ಸೋಮವಾರ, ಜನವರಿ 27, 2020
27 °C

ಗೃಹಿಣಿ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ತಾಲ್ಲೂಕಿನ ಮೂಟಿಪಾಳ್ಯ ಗ್ರಾಮದ ತೋಟದ ಮನೆಯಲ್ಲಿ ಯುವಕರಿಬ್ಬರು ಗೃಹಿಣಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.ಮೂಟಿಪಾಳ್ಯ ಗ್ರಾಮದ ರುದ್ರ ಹಾಗೂ ಯೋಗೇಶ್ ಅತ್ಯಾಚಾರ ಎಸಗಿದ ಆರೋಪಿಗಳು. ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿದ್ದ 38 ವರ್ಷದ ಮಹಿಳೆ ಮೇಲೆ ಈ ಇಬ್ಬರೂ ಮಂಗಳವಾರ ರಾತ್ರಿ ಅತ್ಯಾಚಾರ ಎಸಗಿದ್ದಾರೆ. ಮಂಗಳವಾರ ಕೆಲಸದ ನಿಮಿತ್ತ ಆಕೆಯ ಪತಿ ಆಂಧ್ರಕ್ಕೆ ಹೋಗಿದ್ದರು. ಇದೇ ಸಮಯ ನೋಡಿಕೊಂಡ ಆರೋಪಿಗಳು ತೋಟದ ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಪತಿ ಮರಳಿ ಮನೆಗೆ ಬಂದ ಮೇಲೆ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)