ಮುನಿರಾಬಾದ್: ಇಲ್ಲಿಗೆ ಸಮೀಪ ಹಿಟ್ನಾಳ ಗ್ರಾಮದ ಗ್ರಾಮದೇವತೆ ಶ್ರೀದುರ್ಗಾದೇವಿಯ ಪ್ರಥಮ ಜಾತ್ರೆಯ ಅಂಗವಾಗಿ ಸೋಮವಾರ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತ್ತು.

ಪ್ರಾಚೀನ ದೇವಸ್ಥಾನದಲ್ಲಿ ಹತ್ತು ತಿಂಗಳ ಹಿಂದೆ ನೂತನ ವಿಗ್ರಹ ಪ್ರತಿಷ್ಠಾಪಿಸಿ, ದೇವಸ್ಥಾನವನ್ನು ಕೂಡ ನವೀಕರಿಸಲಾಗಿದೆ. ಮುಖ್ಯರಸ್ತೆಯಿಂದ ದೇವಸ್ಥಾನದವರೆಗೆ ಬಣ್ಣದ ಲೈಟುಗಳನ್ನು ಹಾಕಲಾಗಿತ್ತು. ಪ್ರತಿ ಮನೆಯಲ್ಲೂ ಜಾತ್ರೆಯ ಸಂಭ್ರಮವಿತ್ತು.

ಜಾತ್ರೆಯ ಅಂಗವಾಗಿ ಸೋಮವಾರ ಬೆಳಿಗ್ಗೆ ಡೊಳ್ಳು, ಭಜಂತ್ರಿ, ನಾರಿಯರ ಕುಂಭ ಕಳಸದೊಂದಿಗೆ ದೇವಿಯ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನಂತರ ದೇವಸ್ಥಾನದಲ್ಲಿ ದೇವಿಗೆ ಹೂವುಗಳಿಂದ ಅಲಂಕರಿಸಿ ಪಂಚಾಮೃತ ಅಭಿಷೇಕ, ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಮನೆಯಿಂದ ಹೋಳಿಗೆಯ ನೈವೇದ್ಯವನ್ನು ದೇವಸ್ಥಾನಕ್ಕೆ ತಂದು ದೇವಿಗೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯೆ ವಿಶಾಲಾಕ್ಷಿ ವಿಜಯಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು, ಪ್ರಮುಖರಾದ ಕೆ.ರಾಜಣ್ಣ, ರಾಮಣ್ಣ ಕಂಬಾರ, ಪುರುಷೋತ್ತಮ ಬೂದಗುಂಪಿ, ಮಲ್ಲಣ್ಣ ಅರಕೇರಿ, ಹುಲುಗಪ್ಪ, ಪ್ರದೀಪ್ ಪಲ್ಲೇದ, ಅಶೋಕ ಈಳಿಗೇರ, ಬಿ.ನಾರಾಯಣ, ಚಂದ್ರಪ್ಪ, ಬುಡೆನ್ಸಾಬ, ಕೊಟ್ರಯ್ಯ, ಗಂಗಾಧರಯ್ಯ ಇತರರು ಇದ್ದರು. ಮಧ್ಯಾಹ್ನ ಮಹಾ ಪ್ರಸಾದ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.