ಭಾನುವಾರ, ಜೂನ್ 20, 2021
26 °C

ಗುಪ್ತಾಗೆ ರೂ 88 ಕೋಟಿ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಹೂಡಿಕೆ ವ್ಯವಹಾರದಲ್ಲಿ ಅಕ್ರಮ ಎಸಗಿದ,  ‘ಗೋಲ್‌್ಡಮ್ಯಾನ್‌ ಸಚ್‌’ ಹೂಡಿಕೆ ಕಂಪೆನಿಯ ಮಾಜಿ ನಿರ್ದೇಶಕ ರಜತ್‌ ಗುಪ್ತಾಗೆ ಅಮೆರಿಕದ ಷೇರು ವಿನಿಮಯ ಆಯೋಗ (ಎಸ್‌ಇಸಿ) ಸುಮಾರು ರೂ  88 ಕೋಟಿ ದಂಡ ವಿಧಿಸುವುದರ ಜತೆಯಲ್ಲಿ ಸಾರ್ವಜನಿಕ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸದಂತೆ ಆಜೀವ ನಿರ್ಬಂಧ ಹೇರಿದೆ.ಈ ಸಂಬಂಧ ಜಿಲ್ಲಾ ಕೋರ್ಟ್ ನೀಡಿರುವ  ತೀರ್ಪನ್ನು ಎತ್ತಿ ಹಿಡಿಯುವಂತೆ ಎಸ್‌ಇಸಿ ಮೇಲ್ಮನವಿಯಲ್ಲಿ ಕೋರ್ಟ್ ಗೆ ಕೇಳಿಕೊಂಡಿದೆ. ಕಂಪೆನಿಯ ಹೂಡಿಕೆ ಎಜೆಂಟರು, ಷೇರುದಾರರ ಜತೆ ಭಾರತ ಮೂಲದಗುಪ್ತಾ ಕಾನೂನು ಬಾಹಿರವಾಗಿ ವ್ಯವಹಾರ ಕೈಗೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ಆರೋಪ ಪಟ್ಟಿ ಹೊರಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.