`ಜಾದೂಗೂಡದಿಂದ ಬಂದೀತು ಗೋಗಿಯ ಪಾಶ~ ಎಂಬ ನಾಗೇಶ್ ಹೆಗಡೆ (ವಿಜ್ಞಾನ ವಿಶೇಷ ಸೆ. 8) ಗೋಗಿ ಗ್ರಾಮದ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಜಾಗೃತಿಯ ಸಂಕೇತವಾಗಿದೆ.

ಯುರೇನಿಯಂ ಗಣಿಗಾರಿಕೆಯು ಯಾವ ರೀತಿ ನಡೆದಿದೆ. ಅದರ ಪರಿಣಾಮ ಏನು? ವಿಕಿರಣ ಸೋರಿಕೆಯಿಂದ ಆಗುವ ದುರಂತಗಳು ಹೇಗಿರುತ್ತೆ ಎನ್ನುವುದು ಇಲ್ಲಿನ ಜನಸಾಮಾನ್ಯರಿಗೆ ತಿಳಿದಿರುವುದ್ಲ್ಲಿಲ.

ಗಣಿಗಾರಿಕೆಗೆ ಸಂಬಂಧಿಸಿದ ಯಾವ ಕಾರ್ಯಕ್ರಮವಾಗಲಿ, ಯೂ.ಸಿ.ಎಲ್. ಕಂಪೆನಿಯವರು ಹೇಳಿದ್ದೇ ಸರಿ ಎನ್ನುವಂತಾಗಿತ್ತು. ಇತ್ತ ಜನ ಸಾಮಾನ್ಯರಿಗೆ ಸಾಮಾಜಿಕ ಕಾರ್ಯಕ್ರಮವನ್ನು ಹೇಳಿ ಜನರ ಬಾಯಿ ಮುಚ್ಚಿಸುವಂತಾಗಿತ್ತು.

ಆದರೆ ಸೆ. 10 ರಂದು ನಡೆದ ಸಭೆ ಅಸಿಸ್ಟೆಂಟ್ ಕಮೀಷನರ್ ಹಾಗೂ ಅನಂತ ಹೆಗಡೆಯವರು ಬಂದಾಗ `ಜಾದೂಗೂಡದಿಂದ ಬಂದೀತು ಗೋಗಿಯ ಪಾಶ~ ಎಂಬ ಲೇಖನ ಪ್ರತಿಯನ್ನು ಸುಮಾರು ಸಹಸ್ರ ಝರಾಕ್ಸ್ ಪ್ರತಿಗಳು ಹಿಡಿದು ಅವರ ಮುಂದೆ ಧ್ವನಿ ಎತ್ತಲು ಈ ಲೇಖನ ತುಂಬಾ ಸಹಕಾರಿಯಾಯಿತು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯುರೆನಿಯಂ ನಿಕ್ಷೇಪದ ಗಣಿಗಾರಿಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು ಮತ್ತು ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು.

ಒಂದು ವೇಳೆ ದೇಶಕ್ಕೆ ಯುರೇನಿಯಂ ಉಪಯೋಗ ಇದ್ದು ಯಾವುದೇ ಕಾರಣಕ್ಕೆ ಈ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಆಗದೆ ಇದ್ದರೆ ನಮ್ಮ ಜೀವ ವೈವಿಧ್ಯಮಯ ದೃಷ್ಟಿಯಿಂದ ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ನಮ್ಮ ಊರು ಬೇರೊಂದು ಕಡೆ ಸ್ಥಳಾಂತರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.