ಗುರುವಾರ , ಮೇ 13, 2021
35 °C

ಗುಟ್ಕಾ ನಿಷೇಧ ಶ್ಲಾಘನೀಯ

ಡಾ. ಸಮೀರ ಎಲ್. ಹಾದಿಮನಿ ಆಲಮೇಲ (ಬಿಜಾಪೂರ) Updated:

ಅಕ್ಷರ ಗಾತ್ರ : | |

ಅಗ್ಗದ ಮದ್ಯ ಸರಬರಾಜು ಪ್ರಸ್ತಾವದಿಂದ ಸಾಕಷ್ಟು ಮುಜುಗರಕ್ಕೆ ಒಳಗಾಗಿರುವ ಸರ್ಕಾರ ವಿಶ್ವ ತಂಬಾಕು ರಹಿತ ದಿನದಂದು ಹಾನಿಕಾರಕ ಗುಟ್ಕಾ ನಿಷೇಧಿಸುವುದರ ಮೂಲಕ ಶ್ಲಾಘನೀಯ ಕ್ರಮಕೈಗೊಂಡಿದೆ.ಗುಟ್ಕಾ ತಯಾರಿಕೆಯಲ್ಲಿ ಕಡಿಮೆ ಗುಣಮಟ್ಟದ ಅಡಿಕೆಯೊಂದಿಗೆ ತಂಬಾಕು ಮತ್ತು ಸುಗಂಧಿತ ರಾಸಾಯನಿಕ ಬಳಸಲಾಗುತ್ತದೆ. ತಂಬಾಕಿನಲ್ಲಿರುವ  ನಿಕೊಟಿನ್  ಕಾರ್ಸಿನೊಜನಿಕ್ (ಅರ್ಬುದಕಾರಕ) ಆಗಿದ್ದು, ಮುಖ-ಗಂಟಲಿನ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿದ್ದರೆ, ಹಾನಿಕಾರಕ ರಾಸಾಯನಿಕ ಯಕೃತ್-ಮೂತ್ರಪಿಂಡಗಳಿಗೆ ಮಾರಕವಾಗಿದೆ.ಅಡಿಕೆ ಬೆಳೆಗಾರರು ನಿಷೇಧಕ್ಕೆ ವಿರೋಧಿಸದಂತೆ ಅಡಿಕೆಗೆ ವೈಜ್ಞಾನಿಕ ಬೆಂಬಲ ಬೆಲೆಯ ಮೂಲಕ ಖರೀದಿಸಲಿ. ತಂಬಾಕಿಗೆ ಪರ್ಯಾಯವಾದ ಲಾಭಕರ ಬೆಳೆಗಳತ್ತ ಮನಸ್ಸು ಮಾಡಲಿ.  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.