ಶುಕ್ರವಾರ, ಜನವರಿ 24, 2020
20 °C

ಗಿಡಗಂಟೆ ತೆರವುಗೊಳಿಸಿ

–ಜಕ್ಕೂರು ಎಸ್‌. ನಾಗರಾಜು Updated:

ಅಕ್ಷರ ಗಾತ್ರ : | |

ಯಲಹಂಕ ದೊಡ್ಡಬಳ್ಳಾಪುರ ರಸ್ತೆಯನ್ನು ಬಿ.ಎಂ.ಎಸ್‌. ಕಾಲೇಜಿನವರೆಗೂ ಅಭಿವೃದ್ಧಿಪಡಿಸಿದ್ದು ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ಪಥಕ್ಕೆ ಟೈಲ್ಸ್ ಅಳವಡಿಸಿರುತ್ತಾರೆ. ಆದರೆ ಒಂದು ಬದಿಯ ಪಾದಚಾರಿ ರಸ್ತೆಯಲ್ಲಿ ಗಿಡ, ಬಳ್ಳಿಗಳು ಬೆಳೆದು ಜನರು ಈ ರಸ್ತೆಯಲ್ಲಿ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ.ವಾಹನಗಳು ಸಂಚರಿಸುವ ರಸ್ತೆಯಲ್ಲೇ ಓಡಾಡಬೇಕಾಗಿದೆ. ಇದರಿಂದ ರಸ್ತೆ ಅಪಘಾತಗಳಾಗುವ ಸಂಭವವಿದೆ. ಆದ್ದರಿಂದ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ರಸ್ತೆಬದಿಯ ಗಿಡ–ಗಂಟೆಗಳನ್ನು ತೆರವು ಮಾಡಿ ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಬೇಕು.

 

ಪ್ರತಿಕ್ರಿಯಿಸಿ (+)