ಮೈಸೂರು: ‘ಭಾರತೀಯರು ಗುಲಾಮಗಿರಿಯ ಪ್ರವೃತ್ತಿಯನ್ನು ಬಿಟ್ಟು, ಸ್ವತಂತ್ರ ಚಿಂತನೆಯನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಾಗ ಮಾತ್ರ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ನಡೆಸಿದ ಹೋರಾಟಕ್ಕೆ ಸಾರ್ಥಕತೆ ಬರುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದರು.

ಜಿಲ್ಲಾಡಳಿತ ವತಿಯಿಂದ ಬನ್ನಿಮಂಟಪದ ಕವಾಯಿತು ಮೈದಾನದಲ್ಲಿ ಸೋಮವಾರ ನಡೆದ 70ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧಿ ಅವರು ‘ನಾವು ಸ್ವಾತಂತ್ರ್ಯದ ಹೋರಾಟವನ್ನು ಯಶಸ್ವಿಗೊಳಿಸಬೇಕು. ಭಾರತದ ಗುಲಾಮಗಿರಿಯ ಮುಂದುವರಿಕೆಯನ್ನು ನೋಡಲು ಬದುಕಿರಬಾರದು’ ಎಂದು ಹೇಳಿದ್ದರು. ಈ ಮಾತು ಇಂದಿಗೂ ಅನ್ವಯಿಸುತ್ತದೆ. ನಾವು ಸ್ವತಂತ್ರ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಗಾಂಧಿ ಹೇಳಿಕೊಟ್ಟ ಸತ್ಯಾಗ್ರಹ, ಅಹಿಂಸಾ ಮಾರ್ಗ, ಅಸಹಕಾರ ಚಳವಳಿ, ಸ್ವಾಭಿಮಾನವೆಂಬ ಸೂತ್ರಗಳನ್ನು ಅಳವಡಿಸಿಕೊಂಡು ದೇಶವನ್ನು ಕಟ್ಟಬೇಕು’ ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಹೊರಹೊಮ್ಮಿದ ಮೌಲ್ಯಗಳಾದ ರಾಷ್ಟ್ರ ಪ್ರೇಮ, ಗೌರವ, ಸ್ವಾತಂತ್ರ್ಯ ಹಿರಿಮೆ, ಸಂಘಟನಾ ಶಕ್ತಿ, ತ್ಯಾಗ, ಬಲಿದಾನ, ಒಗ್ಗಟ್ಟಿನ ಬಲ, ಶಿಸ್ತು, ಸಮಯ ಪ್ರಜ್ಞೆ, ಜಾತ್ಯತೀತ ಭಾವನೆ ಮತ್ತು ಮಾನವೀಯತೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಮತ್ತು ರಾಜಕೀಯ ಪ್ರಜ್ಞೆ, ದೇಶ ಸೇವೆಯ ಮನೋಭಾವನೆಗಳನ್ನು ಮನಃಪೂರ್ವಕವಾಗಿ ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯ ಚಳುವಳಿಯ ಮೌಲ್ಯಗಳು ಇಂದಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಕಳವಳಕಾರಿಯಾದ ಸಂಗತಿ. ಎಲ್ಲ ಭಾರತೀಯರು ಇವುಗಳನ್ನು ಸ್ಮರಿಸಿ, ಅನುಸರಿಸುವುದು ಬಹು ಮುಖ್ಯ ಎಂದರು.

ದೇಶದ ಪ್ರತಿಯೊಬ್ಬರೂ ಅಭಿವೃದ್ದಿ ಹೊಂದಿದಾಗ ಮಾತ್ರ ಭಾರತ ಅಭಿವೃದ್ಧಿ ದೇಶವಾಗಲು ಸಾಧ್ಯ. ರಾಷ್ಟ್ರದ ದುಡಿಯುವ ವರ್ಗಗಳ ಬದುಕು ಹಸನಾಗಬೇಕು. ಮಹಿಳೆಯರು ಮತ್ತು ಮಕ್ಕಳು ಸಬಲರಾಗಬೇಕು. ಭೂಮಿಯನ್ನು ಮೆಚ್ಚಿ ಬದುಕುವ ರೈತ ಶಕ್ತಿಶಾಲಿಯಾಗಬೇಕು. ಇದು ಸ್ವತಂತ್ರ ಭಾರತದ ಆಶಯವೂ ಹೌದು, ಜನಪರ ಸರ್ಕಾರಗಳ ಕರ್ತವ್ಯವೂ ಹೌದು ಎಂದು ತಿಳಿಸಿದರು.

ಸ್ವಾತಂತ್ರ್ಯ ಲಭಿಸಿದ 70 ವರ್ಷಗಳಲ್ಲಿ ಭಾರತವು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲ– ಇವೆರಡನ್ನೂ ಉತ್ಕೃಷ್ಟ ಮಟ್ಟದಲ್ಲಿ ಹೊಂದಿರುವ ಏಕೈಕ ರಾಷ್ಟ್ರ ಭಾರತ. ಕೃಷಿ ಅಭಿವೃದ್ಧಿ ತಂತ್ರಜ್ಞಾನದಲ್ಲಿನ ಪ್ರಗತಿ, ಕೈಗಾರಿಕೆಗಳ ಆಧುನೀಕರಣ ಹಾಗೂ ನಾಗರಿಕ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪುವ ಅಭಿವೃದ್ಧಿಯ ಪತಾಕೆ ಹಾರುತ್ತಿರುವ ಸಂದರ್ಭದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿ ಮತ್ತಷ್ಟು ವೇಗ ಪಡೆದುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಅಸಮಾತನೆ, ಜಾತೀಯತೆ, ಬಡತನ ತೊಲಗಲಿ:
ಬ್ರಿಟಿಷರ ಕಾಲದಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎನ್ನುತ್ತಿದ್ದೆವು. ಆದರೆ, ಈಗ ಅಸಮಾನತೆ, ಜಾತೀಯತೆ, ಬಡತನವು ಭಾರತ ಬಿಟ್ಟು ತೊಲಗಲಿ ಎಂದು ಹೇಳಬೇಕಿದೆ. ಇದನ್ನು ನಾವು ಸಮರ್ಥವಾಗಿ ಮಾಡಿದ್ದೇ ಆದಲ್ಲಿ ಭಾರತವು ‘ಫಿಟ್ ಇಂಡಿಯಾ’ ಆಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

‘ಗಡಿಯಲ್ಲಿ ಯೋಧರು ಜೀವತ್ಯಾಗ ಮಾಡಿ ದೇಶ ಕಾಯುತ್ತಿದ್ದಾರೆ. ಆದರೆ, ದೇಶದೊಳಗೆ ಕೆಲವು ಘಾತುಕ ಶಕ್ತಿಗಳು ಕೈಯಲ್ಲಿ ಬಂದೂಕುಗಳನ್ನು ಹಿಡಿದು ಅಖಂಡತೆಯನ್ನು ಹಾಳು ಮಾಡಲು ಪಿತೂರಿ ಹೂಡಿವೆ. ಬಂದೂಕಿನ ಬದಲಾಗಿ ನಮಗೆ ಲೇಖನಿ ಬೇಕು. ದೇಶದ ಪ್ರತಿಯೊಬ್ಬರೂ ಶಿಕ್ಷಿತರಾದಾಗ ಮಾತ್ರ ಸರ್ವರ ಅಭ್ಯುದಯ ಸಾಧ್ಯವಾಗುವುದು’ ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿರುವ ‘ಭಾರತದ ಸ್ವಾತಂತ್ರ್ಯ ಚಳವಳಿ– ಒಂದು ಪಕ್ಷಿನೋಟ’ ಕಿರುಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು.

ಜಿಲ್ಲಾಧಿಕಾರಿ ಡಿ.ರಂದೀಪ್, ಪೊಲೀಸ್ ಕಮಿಷನರ್ ಬಿ.ದಯಾನಂದ, ‘ಮುಡಾ’ ಅಧ್ಯಕ್ಷ ಕೆ.ಆರ್.ಮೋಹನಕುಮಾರ್, ವಿಧಾನ ಪರಿಷತ್ ಉಪಸಭಾಪತಿ ಎಂ.ಮರಿತಿಬ್ಬೇಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.