ಬುಧವಾರ, ಜನವರಿ 22, 2020
22 °C

ಗುಡ್ಡಗಾಡಿನಲ್ಲಿ ಪ್ರಚಾರದ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಫಾಲ (ಪಿಟಿಐ): ಮಣಿಪುರದ 60 ವಿಧಾನಸಭಾ ಕ್ಷೇತ್ರಗಳ ಪೈಕಿ ಗುಡ್ಡಗಾಡು ಪ್ರದೇಶದ 20 ಮತಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ರಂಗು ರಂಗಿನ ಬ್ಯಾನರ್‌ಗಳು ಎದ್ದುಕಾಣುತ್ತಿವೆ. ಎಲ್ಲೆಲ್ಲೂ ಸಾರ್ವಜನಿಕ ಸಭೆಗಳು ನಡೆಯುತ್ತಿವೆ.ಮುಖ್ಯಮಂತ್ರಿ ನೇಫ್ಯು ರಿಯೊ ಅವರು ಪ್ರತಿಷ್ಠಿತ ಉಖರುಲ್ ಕ್ಷೇತ್ರ ಸೇರಿದಂತೆ ಇಡೀ ಗುಡ್ಡಗಾಡಿನಾದ್ಯಂತ ಪ್ರಚಾರ ಕೈಗೊಂಡಿದ್ದಾರೆ. ಉಖರುಲ್ ಕ್ಷೇತ್ರದ ಹಾಲಿ ಪಕ್ಷೇತರ ಶಾಸಕ ಡ್ಯಾನಿ ಶೈಜಾ ಅವರು ಈ ಬಾರಿ ಬಿಜೆಪಿಯಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ನ ಅಲ್‌ಫ್ರೆಡ್ ಕಂಗಾಮ್ ಅರ್‌ಥರ್, ಎನ್‌ಸಿಪಿಯಿಂದ ಅಲೆಂಗ್ ಎ.ಎಸ್. ಶಿಮ್‌ರೇ ಮತ್ತು ತೃಣಮೂಲ ಕಾಂಗ್ರೆಸ್‌ನಿಂದ ಎಸ್. ಸೊಮತೈ ಸ್ಪರ್ಧಿಸುತ್ತಿದ್ದಾರೆ.ನಾಗಾ ಸಮುದಾಯದ ಪ್ರಾಬಲ್ಯ ಇರುವ ಗುಡ್ಡಗಾಡಿನ ಕ್ಷೇತ್ರಗಳಲ್ಲಿ ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ರಿಯೊ ಮನವಿ ಮಾಡಿದ್ದಾರೆ. ಇದೇ 28ರಂದು ಚುನಾವಣೆ ನಡೆಯಲಿದೆ.

 

ಪ್ರತಿಕ್ರಿಯಿಸಿ (+)