ಗೋವಾ: ಅಕ್ರಮ ಗಣಿಗಾರಿಕೆ ನಡೆದಿಲ್ಲ- ಕಾಮತ್

ಬುಧವಾರ, ಮೇ 22, 2019
29 °C

ಗೋವಾ: ಅಕ್ರಮ ಗಣಿಗಾರಿಕೆ ನಡೆದಿಲ್ಲ- ಕಾಮತ್

Published:
Updated:

ಪಣಜಿ (ಪಿಟಿಐ): ಗೋವಾದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂದು ಆ ರಾಜ್ಯದ ಮುಖ್ಯಮಂತ್ರಿ ದಿಗಂಬರ ಕಾಮತ್ ಸೋಮವಾರ ಹೇಳಿದ್ದಾರೆ.ಗೋವಾದಲ್ಲಿ ಬಹು ಕೋಟಿ ರೂಪಾಯಿಗಳ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ವಿವಾದದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, `ನಾನು ಸ್ವತಃ  ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಹೋರಾಟಗಾರನಾದ ಕಾರಣ ರಾಜ್ಯದಲ್ಲಿ ಅಂತಹ ಯಾವುದೇ ಚಟುವಟಿಕೆ ನಡೆಯಲು ಬಿಡುವುದಿಲ್ಲ~ ಎಂದಿದ್ದಾರೆ.`ಕಳೆದ ಒಂದು ದಶಕದಿಂದ ನಾನೇ ಗಣಿ ಇಲಾಖೆ ಸಚಿವನಾಗಿದ್ದೇನೆ. ಅಕ್ರಮ ಗಣಿಗಾರಿಕೆಯನ್ನು ಯಾವತ್ತೂ ಬೆಂಬಲಿಸಿಲ್ಲ. ಯಾವೊಂದು ಪರವಾನಗಿ ನವೀಕರಿಸಿಲ್ಲ ಅಥವಾ ಹೊಸದಾಗಿ ಯಾವುದೇ ಗುತ್ತಿಗೆ ನೀಡಿಲ್ಲ~ ಎಂದು ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದರು.ಗೋವಾದಲ್ಲಿ 90 ಗಣಿ ಗುತ್ತಿಗೆಗಳಿದ್ದು, ಇವುಗಳಿಂದ ಅಂದಾಜು 5.4 ಕೋಟಿ ಮೆಟ್ರಿಕ್ ಟನ್‌ಗಳಷ್ಟು ಅದಿರು ರಫ್ತು ಮಾಡಲಾಗುತ್ತಿದೆ.

ಹೆಗ್ಡೆ ನಕಾರ

ಪಣಜಿ (ಪಿಟಿಐ): `ಗೋವಾದ ಲೋಕಾಯುಕ್ತನಾಗಲು ನಾನು ಆಸಕ್ತಿ ಹೊಂದಿಲ್ಲ~ ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಸೋಮವಾರ ಹೇಳಿದ್ದಾರೆ.

`ಈ ಬಗ್ಗೆ ಗೋವಾ ಸರ್ಕಾರದಿಂದ ಪ್ರಸ್ತಾವ ಬಂದರೂ ನಾನು ಅದನ್ನು ಒಪ್ಪುವುದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry