ನವದೆಹಲಿ: ‘ಹಣಕ್ಕಾಗಿ ಮತ’ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿ ಲೋಕಸಭೆಯಲ್ಲಿ ಸಭಾತ್ಯಾಗ ಮಾಡಿದ ವಿರೋಧ ಪಕ್ಷಗಳನ್ನು ಜೆಡಿಎಸ್ ಬೆಂಬಲಿಸಲಿಲ್ಲ. ಪ್ರತಿಪಕ್ಷಗಳ ಸಭಾತ್ಯಾಗಕ್ಕೆ ಮುನ್ನ ಜೆಡಿಎಸ್ನ ಎಚ್.ಡಿ. ದೇವೇಗೌಡರು ಏನೋ ಹೇಳಲು ಎದ್ದು ನಿಂತರಾದರೂ ಅವಕಾಶ ಸಿಗಲಿಲ್ಲ. ಇದರಿಂದ ಗೌಡರು ಸದನದಲ್ಲೇ ಕುಳಿತುಕೊಂಡರು.

ಕರ್ನಾಟಕ ಮುಖ್ಯಮಂತ್ರಿಯ ಭ್ರಷ್ಟಾಚಾರ ಮುಚ್ಚಿಕೊಂಡು ಯುಪಿಎ ಸರ್ಕಾರದ ಭ್ರಷ್ಟಾಚಾರ ಕುರಿತು ಮಾತನಾಡುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿರುವ ಬಿಜೆಪಿ ಜತೆಗೂಡಲು ತಮಗೆ ಇಷ್ಟವಿಲ್ಲದ್ದರಿಂದ ಸಭಾತ್ಯಾಗ ಮಾಡಲಿಲ್ಲ ಎಂದರು.

ಬಿಜೆಪಿ ಅಧ್ಯಕ್ಷ ನಿತಿನ್ಗಡ್ಕರಿ ಮುಖ್ಯಮಂತ್ರಿ ಭ್ರಷ್ಟಚಾರ ಮುಚ್ಚಿ ಹಾಕುತ್ತಿ ದ್ದಾರೆ. ಯಡಿಯೂರಪ್ಪ ಅನೈತಿಕ ಕೆಲಸ ಮಾಡಿದ್ದಾರೆ ವಿನಾ ಕಾನೂನುಬಾಹಿರವಾಗಿ ನಡೆದಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆದಿರುವ ಅಕ್ರಮಗಳ ಮೇಲೆ ಕ್ರಮ ಕೈಗೊಳ್ಳದೆ ಮನಮೋಹನ್ಸಿಂಗ್ ರಾಜೀನಾಮೆ ಆಗ್ರಹಿಸುವ ಬಿಜೆಪಿ ಜತೆ ಕೈ ಜೋಡಿಸಲು ಹೇಗೆ ಸಾಧ್ಯ ಎಂದು ಗೌಡರು ಪ್ರಶ್ನಿಸಿದರು.

ಸೋಮನಾಥ ಚಟರ್ಜಿ ಸ್ಪೀಕರ್ ಆಗಿದ್ದಾಗ ರಚಿಸಿದ್ದ ಕಿಶೋರ್ಚಂದ್ರ ದೇವ್ ಸಮಿತಿ ನೀಡಿರುವ ವರದಿ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪೀಕರ್ ಅವರನ್ನು ಕೇಳಲು ಬಯಸಿದ್ದೆ. ಆದರೆ ಅವಕಾಶ ಸಿಗಲಿಲ್ಲ ಎಂದು ವಿವರಿಸಿದರು. ಎಡ ಪಕ್ಷಗಳ ಬಗ್ಗೆ ತಮಗೆ ಅಪಾರ ಗೌರವವಿದೆ. ಈ ಪಕ್ಷಗಳ ಜತೆ ಜೆಡಿಎಸ್ ಉತ್ತಮ ಸಂಬಂಧ ಹೊಂದಿದೆ ಎಂದು ಹೇಳಲು ದೇವೇಗೌಡರು ಮರೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.