ಚಾಮರಾಜನಗರ: `ರಾಜ್ಯ ಸರ್ಕಾರ ತಂಬಾಕು ಮತ್ತು ನಿಕೋಟಿನ್ ಅಂಶವಿರುವ ಗುಟ್ಕಾ, ಪಾನ್ ಮಸಾಲ ಮಾರಾಟ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ನಿಷೇಧಿತ ಈ ವಸ್ತುಗಳನ್ನು ಮಾರಾಟ ಮಾಡಿದರೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗುವುದು' ಎಂದು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಂಬಾಕು ನಿಷೇಧ ಕೋಶ ಹಾಗೂ ನಿಯಂತ್ರಣ ತನಿಖಾ ದಳದ ಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಬಂಧನೆ ಪ್ರಕಾರ ತಂಬಾಕು ಮತ್ತು ನಿಕೋಟಿನ್ ಅಂಶ ಒಳಗೊಂಡ ಗುಟ್ಕಾ, ಪಾನ್ ಮಸಾಲ ಮಾರಾಟ ತಯಾರಿಕೆ, ಸಂಗ್ರಹಣೆ ಹಾಗೂ ವಿತರಣೆ ಮಾಡುವಂತಿಲ್ಲ. ಜಿಲ್ಲೆಯ ಯಾವುದೇ ಸ್ಥಳದಲ್ಲಿ ನಿಷೇಧ ಉಲ್ಲಂಘಿಸಿರುವುದು ಕಂಡುಬಂದರೆ ಮಾರಾಟಗಾರರು, ವಿತರಕರ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಹೇಳಿದರು.

ನಿಷೇಧಿತ ತಂಬಾಕು ಪದಾರ್ಥ, ಗುಟ್ಕಾ ಮಾರಾಟದ ಅಂಗಡಿಗಳ ಮೇಲೆ ಮುಲಾಜಿಗೆ ಒಳಗಾಗದೆ ದಾಳಿ ನಡೆಸಬೇಕು. ಅಕ್ರಮವಾಗಿ ಸಂಗ್ರಹ, ಮಾರಾಟದ ವಿರುದ್ಧ ಆರೋಗ್ಯ ಹಾಗೂ ಆಹಾರ ಇಲಾಖೆಯ ಅಧಿಕಾರಿ ಗಳು ಸಂಘಟಿತ ರಾಗಿ ಕಾರ್ಯಾಚರಣೆ ನಡೆಸಬೇಕು. ಸರ್ಕಾರ ನಿಗದಿಪಡಿಸಿರುವ ದಂಡ ವಿಧಿಸಬೇಕು. ದಂಡ ವಸೂಲಿ ಮಾಡಿದ ರಶೀದಿ, ನಿತ್ಯದ ಕಾರ್ಯ ನಿರ್ವಹಣೆ ಕುರಿತು ಪ್ರತಿ ವಾರ ತಮಗೆ ವರದಿ ಸಲ್ಲಿಸ ಬೇಕು ಎಂದು ಸೂಚಿಸಿದರು.

ನಗರ ಮತ್ತು ಗ್ರಾಮೀಣ ಪ್ರದೇಶದ ಸಣ್ಣಪುಟ್ಟ ಅಂಗಡಿಗಳಲ್ಲಿ ಗುಟ್ಕಾ, ಪಾನ್ ಮಸಾಲ ಮಾರಾಟವಾಗುತ್ತಿದೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಮಾರಾಟ ಮಾಡುವುದು ಕಂಡುಬಂದರೆ ನೋಟಿಸ್ ಜಾರಿಗೊಳಿಸಿ ತಿಳಿವಳಿಕೆ ನೀಡ ಬೇಕು. ನಂತರದ ದಿನಗಳಲ್ಲೂ ಮಾರಾಟ ಮುಂದುವರಿಸಿದರೆ ನಿರ್ದಾಕ್ಷಿಣ್ಯವಾಗಿ ಅಂಗಡಿಗೆ ಬೀಗಮುದ್ರೆ ಹಾಕಬೇಕು ಎಂದರು.

ಎಲ್ಲೆಂದರಲ್ಲಿ ಬೀಡಿ, ಸಿಗರೇಟ್ ಸೇವನೆ ಮಾಡುವುದಕ್ಕೆ ಈ ಹಿಂದೆಯೇ ನಿಯಂತ್ರಣ ಹೇರಲಾಗಿದೆ. ಸರ್ಕಾರಿ ಕಚೇರಿ, ಬಸ್ನಿಲ್ದಾಣ, ಶಾಲಾ- ಕಾಲೇಜು, ಧಾರ್ಮಿಕ ಸ್ಥಳ ಸೇರಿದಂತೆ ಹಲವೆಡೆ ಕಟ್ಟುನಿಟ್ಟಾಗಿ ಧೂಮಪಾನ ನಿಷೇಧಿಸಲಾಗಿದೆ. ಕೆಲವು ಮನರಂಜನಾ ಸ್ಥಳಗಳಲ್ಲಿ ಸಿಗರೇಟ್ ಸೇವನೆಗಾಗಿಯೇ ಪ್ರತ್ಯೇಕ ಧೂಮಪಾನ ಸ್ಥಳ ನಿಗದಿ ಮಾಡಬೇಕಿದೆ. ನಿಷೇಧಿತ ಪ್ರದೇಶದಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಮಾತನಾಡಿ, ಶಾಲಾ- ಕಾಲೇಜು ಬಳಿಯಿರುವ ಅಂಗಡಿಗಳಲ್ಲಿ ತಂಬಾಕು, ಗುಟ್ಕಾ ಮಾರಾಟ ಮಾಡುವುದನ್ನು ಸಂಪೂರ್ಣ ವಾಗಿ ತಡೆಯಬೇಕಿದೆ. ಆರೋಗ್ಯ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಗುಟ್ಕಾ ಮಾರಾಟದ ವಿರುದ್ಧದ ಕಾರ್ಯಾ ಚರಣೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಸಭೆಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಲ್ಲಿಕಾ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಎನ್. ಚಂದ್ರೇಗೌಡ, ಆಹಾರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.