ಬೆಂಗಳೂರು: ಮಾಜಿ ಚಾಂಪಿಯನ್ ಕರ್ನಾಟಕ ತಂಡವು, ‘ಎಚ್’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಗೋವಾ ತಂಡದ ಎದುರು ಬುಧವಾರ 0–2 ಗೋಲುಗಳಿಂದ ಸೋಲು ಅನುಭವಿಸುವುದರೊಂದಿಗೆ, ಸತತ ಎರಡನೇ ವರ್ಷ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿತ್ತು.

ನಾಯಕ ಸ್ಟಾನ್ಲಿ ಫರ್ನಾಂಡಿಸ್ (45+2) ಮತ್ತು ಸಬ್ಸ್ಟಿಟ್ಯೂಟ್ ಆಟಗಾರ ಜೋಶುವ ಡಿ‘ಸಿಲ್ವ (69ನೇ ನಿಮಿಷ) ಅವರು ಎರಡು ಬಾರಿಯ ಚಾಂಪಿಯನ್ ಗೋವಾ ಪರ ಗೋಲುಗಳನ್ನು ಗಳಿಸಿದರು. ಗೋವಾ ತಂಡಕ್ಕೆ ಎಚ್ ಗುಂಪಿನಲ್ಲಿ ಇದು ಮೊದಲ ಗೆಲುವು.

ಸ್ಟಾರ್ ಆಟಗಾರ ಮೆಕಾರ್ಟನ್ ನಿಕ್ಸನ್ ಅವರು ಎರಡು ಬಾರಿ ಹಳದಿ ಕಾರ್ಡ್ ಪಡೆದು ಅಮಾನತಾಗಿದ್ದ ಕಾರಣ ಅವರಿಲ್ಲದೇ ಗೋವಾ ತಂಡ ಕಣಕ್ಕಿಳಿಯಿತು. ಸರ್ವಿಸಸ್ ತಂಡ ಗುಂಪಿನಲ್ಲಿ ಮೂರೂ ಪಂದ್ಯ ಗೆದ್ದು ಈ ಮೊದಲೇ ನಾಕೌಟ್ಗೆ ಅರ್ಹತೆ ಪಡೆದಿದ್ದ ಕಾರಣ ಗೋವಾ ತಂಡ ಈ ಪಂದ್ಯದಲ್ಲಿ ಸಮಾಧಾನಕರ ಗೆಲುವಿಗಾಗಿ ಆಡಿತು.

ಇನ್ನೊಂದು ಪಂದ್ಯದಲ್ಲಿ ಸರ್ವಿಸಸ್ ತಂಡ 2–1 ಗೋಲುಗಳಿಂದ ಲಕ್ಷದ್ವೀಪ ತಂಡವನ್ನು ಮಣಿಸಿತು. ರೋಶನ್ ಪನ್ನಾ (54ನೇ ನಿಮಿಷ) ಮತ್ತು ವಿಜಯ್ ಜೆ (60ನೇ ನಿಮಿಷ) ವಿಜೇತ ತಂಡದ ಪರ ಗೋಲು ಗಳಿಸಿದರು. ಲಕ್ಷದ್ವೀಪ ಪರ ನಿಸಾಮುದ್ದೀನ್ ಬಿ.ಸಿ. 88ನೇ ನಿಮಿಷ ಸೋಲಿನ ಅಂತರ ಕಡಿಮೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.