ಗುಲ್ಬರ್ಗ: ಇಲ್ಲಿಗೆ ಸಮೀಪದ ಶ್ರೀನಿವಾಸ ಸರಡಗಿ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಜೂನ್ ಮೊದಲ ವಾರದಿಂದ ವಿಮಾನ ಸಂಚಾರ ಶುರುವಾಗಲಿದೆ.

ಗುಲ್ಬರ್ಗ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಿ, ವಿಮಾನಯಾನಕ್ಕೆ ಸಜ್ಜುಗೊಳಿಸುವ ಹೊಣೆ ಹೊತ್ತಿರುವ ~ರೀಜನಲ್ ಏರ್ಪೋರ್ಟ್ ಹೋಲ್ಡಿಂಗ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್~ನ (ರಾಹಿ) ವಾಣಿಜ್ಯ ಸೇವೆ ವಿಭಾಗದ ಮುಖ್ಯಸ್ಥ ಸೌರಭ ಶಹಾ ಬುಧವಾರ ಇಲ್ಲಿ ಈ ವಿಷಯ ತಿಳಿಸಿದರು.

ಒಟ್ಟು 692 ಎಕರೆ ಪ್ರದೇಶದಲ್ಲಿ 187 ಕೋಟಿ ರೂಪಾಯಿ ವೆಚ್ಚದಲ್ಲಿ ಗುಲ್ಬರ್ಗ ವಿಮಾನನಿಲ್ದಾಣ ನಿರ್ಮಾಣವಾಗುತ್ತಿದೆ. 45 ಮೀಟರ್ ಅಗಲ ಹಾಗೂ 1,900 ಮೀಟರ್ ಉದ್ದದ ರನ್ವೇ ಹಾಗೂ ನಿಲ್ದಾಣದ ಆವರಣ ಗೋಡೆ ಕಾಮಗಾರಿ ಮುಕ್ತಾಯಗೊಂಡಿದೆ. ಉಳಿದ ಕೆಲಸಗಳು ಮೇ 31ರೊಳಗೆ ಮುಗಿಯಲಿದ್ದು, ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ವಿಮಾನ ಹಾರಾಟಕ್ಕೆ ಚಾಲನೆ ನೀಡಲಾಗುವದು ಎಂದು ಅವರು ವಿವರಿಸಿದರು.

ಆರಂಭದಲ್ಲಿ ಗುಲ್ಬರ್ಗದಿಂದ ಬೆಂಗಳೂರು, ನಂತರ ಹೈದರಾಬಾದ್ ಹಾಗೂ ಮುಂಬೈಗೆ ಯಾನ ನಡೆಸಲಾಗುವುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.