ತು `ಮನೆಯಂಗಳದ ಔಷಧೀಯ ಸಸ್ಯ~ಗಳ ಕುರಿತ ಪುಸ್ತಕಗಳು, ಪರಮಹಂಸ ಯೋಗಾನಂದರ `ಯೋಗಿಯ ಆತ್ಮಕಥೆಗಳು~ ಹದಿನೈದಕ್ಕೂ ಹೆಚ್ಚು ಭಾಷೆಗಳಲ್ಲಿ ಮುದ್ರಣ ಕಂಡಿರುವ ಡಾ. ಸಾರಾ ಅಬುಬಕ್ಕರ್ ಅವರ `ಚಂದ್ರಗಿರಿಯ ತೀರದಲ್ಲಿ ಮತ್ತು ಮಹನೀಯರ ಜೀವಚರಿತ್ರೆಯ ಕುರಿತ ಕೃತಿಗಳು ಮಳಿಗೆಯಲ್ಲಿ ಲಭ್ಯವಿದೆ.ಕೊಂಕಣಿ ಭಾಷೆಯ ಪ್ರಾಬಲ್ಯವಿರುವ ಗಡಿಭಾಗದಲ್ಲಿ ಕನ್ನಡ ಸಾಹಿತ್ಯದ ರುಚಿಯೂಣಿಸಲು ಯೂನಿವರ್ಸಲ್ ಬುಕ್‌ಸೆಂಟ್‌ರ್ ಮುಂದೆ ಬಂದಿದ್ದು ನೂರು ರೂಪಾಯಿ ಮುಖ ಬೆಲೆಯ ಪುಸ್ತಕ ಖರೀದಿಯ ಮೇಲೆ ವಿಶೇಷ ರಿಯಾಯಿತಿಯನ್ನೂ ಪ್ರಕಟಿಸಿದೆ.ಡಾ. ಎಸ್.ಎಲ್.ಬೈರಪ್ಪ, ಕುವೆಂಪು. ಪೂರ್ಣಚಂದ್ರ ತೇಜಸ್ವಿ, ಡಾ. ಶಿವರಾಮ ಕಾರಂತ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಎಲ್ಲ ಕೃತಿಗಳನ್ನು ಸಾಹಿತ್ಯಾಸಕ್ತರು ಖರೀದಿಬಹುದಾಗಿದೆ.ಆಧ್ಯಾತ್ಮದ ಚಿಂತನೆಯ ಕುರಿತ ಪುಸ್ತಕಗಳೊಂದಿಗೆ ಭಜನೆ, ಕೀರ್ತನೆ, ದಾಸ ಸಾಹಿತ್ಯ, ವಚನ ಸಾಹಿತ್ಯ ಕೃತಿಗಳು ಮತ್ತು ತಾಯಿಯ ಎದೆಹಾಲಿನ ಮಹತ್ವ ಸಾರುವ ಡಾ. ಎಚ್. ನಾಗರಾಜ ಅವರ ` ಎದೆಹಾಲು~ ಪುಸಕ್ತವೂ ಮಹಿಳೆಗೆಯಲ್ಲಿ ಲಭ್ಯ.ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಛಾಯಾಚಿತ್ರ, ರಂಗಭೂಮಿ, ಸಂಗೀತ, ಚಲನಚಿತ್ರದ ಕುರಿತು ವಿವರಗಳನ್ನೊಳಗೊಂಡ `ಕಲಾದರ್ಶನ, ನೊಬೆಲ್ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನೊಳಗೊಂಡ `ನೊಬಲ್ ಪುರಸ್ಕೃತರು~ ಎಂಬ ಕೃತಿಯೂ ಇದ್ದು ಸಂಗ್ರಹ ಯೋಗ್ಯವಾಗಿವೆ.`ಗಡಿಭಾಗದಲ್ಲಿ ಸಾಹಿತ್ಯದ ರುಚಿ ತೋರಿಸಲು ಪುಸ್ತಕ ಮಳಿಗೆ ಹಾಕಿದ್ದೇವೆ. ಕೇವಲ ಲಾಭವೊಂದೇ ಮುಖ್ಯವಲ್ಲ. ಸಾಹಿತ್ಯದ ಅಭಿರುಚಿ ಮೂಡಿಸುವ ಉದ್ದೇಶವನ್ನೂ ನಾವು ಹೊಂದಿದೆ. ಸಾಹಿತ್ಯಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ಬಂದರೆ 3-4 ತಿಂಗಳ ಕಾಲ ಇಲ್ಲಿಯೇ ಇರುತ್ತೇವೆ~ ಎನ್ನುತ್ತಾರೆ ಯೂನಿವರ್ಸಲ್ ಬುಕ್ ಸೆಂಟರ್‌ನ ಭೂಪೇಶ ಪಾಲನ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.