ಸೋಮವಾರ, ಮೇ 23, 2022
30 °C

ಗಡಿ ಸ್ಥಿರತೆಗೆ ಆಂಟನಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಪಿಟಿಐ): ಉಭಯ ದೇಶಗಳು ಸೇನಾ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಗಡಿಯಲ್ಲಿ ಸ್ಥಿರತೆ ಕಾಣಬಹುದು ಎಂದು ರಕ್ಷಣಾ ಸಚಿವ ಎ.ಕೆ ಆಂಟನಿ ಇಂದಿಲ್ಲಿ  ತಿಳಿಸಿದರು.ಇಲ್ಲಿನ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸೇನಾ ಒಪ್ಪಂದಗಳಿಂದ ಗಡಿಯಲ್ಲಿ ಶಾಂತಿ ನೆಲಸಲಿದ್ದು, ಉಭಯ ದೇಶಗಳ ಸೇನೆಯ ನಡುವೆ ಸೌಹಾರ್ದತೆ ಬೆಳೆಯಲಿದೆ ಎಂದು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಲಿಯೂ ಆಂಟನಿ ಅವರ ಮಾತನ್ನು ಸಮರ್ಥಿಸಿದರು.ಗಡಿಯಲ್ಲಿ ಸ್ಥಿರತೆ ಮತ್ತು ಶಾಂತಿ ಕಾಪಾಡಲು ಎರಡು ದೇಶಗಳ ಸೇನೆಯ ಮಧ್ಯೆ ಸಮನ್ವಯತೆ ಅಗತ್ಯ. ಇದಕ್ಕಾಗಿ ಚೀನಾ ಭಾರತೀಯ ಸೇನೆಗೆ ತರಬೇತಿ ನೀಡಲು ಮುಂದಾಗಿದೆ ಎಂದು ಲಿಯೂ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.