ಮಂಗಳವಾರ, ಮೇ 11, 2021
26 °C

ಗಣೇಶೋತ್ಸವಕ್ಕೆ ಮಳೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ನಗರದಲ್ಲಿ ವಿವಿದ ಗಜಾನನ ಯುವಕ ಸಂಘದ ಪದಾ ಧಿಕಾರಿಗಳು ಸಕಲ ವಾಧ್ಯಗಳೊಂದಿಗೆ ಪರಸ್ಪರ ಗುಲಾಲು ಎರಚಿಕೊಂಡು ಸಿಡಿ ಮದ್ದು ಹಾರಿಸುತ್ತಾ ಜಿಟಿ ಜಿಟಿ ಮಳೆ ಯಲ್ಲಿಯೇ `ವಿಘ್ನೇಶ್ವರನ ಮೂರ್ತಿ~ ಯನ್ನು ಟ್ರ್ಯಾಕ್ಟರ್, ಟಂಟಂ ಗಾಡಿ, ಟಾಟಾ ಏಸ್‌ನಲ್ಲಿ ಮೆರವಣಿಗೆ ಮೂಲಕ ತಂದು ಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದರು.ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾ ವರಣ ಕವಿದಿತ್ತು. ಜಿಟಿ ಜಿಟಿ ಮಳೆ ಬೆಳಿಗ್ಗೆಯಿಂದಲೇ ಪ್ರಾರಂಭವಾಗಿ ರಾತ್ರಿ ಯವರೆಗೂ ಸುರಿಯಿತು. ಸಾರ್ವಜ ನಿಕರು ಗಣೇಶನ್ನು ಮನೆಗೆ ತರಲು ಹರಸಾಹಸ ಪಡಬೇಕಾಯಿತು.

ಸುತ್ತಮುತ್ತಲಿನ ಗ್ರಾಮಸ್ಥರು ಟ್ರ್ಯಾಕ್ಟ್ರರ ತಂದು ಬೆಳಿಗ್ಗೆಯಿಂದ ಕಾದು ಸುಸ್ತಾಗಿ ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆ ವರೆಗೂ ಕಾದ ಘಟನೆ ಎಲ್ಲ ಗಣೇಶ ಮಾರಾಟಗಾರರ ಬಳಿ ದೃಶ್ಯ ಕಂಡು ಬಂದಿತು.ನಗರಸಭೆ ಕ್ರೀಡಾಂಗಣದಲ್ಲಿ ಹಾಕಿದ ಪಟಾಕಿ ಅಂಗಡಿ ವ್ಯಾಪಾಸ್ಥರಿಗೆ ಮಳೆಯ ಭರಾಟೆಯಿಂದ ಪಟಾಕಿ ಕೊಳ್ಳುವವರು ಬಾರದೇ ವ್ಯಾಪಾರ ನಡೆಯಲಿಲ್ಲ. ಬಾಡಿಗೆ ಕೂಡ ಮೈಮೇಲೆ ಆಗಿದೆ    ಎನ್ನುತ್ತಾರೆ ಪಟಾಕಿ ಅಂಗಡಿ ವ್ಯಾಪಾರ ಸ್ಥರು.ಗ್ರಾಮೀಣ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದು ಶೇಂಗಾ, ಮೆಕ್ಕೆ ಜೋಳ, ಹತ್ತಿ, ಈರುಳ್ಳಿ ಉತ್ತಮವಾಗಿ ಬೆಳೆ ದಿದ್ದು, ಕಳೆದ ಮೂರುನಾಲ್ಕು ವಾರ ದಿಂದ ಮಳೆ ಬಾರದೇ ಪೀಕುಗಳು ಬಾಡಲಿಕ್ಕೆ ಹತ್ತಿದ್ದರಿಂದ ರೈತರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಕಂಗಾಲಾಗಿದ್ದರು. ಗುರುವಾರ ಬೆಳಿಗ್ಗೆಯಿಂದಲೇ ಮಳೆ ಪ್ರಾರಂಭವಾಗಿದ್ದರಿಂದ ರೈತರ ಮುಖ ದಲ್ಲಿ ಕಳ ಬಂದು ಮತ್ತೆ ಕೃಷಿ ಚಟು ವಟಿಕೆಗಳು ಬಿರುಸಿನಿಂದ ತಾಲ್ಲೂಕಿ ನಾದ್ಯಂತ ನಡೆದವು. ಹಿರೇಕೆರೂರ ವರದಿ

ತಾಲ್ಲೂಕಿನಲ್ಲಿ ಗಣೇಶ ಚತುರ್ಥಿಯನ್ನು ಜಿಟಿಜಿಟಿ ಮಳೆ ಮಧ್ಯದಲ್ಲಿಯೇ ಭಕ್ತಿ ಭಾವದಿಂದ ಆಚರಿಸಲಾಯಿತು.

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶ ಗಳಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿ ಸಲು ಸಂಘ-ಸಂಸ್ಥೆಗಳು ಮೆರವಣಿಗೆ ಯಲ್ಲಿ ಭಜನೆ, ವಾದ್ಯ ವೈಭವ ದೊಂದಿಗೆ ಪಟಾಕಿ ಸಿಡಿಸುತ್ತಾ ಗಣೇಶ ನನ್ನು ತರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು. ಶಾಲೆ-ಕಾಲೇಜು ಗಳಲ್ಲಿ ವಿದ್ಯಾರ್ಥಿಗಳು ಸಂಭ್ರಮ ಸಡಗರದಿಂದ ಗಣೇಶನ ಹಬ್ಬವನ್ನು ಆಚರಿಸಿದರು.ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದ ಎದುರು ಪ್ರತಿಷ್ಠಾಪಿಸಿರುವ ಗಣೇಶ, 8 ಅಡಿ ಎತ್ತರದ ಶಿರಡಿ ಸಾಯಿ ಬಾಬಾ ಹೆಗಲ ಮೇಲೆ ಕುಳಿತು ಕೊಳಲು ನುಡಿಸುತ್ತಿರುವುದು ಆಕರ್ಷಕವಾಗಿದೆ. ಸಂಜೆ ವೇಳೆಯಲ್ಲಿ ಪುಟಿಯುವ ಕಾರಂಜಿ ಮನಸೂರೆಗೊಳ್ಳುತ್ತಿದೆ.ಸರ್ವಜ್ಞ ವೃತ್ತದಲ್ಲಿ ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾದೇವಿ ಟ್ಯಾಕ್ಸಿ ಮಾಲೀಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಿರುವ ಗಣಪತಿ ಗರುಡನ ಮೇಲೆ ಕುಳಿತಿದ್ದು, ಮೂರ್ತಿ ಅತ್ಯಂತ ಸುಂದರವಾಗಿದೆ.ಅಕ್ಕಿಆಲೂರ ವರದಿ

ಇಲ್ಲಿ ಧಾರಾಕಾರ ಸುರಿದ ಮಳೆ ಸಂಭ್ರಮದ ಗಣೇಶೋತ್ಸವದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಬಿಟ್ಟು ಬಿಡದೇ ಒಂದೇ ಸಮನೆ ಧೋ ಎಂದು ಸುರಿದ ಮಳೆಯಿಂದಾಗಿ ಗಣೇಶ ಚತು ರ್ಥಿಯ ಸಡಗರಕ್ಕೆ ಮಂಕು ಕವಿದಿತ್ತು.ಮಳೆಯನ್ನು ಲೆಕ್ಕಿಸದೇ ಭಕ್ತ ಸಮೂಹ ತಮ್ಮ ಮನೆಗಳಿಗೆ ಗಣೇಶ ವಿಗ್ರಹಗಳನ್ನು ತೆಗೆದುಕೊಂಡು ಹೋಗು ತ್ತಿದ್ದ ದೃಶ್ಯ ಗಳು ಕಂಡು ಬಂದವು. ಬಗೆ ಬಗೆಯ ರೂಪದಲ್ಲಿದ್ದ ಗಣೇಶ ವಿಗ್ರಹ ಗಳನ್ನು ಮನೆ ಹಾಗೂ ಬೀದಿಗಳಲ್ಲಿ ಪ್ರತಿಷ್ಠಾಪಿಸ ಲಾಯಿತು. ಎಲ್ಲೆಡೆ ಗಜ ಮುಖನ ಆರಾಧನೆ ಜೋರಾಗಿ ಕಂಡು ಬಂದಿತು.ಸಾರ್ವಜನಿಕ ಗಜಾನನ ಸಮಿತಿಗಳ ಆಶ್ರಯದಲ್ಲಿ ಬೃಹದಾಕಾರದ ಮೂರ್ತಿ ಗಳನ್ನು ಟ್ಯಾಕ್ಟರ್‌ನಲ್ಲಿ ಇರಿಸಿ ಸಂಭ್ರಮ ದಿಂದ ಮೆರವಣಿಗೆಯ ಮೂಲಕ ಗಣಪತಿಯನ್ನು ಕರೆ ತರಲಾಯಿತು. ಪ್ರಮುಖವಾಗಿ ಇಲ್ಲಿಯ ಪೇಟೆ ಓಣಿಯ ವೀರಭದ್ರೇಶ್ವರ ದೇವಸ್ಥಾನ, ವಿ.ಎಂ. ರಸ್ತೆ, ಗೌಡರ ಓಣಿ, ಕುಮಾರ ನಗರ, ಮಾರುತಿ ನಗರ, ಕೆಳಗಿನ ಓಣಿ, ದುಂಡಿ ಬಸವೇಶ್ವರ ಓಣಿ ಇನ್ನೂ ಮುಂತಾದೆಡೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.ಧಾರಾಕಾರವಾಗಿ ಸುರಿದ ಮಳೆ ಯಿಂದ ಜನತೆ ಮನೆಯಿಂದ ಆಚೆ ಬರಲು ಪ್ರಯಾಸ ಪಡುವಂತಾಯಿತು. ಇದು ಗಣೇಶೋತ್ಸವದ ಮೇಲೆ ಪ್ರಭಾವ ಬೀರಿ ಹಬ್ಬವನ್ನು ಕಳಾಹೀನ ವಾಗಿಸಿದ್ದು ಮಾತ್ರ ಜನತೆಯ ಸಂತಸವನ್ನು ಕಸಿದು ಕೊಂಡಿತ್ತು. ಗುತ್ತಲ ವರದಿ

ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಮಳೆ ರಾಯ ಅಡ್ಡಿಯಾಗಿದ್ದು, ಹಬ್ಬ ಆಚರಿ ಸುವ ಹುಮ್ಮಸ್ಸಿಗೆ ತಣ್ಣಿರೇರೆಚಿದೆ. ಬುಧವಾರ ರಾತ್ರಿಯಿಂದಲೇ ಗುತ್ತಲ ಹೋಬಳಿಯ ಎಲ್ಲ ಗ್ರಾಮಗಳಲ್ಲಿ ಶುರವಾದ ಮಳೆ ಹಬ್ಬದ ತಯಾರಿಗೂ ಅಡಚಣೆಯಾಗಿತ್ತು. ಅಲ್ಲದೆ ಹಬ್ಬದ ದಿನದಂದು ಬೆಳಗಿನಿಂದಲೇ ಜಿಟಿ ಜಿಟಿ ಮಳೆಯಲ್ಲಿ ಗಣೇಶನ ಮೂರ್ತಿ ಹೊತ್ತೊಯ್ಯುವ ದೃಶ್ಯ ಸಾಮಾನ್ಯ ವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.