ತುಂಗ್ (ಸಿಕ್ಕಿಂ) (ಪಿಟಿಐ): ಭೂಕಂಪದಿಂದ ತತ್ತರಿಸಿರುವ ಸಿಕ್ಕಿಂನ ಉತ್ತರ ಭಾಗದ ಚುಂಗ್ಥಾಂಗ್ ಗ್ರಾಮವನ್ನು ತಲುಪಿರುವ ಸೇನಾ ಪಡೆ, ತೀಸ್ತಾ ಜಲವಿದ್ಯುತ್ ಯೋಜನೆಯ ಸಿಬ್ಬಂದಿ ಸೇರಿದಂತೆ ಗ್ರಾಮದ ಒಟ್ಟು 552 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಭೂಕುಸಿತದಿಂದ ಹೊರ ಪ್ರಪಂಚದೊಂದಿಗೆ ರಸ್ತೆ ಸಂಪರ್ಕ ಕಳೆದುಕೊಂಡಿರುವ ಗ್ರಾಮಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿರುವ ಯೋಧರು, ಗ್ರಾಮಸ್ಥರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದ್ದು, ಇದಕ್ಕೆ ಇನ್ನೂ ಕನಿಷ್ಠ ಹತ್ತು ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಕಡಿದು ಹೋಗಿರುವ ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಕಲ್ಪಿಸುವ ಯತ್ನ ಸಾಗಿದ್ದು, ಸೇನಾ ಪಡೆ ಜನರಿಗೆ ಆಹಾರ ಪೂರೈಸುತ್ತಿದೆ.

ಅಳಿದುಳಿದ ಮನೆಗಳಲ್ಲಿ ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ನಂತರ ಅವರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗುವುದು ಎಂದು ಪಡೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಚುಂಗ್ಥಾಂಗ್ನಲ್ಲಿ ಎಷ್ಟು ಜನ ಸಾವಿಗೀಡಾಗಿದ್ದಾರೆ ಎಂಬ ನಿಖರ ಅಂಕಿ, ಅಂಶ ಪತ್ತೆಯಾಗಿಲ್ಲ. ಆದರೆ, ತೀಸ್ತಾ- ಊರ್ಜಾ ಕಂಪೆನಿಯ 28 ಸಿಬ್ಬಂದಿಯ ಪೈಕಿ 17 ಜನ ಮೃತಪಟ್ಟಿದ್ದಾರೆ. ವ್ಯಕ್ತಿಯೊಬ್ಬ ಕಾಣೆಯಾಗಿದ್ದು, ಹತ್ತು ಸಿಬ್ಬಂದಿಗೆ ಗಾಯಗಳಾಗಿವೆ. ಅವರನ್ನು ಹೆಲಿಕಾಪ್ಟರ್ ಮೂಲಕ ಸಿಲಿಗುರಿಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಭೂಕಂಪದ ಕೇಂದ್ರ ಉತ್ತರ ಸಿಕ್ಕಿಂನಲ್ಲಿ ಕೇಂದ್ರೀಕೃತವಾದ ಕಾರಣ ಈ ಭಾಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಇದರ ಹೊರತಾಗಿಯೂ ಇನ್ನೂ 400 ಜನರು ಲಿನ್ಜೇ, ಟೆ ಸಾಕ್ಯಾಂಗ್ ಮತ್ತು ಪೆನ್ಟಾಂಗ್ಗಳಂತಹ ಸಂಪರ್ಕ ಕಡಿದು ಹೋಗಿರುವ ಗ್ರಾಮಗಳಲ್ಲಿ ಸಿಲುಕಿರುವ ಸಾಧ್ಯತೆಗಳಿವೆ. ಭೂಕಂಪ ಸಂಭವಿಸಿ ನಾಲ್ಕು ದಿನಗಳಾದರೂ ಇನ್ನೂ ಸೇನಾ ಪಡೆಗೆ ಈ ಗ್ರಾಮಗಳಿಗೆ ತೆರಳಲು ಸಾಧ್ಯವಾಗಿಲ್ಲ.

`ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಆಹಾರ ಪೊಟ್ಟಣ, ಔಷಧಿ, ಹಾಸಿಗೆ, ಹೊದಿಕೆಗಳಂತಹ ಅಗತ್ಯ ವಸ್ತುಗಳೊಂದಿಗೆ ರಾಜ್ಯದ ವಿವಿಧ ಗ್ರಾಮಗಳಿಗೆ ತೆರಳಿವೆ. ಬಹುತೇಕ ಸದಸ್ಯರು ನಡೆದುಕೊಂಡೇ ಗ್ರಾಮಗಳನ್ನು ತಲುಪಿದ್ದಾರೆ. ಅವಶೇಷಗಳ ಅಡಿ ಸಿಲುಕಿರುವ ಜನರು ಇನ್ನೂ ಬದುಕುಳಿದಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಬುಡಕಟ್ಟು ಜನಾಂಗದ ಜನರು ಗೆಡ್ಡೆ, ಗೆಣಸು ತಿಂದು ಜೀವ ಬಿಗಿ ಹಿಡಿದಿದ್ದಾರೆ~ ಎಂದು ಸ್ವಯಂಸೇವಾ ಸಂಸ್ಥೆ ಸಂಯೋಜಕ ಬಿ.ಬಿ.ರಾಯ್ ಎಂಬುವವರು ತಿಳಿಸಿದ್ದಾರೆ.

50 ಕೋಟಿ ಅನುದಾನ: ಸಿಕ್ಕಿಂನಲ್ಲಿ ಪರಿಹಾರ ಕಾರ್ಯಾಚರಣೆ ಮತ್ತು ಪುನರ್ವಸತಿಗಾಗಿ ಕೇಂದ್ರ ಸರ್ಕಾರ ತಕ್ಷಣ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಪರಿಸ್ಥಿತಿ ಅವಲೋಕಿಸಿ ಪುನರ್ವಸತಿ ಯೋಜನೆ ರೂಪಿಸಲಾಗುವುದು ಎಂದು ಕೇಂದ್ರ ಸಚಿವ ಚಿದಂಬರಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.