ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ `ಅಕ್ರಮ ಗಣಿಗಾರಿಕೆ ಹಗರಣ~ ಗಣಿ ಕಂಪೆನಿಗಳನ್ನು ಎಳ್ಳಷ್ಟೂ ವಿಚಲಿತಗೊಳಿಸಿಲ್ಲ. ಗಣಿಗಾರಿಕೆಗೆ ಅನುಮತಿ ಕೇಳಿ ವಿವಿಧ ರಾಜ್ಯಗಳಲ್ಲಿ ಸಲ್ಲಿಕೆಯಾಗಿರುವ ಒಟ್ಟು ಅರ್ಜಿಗಳಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಕರ್ನಾಟಕ ಸರ್ಕಾರದ ಮುಂದಿದೆ!

ಕೇಂದ್ರ ಗಣಿ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ವಿವಿಧ ರಾಜ್ಯಗಳಲ್ಲಿ 42,500ಕ್ಕೂ ಹೆಚ್ಚು ಅರ್ಜಿಗಳು ಗಣಿಗಾರಿಕೆ ಅನುಮತಿಗಾಗಿ ಕಾದು ಕುಳಿತಿವೆ. ಇದರಲ್ಲಿ 19 ಸಾವಿರ ಅರ್ಜಿಗಳು ಕರ್ನಾಟಕವೊಂದರಲ್ಲೇ ಇದೆ. ಮಧ್ಯಪ್ರದೇಶ, ಗುಜರಾತ್, ಜಾರ್ಖಂಡ್, ಒರಿಸ್ಸಾ, ಗೋವಾ ಹಾಗೂ ಛತ್ತೀಸ್ಗಡ ಸರ್ಕಾರದ ಮುಂದೆಯೂ ಇಂತಹದೇ ಅರ್ಜಿಗಳಿವೆ. ಆದರೆ, ಸಂಖ್ಯೆ ತೀರಾ ಕಡಿಮೆ.

ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ನಿರ್ಬಂಧಿಸಲು ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ರಾಜ್ಯ ಸರ್ಕಾರ ಅದಿರು ಗಣಿಗಾರಿಕೆಗೆ ಅನುಮತಿ ನೀಡುತ್ತಿಲ್ಲ. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಉಕ್ಕು ಕಾರ್ಖಾನೆ ಹೊಂದಿರುವ ಕಂಪೆನಿಗಳಿಗೆ ಮಾತ್ರ ಗಣಿಗಾರಿಕೆ ಅನುಮತಿ ನೀಡುವ ಘೋಷಣೆ ಮಾಡಿತ್ತು. ಇಷ್ಟಾದ ಮೇಲೂ ಗಣಿಗಾರಿಕೆಗೆ ಕರ್ನಾಟಕ ಅತ್ಯುತ್ತಮ ರಾಜ್ಯ ಎಂದು ಗಣಿ ಕಂಪೆನಿಗಳು ಭಾವಿಸಿದಂತಿದೆ ಎಂದು ಗಣಿ ಸಚಿವಾಲಯದ ಮೂಲಗಳು ತಿಳಿಸಿವೆ.

ಸದ್ಯ ಪ್ರಮುಖ ಖನಿಜಗಳ ಗಣಿಗಾರಿಕೆಗೆ ಸಂಬಂಧಿಸಿದಂತೆ ತನ್ನ ಮುಂದಿರುವ 120 ಅರ್ಜಿಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕೆಂಬ ಕುರಿತು ಕೇಂದ್ರ ಗಣಿ ಸಚಿವಾಲಯ ಕಾನೂನು ಸಚಿವಾಲಯದ ಅಭಿಪ್ರಾಯ ಕೇಳಿದೆ.

`ಮೊದಲು ಬಂದವರಿಗೆ ಮೊದಲ ಆದ್ಯತೆ~ ವಿಧಾನ ಅನುಸರಿಸಬೇಕೇ ಅಥವಾ ಬೇರೆ ಯಾವುದಾದರೂ ಮಾನದಂಡ ಅಳವಡಿಸಬೇಕೇ ಎಂದೂ ಕೇಳಿದೆ.

ಸುಪ್ರೀಂ ಕೋರ್ಟ್ ಫೆಬ್ರುವರಿ 2ರಂದು ನೀಡಿರುವ ತೀರ್ಪಿನಲ್ಲಿ `ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ಹರಾಜು ಪ್ರಕ್ರಿಯೆ~ಯೇ ಗಣಿಗಾರಿಕೆ ಅನುಮತಿಗೆ ಸರಿಯಾದ ವಿಧಾನ. ಮೊದಲು ಬಂದವರಿಗೆ ಮೊದಲ ಆದ್ಯತೆ ನಿಯಮ ದುರುಪಯೋಗ ಆಗುವ ಸಾಧ್ಯತೆಗಳು ಹೆಚ್ಚು ಎಂದು ಅಭಿಪ್ರಾಯಪಟ್ಟಿದೆ.

ಆದರೆ, ಸದ್ಯದ ಕಾನೂನಿನಲ್ಲಿ ಹರಾಜು ಪ್ರಕ್ರಿಯೆಗೆ ಅವಕಾಶವಿಲ್ಲ. ಉಕ್ಕು ಹಾಗೂ ಗಣಿ ಸಚಿವಾಲಯ ಸ್ಥಾಯಿ ಸಮಿತಿ ಮುಂದಿರುವ ಗಣಿ ಮತ್ತು ಖನಿಜ ಸಂಪತ್ತು ಅಭಿವೃದ್ಧಿ ಕಾಯ್ದೆ- 2011ರಲ್ಲಿ ಹರಾಜು ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.