ಸೋಮವಾರ, ಜೂನ್ 21, 2021
21 °C
ಏಷ್ಯಾಕಪ್‌ ಕ್ರಿಕೆಟ್‌: ಭಾರತದ ಫೈನಲ್‌ ಹಾದಿ ದುರ್ಗಮ

ಗೆಲುವು ಕಿತ್ತುಕೊಂಡ ಪಾಕಿಸ್ತಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ (ಪಿಟಿಐ): ಕೊನೆಯ ಓವರ್‌ವರೆಗೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ಎದುರು ಒಂದು ವಿಕೆಟ್‌ನ ಸೋಲು ಅನುಭವಿಸಿತು.



ಷೇರ್‌ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 245 ರನ್‌ ಪೇರಿಸಿತು. ಪಾಕ್‌ ತಂಡ 49.4 ಓವರ್‌ಗಳಲ್ಲಿ 9 ವಿಕೆಟ್‌ಗೆ 249 ರನ್‌ ಗಳಿಸಿ ರೋಚಕ ಗೆಲುವು ಪಡೆಯಿತು.



ಪಾಕ್‌ ತಂಡದ ಗೆಲುವಿಗೆ ಅಂತಿಮ ಓವರ್‌ನಲ್ಲಿ 10 ರನ್‌ಗಳು ಬೇಕಿದ್ದವು. ಆರ್‌. ಅಶ್ವಿನ್‌ ಎಸೆದ ಓವರ್‌ನ ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಶಾಹಿದ್‌ ಅಫ್ರಿದಿ (34, 18 ಎಸೆತ) ಭರ್ಜರಿ ಸಿಕ್ಸರ್‌ ಸಿಡಿಸಿ ಪಾಕ್‌ ತಂಡದ ಗೆಲುವಿಗೆ ಕಾರಣರಾದರು.



ಅಮಿತ್‌ ಮಿಶ್ರಾ (28ಕ್ಕೆ 2) ಒಳ­ಗೊಂಡಂತೆ ಭಾರತದ ಬೌಲರ್‌ಗಳು ಕೊನೆ­ಯವರೆಗೂ ಪಾಕ್‌ ಬ್ಯಾಟ್ಸ್‌­ಮನ್‌ಗಳ ಮೇಲೆ ಒತ್ತಡ ಹೇರಿದ್ದರು. ಆದರೆ, ಅಂತಿಮ ಓವರ್‌ನಲ್ಲಿ ಪಾಕ್‌ ತಂಡ ಗೆಲುವನ್ನು ಭಾರತದ ಕೈಯಿಂದ ಕಿತ್ತುಕೊಂಡಿತು.



ಸೋಲು ಅನುಭವಿಸಿದ ಕಾರಣ ವಿರಾಟ್‌ ಕೊಹ್ಲಿ ಬಳಗ ಫೈನಲ್‌ ಪ್ರವೇಶಿ­ಸುವ ಸಾಧ್ಯತೆ  ಕಡಿಮೆ­ಯಾಗಿದೆ. ಪಾಕಿಸ್ತಾನ (9) ಮತ್ತು ಶ್ರೀಲಂಕಾ (8) ತಂಡಗಳು ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್‌ ಹೊಂದಿರುವ ಭಾರತ ಮೂರನೇ ಸ್ಥಾನದಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.