ಶನಿವಾರ, ಜೂನ್ 12, 2021
28 °C

ಗೌರವ ಹೆಚ್ಚಿಸಿದ ರಾಹುಲ್: ಜಿಆರ್‌ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕೌಶಲಪೂರ್ಣವಾಗಿ ಆಡಿ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಇದನ್ನು ರಾಹುಲ್ ದ್ರಾವಿಡ್ ಯಶಸ್ವಿಯಾಗಿ ಮಾಡಿದ್ದಾರೆ. ಇದರಿಂದ ಕ್ರಿಕೆಟ್‌ನ ಗೌರವವನ್ನೂ ಹೆಚ್ಚಿಸಿದ್ದಾರೆ~ ಎಂದು ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಶ್ಲಾಘಿಸಿದರು.`ವೆಸ್ಟ್ ಇಂಡೀಸ್, ಇಂಗ್ಲೆಂಡ್ ಪ್ರವಾಸದಲ್ಲಿ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಆದರೆ, ಆಸ್ಟ್ರೇಲಿಯಾದಲ್ಲಿ ವಿಫಲರಾಗಿದ್ದರು. ಏನೇ ಆಗಲಿ ಕರ್ನಾಟಕದ ಆಟಗಾರ ಇನ್ನೂ ಕೆಲ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇರಬೇಕಿತ್ತು~ ಎಂದು ಅವರು ಅಭಿಪ್ರಾಯ ಪಟ್ಟರು.ಈ ವಿಷಯವಾಗಿ ದ್ರಾವಿಡ್ ಬಳಿ ಮಾತನಾಡಿದ್ದೆ. ಆದರೆ, `ನಿವೃತ್ತಿ ನಿರ್ಧಾರವನ್ನು ನಾನು ಈಗಾಗಲೇ ತಗೆದುಕೊಂಡಿದ್ದೇನೆ. ಯುವ ಆಟಗಾರರಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ನನ್ನ ಬಯಕೆ~ ಎಂದು ಅವರು ಹೇಳಿದ್ದರು ಎನ್ನುವ ವಿಷಯವನ್ನು ವಿಶ್ವನಾಥ್ ತಿಳಿಸಿದರು.ಕ್ರಿಕೆಟ್ ಜಗತ್ತು ರಾಹುಲ್ ಆವರ ಆಟವನ್ನು `ಮಿಸ್~ ಮಾಡಿಕೊಳ್ಳುತ್ತಿದೆ. ದೀರ್ಘ ಅವಧಿ ದೇಶಕ್ಕಾಗಿ ಆಡಿದ್ದಾರೆ. ಆದರೂ ದೈಹಿಕವಾಗಿ ಫಿಟ್ ಆಗಿದ್ದಾರೆ. ಆಸೀಸ್‌ನಲ್ಲಿ ಪ್ರಬಲ ಬೌಲರ್‌ಗಳ ಸವಾಲನ್ನು ಎದುರಿಸಿದ ಕಾರಣ ಅಲ್ಲಿ ವೈಫಲ್ಯ ಅನುಭವಿಸಿದರು ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.